ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿಗಾಗಿ ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ವಾಕ್ ಆ್ಯಂಡ್ ರನ್

ವಿಜಯಪುರ: ಡ್ರಗ್ಸ್ ಮತ್ತು ಮಾದಕ ದ್ರವ್ಯ ಸೇವೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ನಗರದಲ್ಲಿ ವಾಕ್ ಆ್ಯಂಡ್ ರನ್ ನಡೆಸಿದರು.

ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ವಾಟರ್ ಟ್ಯಾಂಕ್, ಗೋದಾವರಿ ಹೋಟೆಲ್ ವರೆಗೆ ನಡೆಯಿತು.  ನಂತರ ಅಲ್ಲಿಂದ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿತು.  ಈ ಸಂದರ್ಭದಲ್ಲಿ ಕೈಯ್ಯಲ್ಲಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಭಿತ್ತಿಪತ್ರ ಹಿಡಿದ ಸಿಬ್ಬಂದಿ ಜನಜಾಗೃತಿ ಮೂಡಿಸಿದರು.

ಡ್ರಗ್ಸ್ ಮತ್ತು ಮಾದಕ ದ್ರವ್ಯಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ವಿಜಯಪುರದಲ್ಲಿ ಪೊಲೀಸರು ಜನಜಾಗೃತಿಗಾಗಿ ವಾಕ್ ಆ್ಯಂಡ್ ರನ್ ನಡೆಸಿದರು

ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

 

ಈ ಜಾಥಾ ಹಾಗೂ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಶಂಕರ ಕೆ. ಮಾರಿಹಾಳ, ಕೆ. ಎಸ್. ಹಟ್ಟಿ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಹಾಗೂ ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು, ಡಿಎಆರ್ ಘಟಕದ ಅಧಿಕಾರಿಗಳು ಹಾಗೂ ಸುಮಾರು 250 ಜನ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌