ವಿಜಯಪುರ: ವಿಜಯಪುರದ ಇತಿಹಾಸದಲ್ಲಿ ಅಚ್ಬಳಿಯದ ನೆನಪು ಉಳಿಸಿದ ಬ್ರಿಟಿಷ್ ವಾಯುದಳ (ಆರ್‌ಎಎಫ್)ದ ಅಧಿಕಾರಿಯಾಗಿದ್ದ ದಿ. ಅನ್ವರ ಹುಸೇನ ಫಾರೂಖಿ ಅವರ ಅಪ್ರಕಟಿತ ಇಂಗ್ಲೀಷ ಕವನಗಳ ಸಂಗ್ರಹ ವಾಯ್ಸ್ ಫ್ರಾಮ್ ಹೆವನ್ ಬಿಡುಡಗೆ ಸಮಾರಂಭ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಕವಿ, ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಡಾ. ಮಾಹಿರ್ ಮನ್ಸೂರ್, ದಿ. ಅನ್ವರ್ ಹುಸೇನ್ ಫಾರೂಖಿ ಅವರ ಕವಿತೆಗಳಲ್ಲಿ ಶರಣರ, ಸರ್ವಜ್ಞನ ಅನುಭವ ಹಾಗೂ ಎಲ್ಲ ಧರ್ಮಗಳ ಸಾರ ಹದವಾಗಿ ಮಿಶ್ರಣಗೊಂಡಿದೆ ಎಂದು ಹೇಳಿದರು.
ಮಹಿಳಾ ವಿಶ್ವವಿದ್ಯಾಲಯದ ಡೀನ್ ಮತ್ತು ಇಂಗ್ಲೀಷ ವಿಭಾಗದ ಮುಖ್ಯಸ್ಧ ಡಾ. ಪಿ. ಕಣ್ಣನ್ ಮಾತನಾಡಿ. ಇಂಥ ಅಮೂಲ್ಯ ಕಾವ್ಯ ಸಂಗ್ರಹ ಇಂಗ್ಲೀಷ ಇಲಿಯಟ್ ಹಾಗೂ ಈಟ್ಸ್ ಕವಿಗಳನ್ನು ನೆನಪಿಸುತ್ತದೆ. ಈ ಶ್ರೇಷ್ಠ ಕವಿತೆಗಳನ್ನು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಪದವಿ ಪಠ್ಯಗಳಲ್ಲಿ ಅಳವಡಿಸಿಕೊಳ್ಳಲಾಗುವದು ಎಂದು ಹೇಳಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ ವಿಭಾಗದ ಮುಖ್ಯಸ್ಥ ಡಾ. ಫಯಾಜ್ ಅಹ್ಮದ ಇಲಕಲ್ಲ, ಇಂಗ್ಲೀಷ ಕವಿ ಪ್ರೊ. ಅಬ್ದುಲ್ ರಜಾಕ ಅರಳಿಮಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ ವಿಭಾಗದ ಡಾ. ಅಲಿಯಾ ಮುಲ್ಲಾ ಬೆಂಗಳೂರಿನ ಅಲ್-ಅಮೀನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸರತಾಜ್ ಖಾನ್, ನಿವೃತ್ತ ಪ್ರಾಚಾರ್ಯ ಪ್ರೊ. ಜಿ. ಆರ್. ಕುಲಕರ್ಣಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟೆಯೊಲ್ ಮಚಾಡೋ, ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದ ಡಾ. ಮಲ್ಲಕಾರ್ಜುನ ಮೇತ್ರಿ ಮುಂತಾದವರು ಸ್ವರ್ಗದ ನುಡಿಗಳು ಕೃತಿಯ ಕುರಿತು ವಿಶ್ಲೇಷಿಸಿದರು.
ಸಿಕ್ಯಾಬ್ ಸಂಸ್ಥೆಯ ನಿರ್ದೇಶಕ ಸಲಾಹುದ್ದೀನ್ ಪುಣೇಕರ ಮಾತನಾಡಿ, ಇಂದಿನ ವಿದ್ಯಾರ್ಥಿ ಸಮೂಹ ಇಂಥ ಮೌಲ್ಯಯುತ ಕೃತಿಗಳನ್ನು ಓದಬೇಕು ಎಂದು ಹೇಳಿದರು.
ಆಲ್-ಅಮೀನ್ ಟ್ರಸ್ಟಿ ಮತ್ತು ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ಮಾನವೀಯತೆಯ ಪ್ರತಿರೂಪವೇ ಇಲ್ಲಿರುವ ಕವಿತೆಗಳು ಎಂದಪ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕವನ ಸಂಕಲನದ ಸಂಪಾದಕ ಭಾರತೀಯ ಇಂಗ್ಲೀಷ ಕವಿ ಪ್ರೊ. ಅಬ್ದುಲ್ ರಜಾಕ ಅರಳಿಮಟ್ಟಿ ಅವರನ್ನು ಫಾರೂಖಿ ಪರಿವಾರದ ಸದಸ್ಯರು ಸನ್ಮಾನಿದರು.
ಈ ಸಂದರ್ಭದಲ್ಲಿ ಸಿಕ್ಯಾಬ್ ಸಂಸ್ಥೆಯ ಕಾರ್ಯದರ್ಶಿ ಎ. ಎಸ್. ಪಾಟೀಲ, ಹಿರಿಯ ಪತ್ರಕರ್ತ ರಫೀ ಭಂಡಾರಿ, ಮುಸ್ತಾಕ್ ಹುಸೇನ ಫಾರೂಖಿ, ಸಮಾಜ ಸೇವಕ ಶಿವಶರಣ ಪಾಟೀಲ, ಪ್ರಾಚಾರ್ಯ ಮನೋಜ ಕೊಟ್ನಿಸ್, ಡಾ. ಖಾಲಿದ್ ಫಾರೂಖಿ, ಅಮೇರಿಕೆದ ಮುಬಾಶೀರುದ್ದಿನ್ ಫಾರೂಖಿ, ವಿಜಯಪುರದ ಕನ್ನಡ, ಇಂಗ್ಲೀಷ, ಉರ್ದು, ಪರ್ಶಿಯನ್, ಹಿಂದಿ ಭಾಷೆಯ ಕವಿಗಳು, ಸಾಹಿತ್ಯ ಪ್ರಿಯರು, ವಿಮರ್ಶಕರು ಉಪಸ್ಥಿತರಿದ್ದರು.
ಡಾ. ಮಹಮ್ಮದ ಸಮೀಯುದ್ದೀನ್ ಪವಿತ್ರ ಖುರಾನ್ ಪಠಿಸಿದರು. ಡಾ. ಸಾದಿಕಾ ದಫೇದಾರ ನಿರೂಪಿಸಿದರು. ದಿ. ಅನ್ವರ ಹುಸೇನ ಫಾರೂಖಿ ಅವರ ಪುತ್ರ ಮುಸ್ತಾಕ್ ಹುಸೇನ ಫಾರೂಖಿ ವಂದಿಸಿದರು.