ವಿಜಯಪುರ: ನಗರದಲ್ಲಿ ನಡೆದ ಶ್ರೀ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ. ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ ಎಂದು ಹೇಳಿದರು.
ಸಮಾಜದಲ್ಲಿರುವ ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕು. ನಾನೂ ಕೂಡ ಸಹಾಯ ಮಾಡುತ್ತೇನೆ. ದಾನಿಗಳಿಗೂ ಮತ್ತು ಪ್ರತಿಭಾ ಪುರಸ್ಕಾರ ವಿದ್ಯಾರ್ಥಿನಿಯರಿಗೂ ಒಳ್ಳೆಯದಾಗಲಿ. ಯಾವುದೇ ಒಂದು ಸಮಾಜವು ಎಲ್ಲ ಸ್ಥರದಲ್ಲಿ ಬೆಳೆಯಬೇಕಾದರೆ ಸಮಾಜದ ಹಿರಿಯರ ಪ್ರೋತ್ಸಾಹ ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು.
ಬೆಳ್ಳರೆ ಶ್ರೀ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 30 ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾತ್ರಾಳ- ಬಾಲಗಾಂವ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಮಹಾಸ್ವಾಮೀಜಿ, ಬೊಳಚಿಂಚೋಳಿಯ ಶ್ರೀ ಸಿದ್ದರಾಮೇಶ್ವರ ಪಟ್ಟದ ದೇವರು ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ, ಗಂಗಾಧರ ಯಾವಗಲ, ಶಿವಶಂಕರ ಎಂ ಸಿಂದಗಿ, ಎಂ. ಬಿ. ಕನ್ನೂರ, ಅಪ್ಪು ಕಲ್ಯಾಣಶೆಟ್ಟಿ, ಶಿವಕುಮಾರ ಭುಯಾರ, ವೀರಭದ್ರ ಮೇತ್ರಿ, ಯುವರಾಜ ಚೋಳಕೆ, ಗುಂಡೇಶ್ವರ ಹಳಕಟ್ಟಿ, ಅನಿಲ ಭೂಸನೂರ, ಪಿ. ಎಂ. ಗಲಗಲಿ,ಪ್ರಸಾದ ಶಿವಸಿಂಪಿ, ಎಸ್. ಕೆ. ಗೌಡ್ರು ಮಹಿಳಾ ಮಂಡಲದ ಸದಸ್ಯರು, ನಾನಾ ಜಿಲ್ಲೆಗಳ ಶಿವಶಿಂಪಿ ಸಮಾಜದ ಜಿಲ್ಲಾಕ್ಷರು ಉಪಸ್ಥಿತರಿದ್ದರು.
ಸುನೀತಾ ಗಲಗಲಿ ಮತ್ತು ಭುವನೇಶ್ವರಿ ಹಳಕಟ್ಟಿ ಪ್ರಾರ್ಥಿಸಿದರು. ಐ. ಎಸ್. ನರೂಣಿ ಸ್ವಾಗತಿಸಿ ಪರಿಚಯಿಸಿದರು. ಅನ್ನಪೂರ್ಣ ಭೂಸನೂರ ನಿರೂಪಿಸಿದರು. ವಿಜಯಲಕ್ಷ್ಮಿ ಸೋಲಾಪುರ ವಂದಿಸಿದರು.