ಬೆಂಗಳೂರು ಜೈಲಿನಿಂದ ಬಿಡುಗಡೆಯಾಗಿ ಬಂದ ಕರವೇ ಮುಖಂಡರಿಗೆ ಗುಮ್ಮಟ ನಗರಿಯಲ್ಲಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

ವಿಜಯಪುರ: ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆಗಾಗಿ ನಡೆದ ಹೋರಾಟದಲ್ಲಿ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರ ಜೊತೆ ಬಂಧಿತರಾಗಿ ಜೈಲು ಸೇರಿದ್ದ ವಿಜಯಪುರ ಜಿಲ್ಲಾಧ್ಯಕ್ಷ ಎಂ. ಸಿ. ಮುಲ್ಲಾ ಮತ್ತು ಉಪಾಧ್ಯಕ್ಷ ಮಹಾದೇವ ರಾವಜಿ ಅವರು ನಗರಕ್ಕೆ ಮರಳಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

ಕರವೇ ರಾಜ್ಯಾಧ್ಯಕ್ಷ ಸೇರಿದಂತೆ ಸುಮಾರು 53 ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರಿದಂ ಅವರು 14 ದಿನ ಜೈಲುವಾಸ ಅನುಭವಿಸಿದ್ದರು.  ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಎಂ. ಸಿ. ಮುಲ್ಲಾ ಮತ್ತು ಮಹಾದೇವ ರಾವಜಿ ಅವರು ಬೆಳಿಗ್ಗೆ ವಿಜಯಪುರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.  ಆಗ ಸ್ಥಳದಲ್ಲಿದ್ದ ಕರವೇ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ಸಿ. ಮುಲ್ಲಾ, ರಾಜ್ಯ ಸರಕಾರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿ ವಿಕೃತ ಮನೋಭಾವನೆ ತೋರಿದೆ.  ಇದು ಖಂಡನೀಯವಾಗಿದೆ.  ನಮ್ಮ ಐತಿಹಾಸಿಕ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ಈಗ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸುಗ್ರೀವಾಜ್ಞೆ ಹೊರಡಿಸಿ ಫೆಬ್ರವರಿ 28 ರೊಳಗಾಗಿ ನಾಮಫಲಕಗಳಲ್ಲಿ ಶೇ. 60 ಭಾಗ ಕನ್ನಡ ಮತ್ತು ಶೇ. 40 ಅನ್ಯಭಾಷೆ ಬಳಕೆ ಮಾಡಲು ಗಡುವ ನೀಡಿ ಆದೇಶ ಹೊರಡಿಸಿದರೆ.  ಇದನ್ನು ಸ್ವಾಗತಿಸ್ತುತ್ತೇವೆ ಎಂದು ಹೇಳಿದರು.

ವಿಜಯಪುರ ರೈಲು ನಿಲ್ದಾಣಕ್ಕೆ ಬಂದ ಎಂ. ಸಿ. ಮುಲ್ಲಾ, ಮಹಾದೇವ ರಾವಜಿ ಅವರನ್ನು ಕರವೇ ಕಾರ್ಯಕರ್ತರು ಸ್ವಾಗತಿಸಿ ಬರಮಾಡಿಕೊಂಡರು

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ, ನಗರಾಧ್ಯಕ್ಷ ಫಯಾಜ್ ಕಲಾದಗಿ, ನಾಗರಾಜ್ ಲಂಬು, ರವಿ ಕಿತ್ತೂರು, ಸಾಹೇಬಣ್ಣ ಮಡಿವಾಳರ, ಮಲ್ಲನಗೌಡ ಬಗಲಿ, ವಿನೋದ ದಳವಾಯಿ, ಅನುರಾಧ ಕಲಾಲ, ಮನೋಹರ ತಾಜವ, ನಸೀಮ್ ರೋಜಿನ್ದಾರ, ದಾದಾಪೀರ್ ಮುಜಾವರ್, ಡಾ. ದಯಾನಂದ ಸಾವಳಗಿ, ಡಾ. ಸಾದಿಕ ಜನವೇಕರ, ರಾಜಶೇಖರ ಮಠಪತಿ,ಡಾ, ಹಾಜಿಸಾಬ ಮುಲ್ಲಾ, ರವಿ ಮುರಗೋಡ, ಮಂಜು ಯಳಮೇಲಿ, ಪಂಡಿತ ಪೂಜಾರಿ, ಬಸವರಾಜ ಕಾಂಬಳೆ, ಬಸವರಾಜ ಬಿ. ಕೆ., ಮೂರ್ತಜ ಕೆಂಭಾವಿ, ಯೂನಸ್ ಮುಲ್ಲಾ, ಜಾಫರ ಶರಬತ್ ವಾಲೆ, ಸೌಕತ ಕೊತ್ವಾಲ್, ಮೌಲಾಲಿ ಬಡೇಘರ, ಶೇಕಿಲ್ ಪಟೇಲ್, ಮಲಂಗ ಬಿಜಾಪುರ, ದಾದಪೀರ್ ಬಗಲಿ, ಬಂಧೇನವಾಜ ಸಿರಗೂರು ಬಸವರಾಜ ಆಹೇರಿ, ಫಿದಾ ಕಲಾದಗಿ, ಜೆ ಎಂ ಬಿರಾದಾರ, ಮೌಲಾಸಾಬ ಅಗರಖೇಡ, ನಜೀರ ಇನಾಮದಾರ, ಶಬ್ಬೀರ್ ನಾಗರಬೌಡಿ, ಆರಿಫ್ ಇನಾಂದಾರ್ ಅಮಿತ್ ರಾಠೋಡ, ನಿಜಾಮುದ್ದೀನ್ ತಾಜಿಮತರಕ್, ಅರ್ಬಾಜ್ ಶೇಖ, ಪ್ರಶಾಂತ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

ಇದಾದ ಬಳಿಕ ಕರವೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಾಜಾ ಭಜಂತ್ರಿಯೊAದಿಗೆ ಸಂಭ್ರಮಿಸಿದರು.  ಅಲ್ಲದೇ, ರೈಲು ನಿಲ್ದಾಣದಿಂದ ಕನಕದಾಸ ವೃತ್ತ, ಅಂಬೇಡ್ಕರ ವೃತ, ಬಸವೇಶ್ವರ ವೃತ, ಗಾಂಧಿ ಚೌಕವರೆಗೆ ನಾನಾ ಘೋಷಣೆ ಹಾಕುತ್ತ ಸಂಭ್ರಮಿಸಿದರು.

Leave a Reply

ಹೊಸ ಪೋಸ್ಟ್‌