ವಿಜಯಪುರ ಜಿ. ಪಂ. ನೂತನ ಸಿಇಓ ರಿಶಿ ಆನಂದ ಅಧಿಕಾರ ಸ್ವೀಕಾರ

ವಿಜಯಪುರ: ಜಿ. ಪಂ. ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ರಿಶಿ ಆನಂದ ಅಧಿಕಾರ ಸ್ವೀಕರಿಸಿದ್ದಾರೆ.

ವಿಜಯಪುರ ಜಿ. ಪಂ. ಸಿಇಓ ಆಗಿದ್ದ ರಾಹುಲ ಶಿಂಧೆ ಅವರು ಬೆಳಗಾವಿ ಜಿ. ಪಂ. ಸಿಇಓ ಆಗಿ ವರ್ಗಾವಣೆಯಾಗಿದ್ದಾರೆ.  ಅವರ ಸ್ಥಾನಕ್ಕೆ ಈಗ ರಿಶಿ ಆನಂದ ಅವರು ವರ್ಗವಣೆಯಾಗಿದ್ದು, ಅಧಿಕಾರ ಸ್ವೀಕರಿಸಿದರು.

ವಿಜಯಪುರ ಜಿ. ಪಂ. ನೂತನ ಸಿಇಓ ರಿಷಿ ಆನಂದ

ನಿರ್ಗಮಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿ. ಪಂ. ಉಪಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಜಿ. ಪಂ.ನ ನಾನಾ ಅಧಿಕಾರಿಗಳು, ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌