ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ವಿಜಯಪುರ: ಸಮ ಸಮಾಜದ ಕನಸು ಹೊತ್ತು,ಆ ಮೂಲಕ ಸತ್ಯಪಥದಲ್ಲಿ ನಡೆದು, ತಮ್ಮ ವಚನಗಳ ಮೂಲಕ ಸಾಮಾನ್ಯರಿಗೂ ತಿಳಿಯುವಂತೆ ಬರೆದಂತೆ,ನುಡಿದಂತೆ ನಡೆದು ಜನಸಾಮಾನ್ಯರಿಗೆ ಅರಿವಿನ ಗುರುವಾಗಿದ್ದವರು 12ನೇ ಶತಮಾನದ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದ್ದಾರೆ.  ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು. ಶಿವಯೋಗಿ […]

ಬಸವ ನಾಡಿನ ರಾಮಭಕ್ತರ ಭಕ್ತಿ- ಬ್ಯಾಂಕಾಕ್ ಬಳಿ 13 ಸಾವಿರ ಅಡಿ ಸ್ಕೈ ಡೈವಿಂಗ್ ಮೂಲಕ ಧುಮುಕಿ ದೈವಭಕ್ತಿ ಸಮರ್ಪಣೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಭಕ್ತರು ತರಹೇವಾರಿಯಾಗಿ ತಂತಮ್ಮ ಭಕ್ತಿಯ ಪರಾಕಾಷ್ಟೆ ತೋರಿಸುತ್ತಿದ್ದಾರೆ. ಕೆಲವು ಭಕ್ತರು ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರೆ, ಮತ್ತೆ ಹಲವರು ತಮ್ಮ ಕೈಲಾದ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ.  ಗುಜರಾತಿನಿಂದ ಅತೀ ಉದ್ದವಾದ ಊದಿನ ಕಡ್ಡಿಯನ್ನು ಕಳುಹಿಸಿ ಕೊಟ್ಟಿದ್ದರೆ, ಮತ್ತೋಬ್ಬರು ಚಿನ್ನದ ಪಾದುಕೆಗಳನ್ನು ಕಳುಹಿಸಿದ್ದಾರೆ.  ಮತ್ತೆ ಹಲವರು ವಸ್ತ್ರಗಳು, ಸುಗಂಧ ದ್ರವ್ಯಗಳು, ಬಟ್ಟೆಗಳು, ಪೂಜಾ ಸಾಮಗ್ರಿಗಳು, ತರಹೇವಾರಿ ಖಾದ್ಯಗಳು, ಪಾತ್ರೆಗಳು, ಗಂಟೆಗಳನ್ನು ಭಕ್ತಿ ಸಮರ್ಪಣೆ ಮಾಡಿದ್ದಾರೆ. ಮತ್ತೆ […]

StarpUp Story: ಉ. ಕ. ದ ಪ್ರಥಮ ಸ್ಟೀಲ್ ರಿಂಗ್ ಯಂತ್ರ: ಕಟ್ಟಡ ನಿರ್ಮಾಪಕರಿಗೆ ವರವಾದ ವಿನೋದ ಪೀರಗೊಂಡರ ವೈಭವಿ ಟ್ರೆಡರ್ಸ್

ಮಹೇಶ ವಿ. ಶಟಗಾರ ವಿಜಯಪುರ: ಮನೆಕಟ್ಟಿ ನೋಡು.  ಮದುವೆ ಮಾಡಿ ನೋಡು ಎಂಬುದು ನಾಣ್ಣುಡಿ.  ಆದರೆ, ಮನೆ ಕಟ್ಟುವಾಗ ಸಿಕ್ಕ ಅನುಭವವನ್ನೇ ಜೀವನದಲ್ಲಿ ಉದ್ಯಮವಾಗಿಸಿಕೊಂಡು ಯಶಸ್ವಿಯಾದರೆ ಹೇಗಿರಬೇಡ.  ಹೌದು.  ಈ ರೀತಿ ಮನೆ ಕಟ್ಟುವಾಗ ಎದುರಿಸಿದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಿದ ಯೋಜನೆಗಳ ಮೇಲೆ ಯುವಕನೊಬ್ಬ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಸ್ಟೋರಿ ಇದು. ವಿಜಯಪುರ ನಗರದ ಸೋಲಾಪುರ ರಸ್ತೆಯಿಂದ ಶ್ರೀ ಸಿದ್ಧಾರೂಢ ಮಠದ ಕಡೆಗೆ ಹೊರಟರೆ ಸಾಕು ಮೂರ್ನಾಲ್ಕು ಅಂಗಡಿಗಳನ್ನು ದಾಟಿದರೆ ವೈಭವಿ ಟ್ರೇಡರ್ಸ್ […]