ಗೋ ಸಂಪತ್ತು ಉಳಿಸಲು ಜೋಳಕ್ಕೆ ಬೆಂಬಲ ಬೆಲೆ ಅಗತ್ಯವಾಗಿದೆ- ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವೈಜ್ಞಾನಿಕ ಕಾರಣಗಳಿಂದಲೇ ಋಷಿಮುನಿಗಳು, ಹಿರಿಯರು ಆಕಳನ್ನು ಗೋಮಾತೆ ಎಂದು ಕರೆದಿದ್ದಾರೆ.  ಜೋಳ ಬೆಳೆಯುವುದು ಕಡಿಮೆ ಆಗಿದ್ದರಿಂದ, ಕ್ರಮೇಣ ಗೋ ಸಂಪತ್ತು ಕಡಿಮೆಯಾಗುತ್ತಿದ್ದು, ಮುಂದಿನ ಅಧಿವೇಶನದಲ್ಲಿ ಪ್ರತಿ ಕ್ವಿಂಟಾಲ್ ಜೋಳಕ್ಕೆ ಕನಿಷ್ಠ ರೂ. 5000 ಬೆಂಬಲ ಬೆಲೆ ನಿಗದಿ ಪಡಿಸಲು ಸರಕಾರದ ಮೇಲೆ ಒತ್ತಡ ತಂದು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಸಮೀಪ ಸಂಕ್ರಾಂತಿ ಅಂಗವಾಗಿ ಆಯೋಜಿಸಲಾಗಿರುವ ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ […]

ಗಾಳಿಪಟ ಹಾರಿಸುವುದು ಒಂದು ವಿಶಿಷ್ಟ ಕಲೆ- ದೈಹಿಕ ನಿರ್ದೇಶಕ ಪ್ರೊ. ಎಸ್. ಎ. ಪಾಟೀಲ

ವಿಜಯಪುರ: ಗಾಳಿಪಟ ಹಾರಿಸುವುದು ಒಂದು ವಿಶೇಷ ಕಲೆಯಾಗಿದೆ.  ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಇದು ರೂಢಿಗತವಾಗಿ ಬಂದಿದೆ ಎಂದು ದೈಹಿಕ ನಿರ್ದೇಶಕ ಪ್ರೊ. ಎಸ್. ಎ. ಪಾಟೀಲ ಹೇಳಿದ್ದಾರೆ. ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಸಂಕ್ರಾಂತಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿ್ದ ಕೈಟ ಫೆಸ್ಟ್(ಗಾಳಿಪಟ ಉತ್ಸವ) ಉದ್ಘಾಟಿಸಿ ಅವರು ಮಾತನಾಡಿದರು. ಗಾಳಿಪಟ ತಯಾರಿಸಲು ಕೌಶಲ್ಯ ಅಗತ್ಯವಾಗಿದೆ.  ಪತಂಗ ಹಾರಿಸುವುದು ಮನರಂಜನೆ ಜೊತೆಗೆ ಅದರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ.  ಆದರೆ, […]

ವಿ. ಭ. ದರಬಾರ ಪಿಯು ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ವಿಜಯಪುರ: ನಗರದ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಪರಾಧ ವಿಭಾಗದ ಹೆಚ್ಚುವರಿ ಎಸ್ಪಿ ರಾಮನಗೌಡ ಎ. ಹಟ್ಟಿ ಮಾತನಾಡಿ, ಬಡವನಾಗಿ ಜನಿಸಿದರೂ ಬಡವನಾಗಿಯೇ ಸಾಯುವುದು ತಪ್ಪು.  ಜೀವನದಲ್ಲಿ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಪೂರಕವಾದ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಬದುಕು ಸಾಗಿಸಬೇಕು ಎಂದು ಹೇಳಿದರು. ಶಾಲಾ ಶಿಕ್ಷಣ ಇಲಾಖೆ […]

ಶ್ರೀ ಗೋಪಾಲ ನಂದುಲಾಲ ಮಹಾರಾಜರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ-ಸಂತಸ ವ್ಯಕ್ತಪಡಿಸಿದ ಮಹಾರಾಜರು

ವಿಜಯಪುರ: ಅಯೋಧ್ಯೆಯಲ್ಲಿ ಜನೇವರಿ 22 ರಂದು ನಡೆಯಲಿರುವ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ವಿಜಯಪುರ ಜಿಲ್ಲೆಯಿಂದ ಶ್ರೀ ಗೋಪಾಲ ನಂದುಲಾಲ ಮಹಾರಾಜ ಅವರನ್ನು ಆಹ್ವಾಸಲಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಹಾರಾಜರು, ತಮಗೆ ಆಹ್ವಾನ ನೀಡಿರುವುದು ಬಂಜಾರಾ ಸಮಾಜಕ್ಕೂ ಪ್ರಾತಿನಿಧ್ಯ ನೀಡಿದಂತಾಗಿದ್ದು, ಇದು ಖುಷಿಯ ಸಂಗತಿಯಾಗಿದೆ.  ರಾಮ ಮಂದಿರದ ಟ್ರಸ್ಟ್ ಸಮಿತಿಯವರಿಗೆ ಗೌರವಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿಎಲ್. ಟಿ- 1ರಿಂದ ಅಯೋಧ್ಯೆಗೆ ಹೋಗುತ್ತಿರುವುದು ನನ್ನ ಸೌಭಾಗ್ಯ.  ಸಂತ ಸೇವಾಲಾಲ ಮಹಾರಾಜರ […]