ವಿಜಯಪುರ: ಮಕರ ಸಂಕ್ರಾಂತಿ ಅಂಗವಾಗಿ ನಗರದ ಜಿಲ್ಲಾ ತೋಟಗಾರಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಗ ಗಮನ ಸೆಳೆಯುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ 2023-24ನೇ ವರ್ಷದ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ನೂತನ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ ಹೊರ್ತಿ ಚಾಲನೆ ನೀಡಿದರು.
ಜನೇವರಿ 15ರ ವರೆಗೆ ಈ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಗಮನ ಸೆಳೆದ ಸಿರಿಧಾನ್ಯ ಹಾಗೂ ಹೂವಿನ ಮಾದರಿಗಳು
ಸಂಪೂರ್ಣವಾಗಿ ದ್ರಾಕ್ಷಿಯಿಂದ ತಯಾರಿಸಿದ ಮಂಟಪ, ಹಲವು ಬಗೆಯ ಹೂಗಳಿಂದ ರಚಿಸಿದ ಚಂದ್ರಯಾನ-3ರ ಯಶೋಗಾಥೆ ಸಾರುವ ಇಸ್ರೋ ರಾಕೆಟ್ ಹಾಗೂ 30 ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಂಪೂರ್ಣವಾಗಿ ಸಿರಿ ಧಾನ್ಯಗಳಿಂದ ತಯಾರಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವೇಶ್ವರ ಮೂರ್ತಿ ಕಲಾಕೃತಿ, ನಿಂಬೆಹಣ್ಣುಗಳಿAದಲೇ ಬಳಸಿ ರಚಿಸಿರುವ ನಿಂಬೆ ಮನೆ, ನಾನಾ ಬಗೆಯ ಹೂವುಗಳನ್ನು ಉಪಯೋಗಿಸಿಕೊಂಡು ಮಾಡಿರುವ ಹರಿಯುವ ನೀರಿನ ಜಲಧಾರೆ, ಮನೆ, ಮೀನುಗಳು, ಕರ್ನಾಟಕ ನಕಾಶೆ, ನವಿಲು ಹಾಗೂ ತರಕಾರಿಯಿಂದ ರಚಿಸಿರುವ ರಂಗೋಲಿ ಆಕರ್ಷಣೆಯಾಗಿವೆ.
ಹಲವು ಬಗೆಯ ಹಣ್ಣು, ತರಕಾರಿ, ಹೂವುಗಳು, ಬೋನ್ಸಾಯ್ ಗಿಡಗಳು ಪ್ರದರ್ಶನ
ಮೇಳದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಪೇರು, ಬಾರೇಕಾಯಿ, ನಿಂಬೆ, ಚಿಕ್ಕು, ರೋಸ್ ಆಪಲ್, ನೇರಳೆ, ಅಂಜೂರ, ಪಪಾಯ ಹಾಗೂ ತರಕಾರಿಗಳಾದ ಈರುಳ್ಳಿ, ಬದನೆ, ಟೊಮೋಟೊ, ಕುಂಬಳಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬೀಟ್ರೂಟ್, ಮೂಲಂಗಿ, ಪಾಲಕ್, ಕ್ಯಾಬೇಜ್, ಮೆಕ್ಕೇಕಾಯಿ, ನುಗ್ಗೆಕಾಯಿ ವಿವಿಧ ಬಗೆಯ ಹೂಗಳಾದ ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಗುಲಾಬಿಗಳನ್ನು ಪ್ರದರ್ಶನದಲ್ಲಿವೆ.
ಆಲದಮರ, ಹಲಸಿನ ಮರ, ಅರಳಿಮರ, ನೇರಳೆ, ನಾನಾ ಬೋನ್ಸಾಯ್ ಪದ್ಧತಿಯಲ್ಲಿ ಬೆಳೆದ ಗಿಡಗಳ ಪ್ರದರ್ಶನದಲ್ಲವೆ.
ಪ್ರದರ್ಶನ ಹಾಗೂ ಮಾರಾಟ ಮಳಿಗೆ
ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ರೇಷ್ಮೆ ಇಲಾಖೆ, ತಾಳೆ ಬೆಳೆ ಅಭಿವೃದ್ದಿ ಯೋಜನೆ, ಭಾಗ್ಯಜ್ಯೋತಿ ರೈತ ಉತ್ಪನದ ಮಳಿಗೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನ, ಹಾಪ್‌ಕಾಮ್ಸ್, ಸೋಲಾರ್ ವಾಟರ್ ಪಂಪ್‌ಸೆಟ್‌ಗಳ ಪ್ರದರ್ಶನ, ವಿವಿಧ ಕಂಪನಿಗಳ ಟ್ರಾಕ್ಟರ್, ರೋಟಿವೆಟರ್ ಕೃಷಿ ಯಂತೋಪಕರಣಗಳ ಸೆರಿದಂತೆ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ.
ಸಿಎಚ್‌ಡಿ ಯೊಜನೆಯ ವಿದ್ಯಾರ್ಥಿಗಳಿಗಾಗಿ ತೋಟಗಾರಿಕಾ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳಿಗೆ ತೋಟಗಾರಿಕಾ ಪರಿಕರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಬಾವಿದೊಡ್ಡಿ ರಾಹು¯ಕುಮಾರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ದಾನಮ್ಮ ಪಾಟೀಲ ರಾಷ್ಟಿçÃಯ ತೋಟಗಾರಿಕಾ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಬಿ.ಎಮ್,ಕೋಕರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.