ಅಥಣಿ ಶ್ರೀ ಮೋಟಗಿಮಠದ ಬಸವಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಎಂ. ಎಸ್. ಮದಭಾವಿಗೆ ಅಭಿನಂದನೆಗಳ ಮಹಾಪೂರ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ. ಎಂ. ಎಸ್. ಮದಭಾವಿ ಅವರಿಗೆ ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿಮಠ ಈ ವರ್ಷದ ಬಸವಭೂಷಣ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಉತ್ತರ ಕರ್ನಾಟಕದ ಗಡಿಯಲ್ಲಿರುವ ಶ್ರೀ ಮೋಟಗಿಮಠವು ಶತಮಾನಗಳಿಂದ ನಾಡು, ನುಡಿ, ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸುತ್ತ ಬಂದಿದೆ. ಪ್ರತಿವರ್ಷ ಶರಣಸಂಸ್ಕೃತಿ ಗಡಿನಾಡ ನುಡಿಹಬ್ಬ ಆಚರಿಸುವ ಈ ಮಠ ಗಡಿಯಲ್ಲಿ ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿದೆ. ಭಾಷಾ ಭಾವೈಕ್ಯತೆ, ಧರ್ಮ, […]
ತ್ಯಾಗವೀರ, ಜ್ಞಾನದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಸಮಾಜಮುಖಿ ಕಾರ್ಯಗಳಿಗಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ- ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ
ವಿಜಯಪುರ: ತ್ಯಾಗವೀರ, ಜ್ಞಾನ ದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದು ಕವಲಗಿ ಕೂಡವಕ್ಕಲಿಗ ಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಮತ್ತು ಶ್ರೀ ಸಿರಸಂಗಿ ಲಿಂಗರಾಜ ವೃತ್ತ ಉದ್ಗಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಅಂದಿನ ಕಾಲದಲ್ಲಿ ರಾಜ್ಯದಲ್ಲಿ […]
ವಿಜಯಪುರ ಜಿಲ್ಲೆಯ ಗಬಸಾವಳಗಿ ಬಳಿ ಹೊತ್ತಿ ಬೈಕಿಗೆ ಢಿಕ್ಕಿ ಹೊಡೆದು ಹೊತ್ತು ಉರಿದ ಸರಕಾರಿ ಬಸ್ಸು
ವಿಜಯಪುರ: ಬೈಕಿಗೆ ಢಿಕ್ಕಿ ಹೊಡೆದ ಸರಕಾರಿ ಬಸ್ಸೊಂದು ಹೊತ್ತು ಉರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಮೊರಟಗಿಯಿಂದ ಸಿಂದಗಿಗೆ ಬರುತ್ತಿದ್ದ ಬಸ್ಸಿಗೆ ಸಿಂದಗಿಯಿಂದ ಮೊರಟಗಿಯತ್ತ ಹೊರಟಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತದ ಸಂಭವಿಸಿದೆ. ಢಿಕ್ಕಿಯ ಬಳಿಕ ಬೈಕ್ ಬಸ್ಸಿನಡಿ ಸಿಲುಕಿದೆ. ಆಗ ಹೊತ್ತಿದ ಬೆಂಕಿಯಿಂದಾಗಿ ಬಸ್ಸು ಸುಟ್ಟು ಭಸ್ಮವಾಗಿದೆ. ಆದರೆ, ಅದೃಷ್ಟವಶಾತ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. KA- 28/F- 2469 ನಂಬರಿನ […]
ಗುಮ್ಮಟ ನಗರಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆಗೆ ಕ್ರಮ ಕೈಗೊಳ್ಳಿ- ಡಿಸಿ, ಪೌರಾಯುಕ್ತರಿಗೆ ಶಾಸಕ ಸುನೀಲಗೌಡ ಪಾಟೀಲ ಪತ್ರ
ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ವಿಜಯಪುರ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ವಿಜಯಪುರ ನಗರವು ಈಗ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಅಲ್ಲದೇ, ಮಹಾನಗರಪಾಲಿಕೆ ಸುಮಾರು 10ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ವಿಜಯಪುರ ನಗರದ ಜನಸಂಖ್ಯೆ ಸುಮಾರು 5 ಲಕ್ಷ ತಲುಪಿದೆ. ನಗರದಲ್ಲಿ ನಾನಾ ಸಮುದಾಯದ ಜನರು ಶವಗಳನ್ನು ಹೂಳುವ ಬದಲಾಗಿ ದಹನ ಮಾಡುವ ಸಂಪ್ರದಾಯವಿದೆ. ಈ ಸಮುದಾಯಗಳ ಜನ ನಿಧನರಾದವರ ಅಂತ್ಯಕ್ರಿಯೆ ಸಮಯದಲ್ಲಿ […]
ವಿಜಯಪುರದಲ್ಲಿ ವಾರಿ ಸೌರಶಕ್ತಿ ಸಾಯಿ ಎಂಟರಪ್ರೈಸಿಸ್ ಪ್ರಾಂಚೈಸಿ ಲೋಕಾರ್ಪಣೆ ಮಾಡಿದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ನಗರದಲ್ಲಿ ವಾರಿಸೌರ ಶಕ್ತಿ ಕೇಂದ್ರದ ಸಾಯಿ ಎಂಟರ್ ಪ್ರೈಸಸ್ ಪ್ರಾಂಚೈಸಿ ಲೋಕಾರ್ಪಣೆ ಸಮಾರಂಭ ನಡೆಯಿತು. ಪುಲಕೇಶಿ ನಗರದಲ್ಲಿ ಬಿಜೆಪಿ ಮುಖಂಡ ಸಿದ್ದು ಬುಳ್ಳಾ ಅವರಿಗೆ ಸೇರಿದ ಈ ನೂತನ ಕೇಂದ್ರವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಮುಖಂಡ ಸಂತೋಷ ಪಾಟೀಲ ಡಂಬಳ ಮುಂತಾದವರು […]