ಗಾಳಿಪಟ ಹಾರಿಸುವುದು ಒಂದು ವಿಶಿಷ್ಟ ಕಲೆ- ದೈಹಿಕ ನಿರ್ದೇಶಕ ಪ್ರೊ. ಎಸ್. ಎ. ಪಾಟೀಲ

ವಿಜಯಪುರ: ಗಾಳಿಪಟ ಹಾರಿಸುವುದು ಒಂದು ವಿಶೇಷ ಕಲೆಯಾಗಿದೆ.  ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಇದು ರೂಢಿಗತವಾಗಿ ಬಂದಿದೆ ಎಂದು ದೈಹಿಕ ನಿರ್ದೇಶಕ ಪ್ರೊ. ಎಸ್. ಎ. ಪಾಟೀಲ ಹೇಳಿದ್ದಾರೆ.

ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಸಂಕ್ರಾಂತಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿ್ದ ಕೈಟ ಫೆಸ್ಟ್(ಗಾಳಿಪಟ ಉತ್ಸವ) ಉದ್ಘಾಟಿಸಿ ಅವರು ಮಾತನಾಡಿದರು.

ಗಾಳಿಪಟ ತಯಾರಿಸಲು ಕೌಶಲ್ಯ ಅಗತ್ಯವಾಗಿದೆ.  ಪತಂಗ ಹಾರಿಸುವುದು ಮನರಂಜನೆ ಜೊತೆಗೆ ಅದರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ.  ಆದರೆ, ಇಂದಿನ ಆಧುನಿಕ ಆಟಗಳ ಭರಾಟೆಯಲ್ಲಿ ಗಾಳಿಪಟ ಮರೆಯಾಗುತ್ತಿದೆ.  ಇಂದಿನ ಯುವ ಪೀಳಿಗೆಗೆ ಗಾಳಿಪಟ ಹಾರಾಟ ಪರಿಚಯಿಸುವುದು ಸೂಕ್ತ ಎಂದು ಅವರು ಹೇಳಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಜಯಕುಮಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಆಚರಣೆ ಹಬ್ಬಗಳನ್ನು ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಕಾಲೇಜಿನಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತಿದೆ.  ವಿದ್ಯಾರ್ಥಿಗಳು ಕೂಡ ಸಂತೋಷದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಕಾಂ, ಬಿಬಿಎ ಮತ್ತು ಬಿಸಿಎ ವಿಭಾಗದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಡಾ. ಭಾರತಿ ಮಠ, ರಶ್ಮಿ ಪಾಟೀಲ, ದಾನಮ್ಮ, ಐಶ್ವೈರ್ಯ ಮಿರಜಕರ, ಪ್ರದೀಪ ಕುಂಬಾರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌