ತ್ಯಾಗವೀರ, ಜ್ಞಾನದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಸಮಾಜಮುಖಿ ಕಾರ್ಯಗಳಿಗಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ- ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ

ವಿಜಯಪುರ: ತ್ಯಾಗವೀರ, ಜ್ಞಾನ ದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದು ಕವಲಗಿ ಕೂಡವಕ್ಕಲಿಗ ಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಮತ್ತು ಶ್ರೀ ಸಿರಸಂಗಿ ಲಿಂಗರಾಜ ವೃತ್ತ ಉದ್ಗಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಅಂದಿನ ಕಾಲದಲ್ಲಿ ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರಮಿಸಿದ್ದಾರೆ. ಜನಸೇವೆಗೆ ಹೆಸರಾದ ಅವರು, ತಮ್ಮ ತನು-ಮನ-ಧನದಿಂದ ಸಮಾಜ ಸೇವೆ ಮಾಡಿದ್ದಾರೆ ಎಂದು ಹೇಳಿದರು.

ಉಕ್ಕಲಿ ಗ್ರಾಮದಲ್ಲಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿ ಅಂಗವಾಗಿ ವೃತ್ತವನ್ನು ಶ್ರೀ ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಗಾಟಿಸಿದರು

ಈ ಸಂದರ್ಭದಲ್ಲಿ ನಾಗರದಿನ್ನಿಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು, ಉಕ್ಕಲಿ ಗ್ರಾಮದ ಮುಖಂಡರಾದ ಎ. ಎಂ. ಪಾಟೀಲ, ಬಸಪ್ಪ ಹಣಮಶೆಟ್ಟಿ, ನಾನಾಸಾಬ ಸಿಂದಗಿ, ಬಾಳು ಮಸಳಿ, ಪ್ರಕಾಶಗೌಡ ಪಾಟೀಲ, ಡಾ. ರಾಜು ಸಂಕಣ್ಣವರ, ಸಂತೋಷ ಇಂಡಿ, ಮುದುಕು ಸಿಂದಗಿ, ಧರು ಸುಸಲಾದಿ, ಮುತ್ತಪ್ಪ ನಂದಿ ಹಾಗೂ ಸಕಲ ಉಕ್ಕಲಿ ಗ್ರಾಮಸ್ತರು ಉಪಸ್ಥಿತರಿದ್ದರು.

ಪ್ರವೀಣ ಕಾಮಗೊಂಡ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮಹೇಶಗೌಡ ಪಾಟೀಲ ವಂದಿಸಿದರು.

One Response

Leave a Reply

ಹೊಸ ಪೋಸ್ಟ್‌