ವಿಜಯಪುರ ನಗರದ ಶ್ರೀ ಶಿವಾಜಿ ಮಹಾರಾಜ ಸೊಸಾಯಿಟಿಯಲ್ಲಿ ರಾಜಮಾತಾ ಜೀಜಾವು, ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ವಿಜಯಪುರ: ನಗರದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ ರಾಜಮಾತಾ ಜೀಜಾವು ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಧಾಪ್ಯಕ ಡಾ. ಸದಾಶಿವ ಪವಾರ, ರಾಜಮಾತಾ ಜೀಜಾವು ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಬಾಲ್ಯದಿಂದಲೂ ಯುದ್ಧ ಕೌಶಲ್ಯಗಳು ಮತ್ತು ಹಿಂದು ಧರ್ಮದ ರಕ್ಷಣೆಯ ಕುರಿತು ನೀತಿ ಪಾಠಗಳನ್ನು ಹೇಳುತ್ತಿದ್ದರು.  ಅವರ ಪಾಠಗಳ ಪ್ರೇರಣೆಯಿಂದಲೇ ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಧರ್ಮಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ತಮ್ಮ ಮಾತುಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲುಸಂತರು. ಅವರು 1863 ರಲ್ಲಿ ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದು ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದ್ದು ವಿಶ್ವಖ್ಯಾತಿ ಹೊಂದಲು ಕಾರಣವಾಯಿತು.  ಅವರ ಭಾಷಣದ ಮೊದಲ ವಾಕ್ಯ ಅಮೇರಿಕದ ಸಹೋದರ ಸಹೋದರಿಯರೇ ಎಂಬ ವಾಖ್ಯ ಅವಿಸ್ಮರಣೀಯವಾಗಿತ್ತು ಎಂದು ಹೇಳಿದರು.

ವಿಜಯಪುರ ಶಿವಾಜಿ ಬ್ಯಾಂಕಿನಿಂದ ಹಿಟ್ಟಿನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರೂ. 111111 ಚೆಕ್‌ನ್ನು ನೀಡಲಾಯಿತು ನಿರ್ಮಾಣ ಸಮಿತಿಯವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸಂಘದ ಧಮಾರ್ಥ ನಿಧಿಯಿಂದ ರೂ. 111111 ಚೆಕ್‌ನ್ನು ದೇಣಿಗೆ ಮೂಲಕ ಗ್ರಾಮದ ಹಿರಿಯರಾದ ಜ್ಯೋತಿಬಾ ಚವ್ಹಾಣ ಮತ್ತು ಪುತ್ಥಳಿ ನಿರ್ಮಾಣ ಸಮಿತಿಯವರಿಗೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಕರ ಕನಸೆ, ಬಾಬುರಾವ ತರಸೆ, ಸಂಜಯ ಜಂಬೂರೆ, ಮಹಾದೇವ ಪವಾರ, ಭಾರತ ದೇವಕುಳೆ, ರವಿ ಮದಭಾವಿ, ಅಂಬುತಾಯಿ ಜಾಧವ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ವ್ಯವಸ್ಥಾಪಕರಾದ ಚಂದ್ರಕಾಂತ ಜಾಧವ, ಅಂಬಾದಾಸ ಚವ್ಹಾಣ, ಬ್ಯಾಂಕಿನ ಸದಸ್ಯರು, ಸಿಬ್ಬಂದಿ, ಪಿಗ್ಮಿ ಏಜೆಂಟರು ಹಾಗೂ ಹಿಟ್ಟಿನಹಳ್ಳಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌