ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ವಿಜಯಪುರ: ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶೀತಲ ಕಿಣಗಿ ಅವರು, ಎಲ್ಲ ಗರ್ಭಿಣಿ ಮಹಿಳೆಯರು ಎಚ್ಐವಿ, ಎಚ್‌ಬಿಎಸ್‌ಎಜಿ, ಸಿಫಿಲ್ಸ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಏಡ್ಸ್ ಪ್ರೇವೆನ್ಶನ್ ಸೊಸೈಟಿ ವತಿಯಿಂದ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಪ್ರತಿಯೊಬ್ಬರಿಗೂ ಜನಜಾಗೃತಿ ಬಹಳ ಮುಖ್ಯವಾಗಿದೆ.  ಆಶಾ ಕಾರ್ಯ ಕರ್ತೆಯರು ಮನೆ ಮನೆಗೆ ಹೋಗಿ ನಿರಂತರವಾಗಿ ಮಾಹಿತಿಯನ್ನೂ ನೀಡಬೇಕು.  ಮೊದಲನೆಯ ತ್ರೈಮಾಸಿಕದಲ್ಲಿ ತಪಾಸಣೆ ಮಾಡಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ತಾಯಿಯಿಂದ ಮಗುವಿಗೆ ಎಚ್‌ಐವಿ, ಹೆಪಟೈಟಿಸ್ ಬಿ ಮತ್ತು ಸಿಫಿಲ್ಸ್ ತಡೆಯಲು ಸಾಧ್ಯವಿದೆ.  ಎಲ್ಲರೂ ಮೊದಲ ತ್ರೈಮಾಸಿಕದಲ್ಲಿ ತಪಾಸಣೆ ಮಾಡಿಸಬೇಕು.  ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರ ಸೇವನೆ ಮಾಡುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗೌರಮ್ಮ ಬೂದಿಹಾಳ, ಕೆ. ಎನ್. ಹಂಚಿನಾಳ, ಎ. ಎಸ್. ದೇವರ, ಅಲ್ ಅಮೀನ ವೈದ್ಯಕೀಯ ಮಹಾವಿದ್ಯಾಲಯದ ಪಿಪಿಟಿಸಿಟಿ ಕೇಂದ್ರದ ಆಪ್ತ ಸಮಾಲೋಚಕ ಅಮೀನ್ಪರಿ ಮುಲ್ಲಾ, ಅನ್ನಪೂರ್ಣ ಪತ್ತಾರ, ಪ್ರಯೋಗಾಲಯ ತಂತ್ರಜ್ಞ ಎಫ್. ಜೆ. ಬಗಲಿ,  ಮುಂತಾದವರು ಉಪಸ್ಥಿತರಿದ್ದರು.

ಗೌರಮ್ಮ ಬೂದಿಹಾಳ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌