ಬಸವ ನಾಡಿನ ರಾಮಭಕ್ತರ ಭಕ್ತಿ- ಬ್ಯಾಂಕಾಕ್ ಬಳಿ 13 ಸಾವಿರ ಅಡಿ ಸ್ಕೈ ಡೈವಿಂಗ್ ಮೂಲಕ ಧುಮುಕಿ ದೈವಭಕ್ತಿ ಸಮರ್ಪಣೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಭಕ್ತರು ತರಹೇವಾರಿಯಾಗಿ ತಂತಮ್ಮ ಭಕ್ತಿಯ ಪರಾಕಾಷ್ಟೆ ತೋರಿಸುತ್ತಿದ್ದಾರೆ.

ಕೆಲವು ಭಕ್ತರು ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರೆ, ಮತ್ತೆ ಹಲವರು ತಮ್ಮ ಕೈಲಾದ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ.  ಗುಜರಾತಿನಿಂದ ಅತೀ ಉದ್ದವಾದ ಊದಿನ ಕಡ್ಡಿಯನ್ನು ಕಳುಹಿಸಿ ಕೊಟ್ಟಿದ್ದರೆ, ಮತ್ತೋಬ್ಬರು ಚಿನ್ನದ ಪಾದುಕೆಗಳನ್ನು ಕಳುಹಿಸಿದ್ದಾರೆ.  ಮತ್ತೆ ಹಲವರು ವಸ್ತ್ರಗಳು, ಸುಗಂಧ ದ್ರವ್ಯಗಳು, ಬಟ್ಟೆಗಳು, ಪೂಜಾ ಸಾಮಗ್ರಿಗಳು, ತರಹೇವಾರಿ ಖಾದ್ಯಗಳು, ಪಾತ್ರೆಗಳು, ಗಂಟೆಗಳನ್ನು ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಶ್ರೀರಾಮನ ಭಕ್ತರಾದ ವಿಜಯಪುರದ ರಾಜಶೇಖರ ಮುತ್ತಿನಪೆಂಡಿಮಠ, ರಾಹುಲ ಡಾಕ್ರೆ, ಅನುಭವ ಅಗರವಾಲ, ಮಹಾರಾಷ್ಟ್ರದ ಹಿಮಾಂಶೂ ಸಾಬಳೆ

ಮತ್ತೆ ಕೆಲವು ಸಮುದಾಯದವರು ಶತಮಾನಗಳ ನಂತರ ಪಾದರಕ್ಷೆ, ಪಗಡಿ ತೊಡುತ್ತಿದ್ದಾರೆ.  ಜೊತೆಗೆ ಹಲವಾರು ಭಕ್ತರು ತಮ್ಮ ತರಹೇವಾರಿ ಹರಕೆಗಳನ್ನು ತೀರಿಸುತ್ತಿದ್ದಾರೆ.  ವೃತಗಳನ್ನು ಕೈಗೊಳ್ಳುತ್ತಿದ್ದಾರೆ.  ಧಾರ್ಮಿಕ ವಿಧಿ- ವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದಾರೆ.  ಸಹಸ್ರಾರು ಜನರು ರಾಮ ಮಂದಿರದ ಉದ್ಘಾಟನೆಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಖುದ್ದಾಗಿ ಅಯೋಧ್ಯೆಗೆ ದೌಡಾಯಿಸುತ್ತಿದ್ದರೆ, ಕೋಟ್ಯಂತರ ಭಕ್ತರು ತಮ್ಮೂರಿನ ದೇವಸ್ಥಾನಗಳಲ್ಲಿ, ಮನೆಗಳಲ್ಲಿಯೇ ಉದ್ಘಾಟನೆಯ ದಿನ ಶುಭ ಮುಹೂರ್ತದಂದು ಉತ್ತಮ ಕಾರ್ಯ ಕೈಗೊಳ್ಳಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಿಶ್ವಾದ್ಯಂತ ನೂರಾರು ಕೋಟಿ ಭಕ್ತರು ರಾಮನಾಮ ಜಪಿಸುತ್ತಿದ್ದಾರೆ.  ಹಿಂದುಗಳು ಮಾತ್ರವಲ್ಲ ಇತರರೂ ಕೂಡ ರಾಮ ಮಂದಿರದ 500 ವರ್ಷಗಳ ಕನಸು ನನಸಾಗುತ್ತಿದೆ ಎಂದು ಸಂತಸ ಪಡುತ್ತ, ತಂತಮ್ಮ ಕೈಲಾದಷ್ಟು ಭಕ್ತಿಸೇವೆ ಮಾಡುತ್ತಿದ್ದಾರೆ.

13000 ಅಡಿ ಮೇಲಿಂದ ಸ್ಕೈ ಡೈವಿಂಗ್ ಮಾಡಿದ ಬಸವ ನಾಡಿನ ಯುವಕರು

ಇತ್ತ ಬಸವ ನಾಡು ವಿಜಯಪುರ ಜಿಲ್ಲೆಯ ಶ್ರೀರಾಮನ ಭಕ್ತರು ವಿದೇಶಕ್ಕೆ ತೆರಳಿ ಜೈ ಶ್ರೀರಾಮ ಘೋಷಣೆ ಹಾಕುತ್ತ ಆಗಸದಿಂದ ಸ್ಕೈಡಿವಿಂಗ್ ಮಾಡಿ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.

ನಮೋ ಸ್ಕೈ ಡೈವರ್ಸ್ ರಾಮನ ಭಕ್ತರ ಹೆಸರಿನಲ್ಲಿ ಗುಂಪು ರಚಿಸಿಕೊಂಡ ನಾಲ್ಕು ಜನ ಯುವಕರು ವಿಭಿನ್ನವಾಗಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.  ಬ್ಯಾಂಕಾಕ್ ಗೆ ತೆರಳಿರುವ ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತ್ರತ್ವದಲ್ಲಿ ತಂಡ ಈ ರೀತಿ ರಾಮಭಕ್ತಿಯ ಜೊತೆಗೆ ಅಭಿಮಾನ ಮೆರೆದಿದ್ದಾರೆ.  ಬೆಂಗಳೂರಿನ ರಾಹುಲ ಡಾಕ್ರೆ, ಅನುಭವ ಅಗರವಾಲ ಹಾಗೂ ಮಹಾರಾಷ್ಟ್ರದ ಹಿಮಾಂಶೂ ಸಾಬಳೆ ಈ ತಂಡದ ಸದಸ್ಯರಾಗಿದ್ದು, ಅವರ ಭಕ್ತಿಯ ರೀತಿ ಈಗ ಗಮನ ಸೆಳೆದಿದೆ.

ಕೈಯ್ಯಲ್ಲಿ ಜೈ ಶ್ರೀರಾಮ ಎಂದು ಬರೆದಿರುವ ಮತ್ತು ರಾಮ ಮಂದಿರದ ಫೋಟೋ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀ ರಾಮ್ ಎಂದು ಧುಮುಕಿದ್ದಾರೆ.  ಬ್ಯಾಂಕಾಕಿನ ಖೋಯಾಯ್ ಎಂಬ ಪ್ರದೇಶದಿಂದ ಸ್ಕೈ ಡೈವಿಂಗ್ ಮಾಡಿದ್ದಾರೆ.  ರಾಮ ಮಂದಿರ ಫೋಟೊ, ಮೋದಿ ಭಾವಚಿತ್ರ ಹಾಗೂ ಜೈ ಶ್ರೀ ರಾಮ ಎಂದು ಬರೆದಿರುವ ಫಲಕ ಹಿಡಿದು ಇವರು ಸ್ಕೈ ಡೈವಿಂಗ್ ಮಾಡಿದ್ದಾರೆ.

ಶ್ರೀ ರಾಮ ದೇಶಕ್ಕೆ ಮಾತ್ರವಲ್ಲ ಇಡಿ ಜಗತ್ತಿಗೆ ಮಾದರಿಯಾಗಿದ್ದಾನೆ.  ರಾಮನಿಗೆ ಯಾವುದೇ ಸ್ಥಳದ, ವ್ಯಾಪ್ತಿಯ ಮಿತಿಯಿಲ್ಲ.  ಹಾಗಾಗಿ ಆಗಸದಲ್ಲೂ ಶ್ರೀ ರಾಮನ ಹೆಸರು ಹಾರಬೇಕು ಎಂದು ವಿಭಿನ್ನ ಪ್ರಯತ್ನ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌