ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ವಿಜಯಪುರ: ಸಮ ಸಮಾಜದ ಕನಸು ಹೊತ್ತು,ಆ ಮೂಲಕ ಸತ್ಯಪಥದಲ್ಲಿ ನಡೆದು, ತಮ್ಮ ವಚನಗಳ ಮೂಲಕ ಸಾಮಾನ್ಯರಿಗೂ ತಿಳಿಯುವಂತೆ ಬರೆದಂತೆ,ನುಡಿದಂತೆ ನಡೆದು ಜನಸಾಮಾನ್ಯರಿಗೆ ಅರಿವಿನ ಗುರುವಾಗಿದ್ದವರು 12ನೇ ಶತಮಾನದ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದ್ದಾರೆ. 

ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿದರು

ಶಿವಯೋಗಿ ಸಿದ್ಧರಾಮೇಶ್ವರ ಕರ್ಮಯೋಗಿಯಾಗಿದ್ದ ಅವರು ಮುಂದೆ  ಅಲ್ಲಮಪ್ರಭುಗಳ ಆಶಯದಂತೆ ಕಲ್ಯಾಣಕ್ಕೆ ತೆರಳಿ, ಶಿವಯೋಗಿ-ಜ್ಞಾನಯೋಗಿಯಾದರು. ಅವರು ಸೊನ್ನಲಾಪೂರದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಬಹು ದೊಡ್ಡ ಕಾಯಕ ಯೋಗಿಯಾದವರು. ಇವರ ವಚನಗಳು ಜ್ಞಾನದೊಂದಿಗೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ತೊಡೆದು ಹಾಕಲು ವಚನದ ಸಾರ ಧ್ವನಿಸುತ್ತವೆ.ಇವರು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಇವರ ವಚನಗಳ ತತ್ವ ಸಾರ ಅರಿತು ಸುಂದರತೆಯ ಬದುಕು ರೂಪಿಸಿಕೊಳ್ಳಲು ಈ ವಚನಗಳು ದಾರಿ ತೋರುತ್ತವೆ.ಇಂಥಹ ಶರಣರು ಅಂದು ನುಡಿದ ನುಡಿ, ರಚಿಸಿದ ವಚನ ಇಂದಿಗೂ ಪ್ರಸ್ತುತ.ಜಯಂತಿ ಆಚರಣೆಯಿಂದ ಅವರು ಈ ಸಮಾಜಕ್ಕೆ ನೀಡಿದ ಸಂದೇಶ ನೆನಪಿಸುವ ಮೂಲಕ ಅವರ ತತ್ವಾದರ್ಶದ ಪಥದಲ್ಲಿ ನಡೆಯುವುದೇ ಆಗಿದ್ದು ಉದ್ಧೇಶವೂ ಸಹ ಇದೆ ಆಗಿದೆ.ಈ ಸಮಾಜದ ಒಳಿತಿಗಾಗಿ ಸಹಾಯ ಸಹಕಾರ ಒದಗಿಸಬೇಕು.ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿಯೂ ಜ್ಞಾನಿಗಳ ನುಡಿ ದಾರದೀಪವಾಗಿವೆ. ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಅವರ ಕುರಿತಾಗಿ ತಿಳಿದುಕೊಳ್ಳಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕರಾದ ಬಿ.ಎನ್.ಪಾಟೀಲ ಅವರು ಶಿವಯೋಗಿ ಸಿದ್ಧರಾಮೇಶ್ವರ ಅವರ ಕುರಿತಾಗಿ ಮಾತನಾಡಿದರು.ಅಂದಿನ ಶರಣರು ಲಿಂಗಭೇದ, ಜಾತಿ ಭೇದ,ವರ್ಣಭೇದ ವಿಲ್ಲದ ಯಾವುದೇ ಭೇದ ವಿಲ್ಲದ ಎಲ್ಲರಿಗೂ ಸರಿಸಮಾನವಾದ ಅವಕಾಶಗಳನ್ನು ಕಲ್ಪಿಸಿದ್ದರು.ಕಾಯಕಯೋಗಿಗಳ,ಶ್ರಮಜೀವಿಗಳಾಗಿದ್ದ ಶರಣರು ಈ ಸತ್ಯದ ಪಥವ ತೋರಿದವರು.ಇವರು ಅದ್ಭುತವಾದ ಸುಮಾರು ೧೬೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಬಸವರಾಜ ಎ ನಾಟೀಕಾರ ತಂಡ ಸಂಗೀತ ಕಾರ್ಯಕ್ರಮ ನಡಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ,  ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟೆ,ವಿ.ಸಿ.ನಾಗಠಾಣ,ರಾಮು ಹೊಸಪೇಟೆ,ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ದೇವೇಂದ್ರ ಮೀರೇಕರ, ಎಚ್.ಮಮದಾಪೂರ ಉಪಸ್ಥಿತರಿದ್ದರು.

ಮೆರವಣಿಗೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರದ ಮೆರವಣಿಗೆ ನಾನಾ ಕಲಾ ತಂಡಗಳೊಂದಿಗೆ ನಡೆಯಿತು.

Leave a Reply

ಹೊಸ ಪೋಸ್ಟ್‌