ದೇಶದ 500 ಟಾಪ್ ಸ್ಕೂಲ್ ಗಳಲ್ಲಿ ಬಸವನಾಡಿನ ಪ್ರೇರಣಾ ಪಬ್ಲಿಕ್ ಸ್ಲೂಕ್ ಗೆ ಸ್ಥಾನ- ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್ಸ್ ಗೌರವ

ವಿಜಯಪುರ: ನಗರದ ಪ್ರೇರಣಾ ಪಬ್ಲಿಕ್ ಸ್ಕೂಲ್ ದೇಶದ 500 ಟಾಪ್ ಶಾಲೆಗಳಲ್ಲಿ ಸ್ಥಾನ ಪಡೆದಿದೆ. 

ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್- 2023 ನೀಡಿ ಗೌರವಿಸಲಾಗಿದೆ.  ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಶಾಲೆಯ ಶ್ರೇಷ್ಠತೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತದೆ.

ಅಷ್ಟೇ ಅಲ್ಲ, ಈ ಶಾಲೆಯು ಕರ್ನಾಟಕದ 25 ಅತ್ಯುತ್ತಮ ಸಿಬಿಎಸ್‌ಇ ಶಾಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.  ಅಲ್ಲದೇ, ಈ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಜಿಲ್ಲೆಯ ಏಕೈಕ ಶಾಲೆ ಇದಾಗಿದೆ.

ವಿಜಯಪುರ ನಗರದ ಪ್ರೇರಣಾ ಪಬ್ಲಿಕ್ ಸ್ಕೂಲ್ ಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್- 2023 ಪ್ರಶಸ್ತಿ ಲಭಿಸಿದೆ

ಪ್ರೇರಣಾ ಪಬ್ಲಿಕ್ ಸ್ಕೂಲ್ ಇನ್ನಿತರ ಮಾನದಂಡಗಳಾದ ಉತ್ತಮ ಕ್ರೀಡಾ ಶಿಕ್ಷಣದ ಶಾಲೆ, ಉತ್ತಮ ಸಮುದಾಯ ಸಹಯೋಗದ ಶಾಲೆ ಮತ್ತು ಅತ್ಯುತ್ತಮ ಪಠ್ಯೇತರ ಚಟುವಟಿಕೆಗಳ ಶಾಲೆ ಎಂಬ ಗೌರವಕ್ಕೆ ಭಾಜನವಾಗಿದೆ.

ಈ ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಪ್ರೇರಣಾ ಸಂಘ ಸಂಸ್ಥೆಗಳ ನಿರ್ದೇಶಕ ಸುಕೃತ ಪಾಟೀಲ ಮತ್ತು ಪ್ರಾಂಶುಪಾಲ ಸತೀಶ ಕವಿಶ್ವರ ಶಾಲೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೇರಣಾ ಸಂಘ ಸಂಸ್ಥೆಗಳ ಅಧ್ಯಕ್ಷ ಡಾ. ಅರವಿಂದ ಪಾಟೀಲ, ಈ ಗೌರವ ನನಗೆ ಅತೀವ ಸಂತಸ ತಂದಿದೆ.  ಇದು ಪ್ರೇರಣಾ ಶಾಲೆ ಮತ್ತು ಇಡೀ ವಿಜಯಪುರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.  ಈ ಪ್ರಶಸ್ತಿಗೆ ಕಾರಣರಾದ ಮತ್ತು ಸಹಕರಿದ ಎಲ್ಲಾ ಪಾಲಕರಿಗೆ ಧನ್ಯವಾದಗಳು.  ಪ್ರೇರಣಾ ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌