ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜನವರಿ 26 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿರುವ ಸ್ತಬ್ಧಚಿತ್ರ ವಾಹನಕ್ಕೆ ಮಾರ್ಗನಕ್ಷೆ (ರೂಟ್ ಮ್ಯಾಪ್) ಸಿದ್ಧಪಡಿಸಲಾಗಿದ್ದು, ಮಾರ್ಗನಕ್ಷೆಯಂತೆ ಸ್ತಬ್ಧಚಿತ್ರ ವಾಹನ ಸಂಚರಿಸಲು ಎಲ್ಲ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾದ ಎರಡೂ ಸ್ತಬ್ಧಚಿತ್ರಗಳು ಜಿಲ್ಲೆಯಾದ್ಯಂತ 27 ದಿನಗಳ ಕಾಲ ಸಂಚರಿಸಲಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳು ಒಳ್ಳಗೊಳ್ಳಬೇಕು. ತಾಲೂಕಾ ಕೇಂದ್ರದಲ್ಲಿ ಸ್ತಬ್ಧಚಿತ್ರ ಆಗಮಿಸುವ ಸಂದರ್ಭದಲ್ಲಿ ಎಲ್ಲ ತಹಶೀಲ್ದಾರರು, ನೋಡಲ್ ಅಧಿಕಾರಿಗಳು ಸ್ಥಳದಲ್ಲಿದ್ದು, ಭವ್ಯವಾಗಿ ಸ್ವಾಗತಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ವಿಜಯಪುರದಿಂದ ಹಾಗೂ ಇನ್ನೊಂದು ಇಂಡಿಯಿAದ ಸ್ತಬ್ಧಚಿತ್ರ ಸಂಚರಿಸಲಿದೆ. ಜಿಲ್ಲೆಯ 13 ತಾಲೂಕಿನ 211 ಗ್ರಾಮ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಪುರಸಭೆ ವ್ಯಾಪ್ತಿಗಳಲ್ಲಿ ಸ್ತಬ್ಧಚಿತ್ರ ಸಂಚರಿಸಲಿವೆ. ಸ್ತಬ್ಧಚಿತ್ರವಾಹನಕ್ಕೆ ಸಂಭ್ರಮದಿAದ ಅದ್ದೂರಿಯಾಗಿ ಸ್ವಾಗತಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ವಿಜಯಪುರ ಉಪವಿಭಾಗದಿಂದ ಸಂಚರಿಸುವ ಸ್ತಬ್ಧಚಿತ್ರ ವಾಹನ ವಿಜಯಪುರ ನಗರದಿಂದ ಆರಂಭಗೊAಡು, ಐನಾಪುರ, ಮದಭಾವಿ, ಹೊನ್ನುಟಗಿ, ಹೆಗಡಿಹಾಳ, ಕುಮಟಗಿ, ಹಡಗಲಿ, ಶಿವಣಗಿ, ಆಹೇರಿ, ಜಂಬಗಿ, ನಾಗಠಾಣ, ಅಲಿಯಾಬಾದ, ಗುಣಕಿ, ತಿಡಗುಂದಿ, ಮಖಣಾಪುರ, ಕನ್ನೂರ, ಹಿಟ್ನಳ್ಳಿ, ಜುಮನಾಳ, ತೊರವಿ, ಬರಟಗಿ, ಜಾಲಗೇರಿ, ಲೋಹಗಾಂವ, ಸಿದ್ದಾಪುರದ, ಟಕ್ಕಳಕಿ, ಘೋಣಸಗಿ, ಕನಮಡಿ, ಬಿಜ್ಜರಗಿ, ಬಾಬಾನಗರ, ಹೊನವಾಡ, ಕೊಟ್ಯಾಳ, ತಿಕೋಟಾ, ಹೊನಗನಹಳ್ಳಿ, ಕಾರಜೋಳ, ಕಾಖಂಡಕಿ, ಬಬಲೇಶ್ವರ, ನಿಡೋಣಿ, ಕುಮಠೆ, ಅರ್ಜುಣಗಿ, ಹಲಗಣಿ, ಕಂಬಾಗಿ, ಬೋಳಚಿಕ್ಕಲಕಿ, ಗುಣದಾಳ, ಹೋಸೂರ, ದೇವರಗೆನ್ನೂರ, ಜೈನಾಪುರ, ಮಮದಾಪುರ, ಸಾರವಾಡ, ಮುಳವಾಡ, ತಳೇವಾಡ, ಮಸೂತಿ, ಮಲಘಾಣ, ರೋಣಿಹಾಳ, ಕೊಲ್ಹಾರ, ಹಣಮಾಪುರ, ಸಿದ್ದನಾಥ ಆರ್.ಸಿ., ಅರಷಣಗಿ, ತೆಲಗಿ, ಕೂಡಗಿ, ಮುತ್ತಗಿ, ಯರನಾಳ, ಮನಗೂಳಿ, ಉಕ್ಕಲಿ, ಡೋಣೂರ, ಮಸಬಿನಾಳ, ಬಸವನಬಾಗೇವಾಡಿ, ಇಂಗಳೇಶ್ವರ, ದಿಂಡವಾರ, ವಡವಡಗಿ, ಕೆ.ಸಾಲವಾಡಗಿ, ಬ್ಯಾಕೋಡ, ಹೂವಿನಹಿಪ್ಪರಗಿ, ಹುಣಶ್ಯಾಳ ಪಿಬಿ, ನರಸಲಗಿ, ಮಣೂರ, ಕಣಕಾಳ, ರೂಡಗಿ, ಬಸರಕೋಡ, ಢವಳಗಿ, ಮಡಿಕೇಶ್ವರ ಹಾಗೂ ಇಂಗಳಗೇರಿ ಗ್ರಾಮಗಳಲ್ಲಿ ಸಂಚರಿಸಲಿದೆ.
ಅದರಂತೆ ಇಂಡಿ ಉಪವಿಭಾಗದಿಂದ ಸಂಚರಿಸಲಿರುವ ಸ್ತಬ್ಧಚಿತ್ರ ವಾಹನ ಇಂಡಿ, ಚಿಕ್ಕಬೇವನುರ, ಅಂಜುಟಗಿ, ಬಳ್ಳೊಳ್ಳಿ, ಝಳಕಿ, ಹಲಸಂಗಿ, ಧೂಳಖೇಡ, ಲೋಣಿ, ಕೆರೂರ, ಹತ್ತಳ್ಳಿ, ಉಮರಜ, ರೇವತಗಾಂವ, ನಿವರಗಿ, ಚಡಚಣ, ಬರಡೋಲ, ದೇವರನಿಂಬರಗಿ, ಜಿಗಜಿವಣಗಿ, ನಂದರಗಿ, ಇಂಚಗೇರಿ, ಕಪನಿಂಬರಗಿ, ಹಡಲಸಂಗ, ಕೋಳುರಗಿ, ಹೊರ್ತಿ, ಬಸನಾಳ, ತಾಂಬಾ, ಬೆನಕನಹಳ್ಳಿ, ಅಥರ್ಗಾ, ತೆನ್ನಿಹಳ್ಳಿ, ಶಿರಶ್ಯಾಡ, ಸಂಗೋಗಿ, ಕುಂಟೋಜಿ, ಮುದ್ದೇಬಿಹಾಳ, ಬಿದರಕುಂದಿ, ಕವಡಿಮಟ್ಟಿ, ಹಿರೇಮುರಾಳ, ಅಡವಿಸೋಮನಾಳ, ನಾಗರಬೆಟ್ಟ, ನಾಗರಬೇನಾಳ, ಬಿಜ್ಜೂರ, ರಕ್ಕಸಗಿ, ಆಲೂರ, ತಂಗಡಗಿ, ಕೋಳೂರ, ಹಡಲಗೇರಿ, ಯರಝರಿ, ಕಾಳಗಿ, ಹುಲ್ಲೂರ, ಇಟಗಿ, ಹೆಬ್ಬಾಳ, ಬೀರಲದಿನ್ನಿ, ಗೊಳಸಂಗಿ, ವಂದಾಲ, ಚಿಮ್ಮಲಗಿ, ಗಣಿ, ಬೇನಾಳ, ಆಲಮಟ್ಟಿ, ಯಲಗೂರ, ಬಳಬಟ್ಟಿ, ನಿಡಗುಂದಿ, ಮಸಳಿ ಬಿ.ಕೆ., ಅರ್ಜುಣಗಿ, ನಾದ, ಸಾಲೋಟಗಿ, ರೂಗಿ, ತಡವಲಗಾ, ನಿಂಬಾಳ ಕೆ.ಡಿ., ಹಂಜಗಿ, ಚವಡಿಹಾಳ, ಬಬಲಾದ, ಭತಗುಣಕಿ, ಹಿಂಗಣಿ, ಅಹಿರಸಂಗ, ಲಚ್ಯಾಣ, ಪಡನೂರ, ಅಗರಖೇಡ, ಗುಬ್ಬೇವಾಡ, ಹಿರೇಬೇವನೂರ, ಆಲೂರ, ಇಂಗಳಗಿ, ಲಾಲಸಂಗಿ, ಖೇಡಗಿ, ಮಿರಗಿ, ರಾಮನಹಳ್ಳಿ, ಬಳಗಾನೂರ, ಕೋರಹಳ್ಳಿ, ಆಲಮೇಲ, ಕಡಣಿ, ದೇವಣಗಾಂವ, ಬಮ್ಮನಹಳ್ಳಿ, ದೇವರನಾವದಗಿ, ಮಲಘಾಣ, ಕಕ್ಕಳಮೇಲಿ, ಬಗಲೂರ, ಮೋರಟಗಿ, ಗುತ್ತರಗಿ, ಗಬಸಾವಳಗಿ, ಯರಗಲ್ಲ ಬಿ.ಕೆ., ನಾಗಾವಿ ಬಿ.ಕೆ., ಸುಂಗಠಾಣ, ಯಂಕAಚಿ, ಗೊಲಗೇರಿ, ಹೊನ್ನಲ್ಳಿ, ಹಂದಿಗನೂರ, ಗುಬ್ಬೇವಾಡ, ಬ್ಯಾಕೋಡ, ರಾಂಪೂರ ಪಿಎ, ಚಾಂದಕವಠೆ, ಹಿಕ್ಕನಗುತ್ತಿ, ಚಟ್ಟರಕಿ, ಬಂದಾಳ, ಕನ್ನೊಳ್ಳಿ, ಕೊಕಟನೂರ, ಸಿಂದಗಿ, ದೇವರಹಿಪ್ಪರಗಿ, ಮುಳಸಾವಳಗಿ, ಹಿಟ್ನಳ್ಳಿ, ಚಿಕ್ಕರೂಗಿ, ಹರನಾಳ, ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಯಾಳವಾರ, ಮಣ್ಣೂರ, ಜಾಲವಾದ, ಕೊಂಡಗೂಳಿ, ಕೆರುಟಗಿ, ಯಲಗೋಡ, ಹುಣಶ್ಯಾಳ, ಕಳಕೇರಿ, ಬೆಕಿನಾಳ, ಅಸ್ಕಿ, ಭಂಟನೂರ, ಕೋಡಗಾನೂರ, ಬಸಾಲವಾಡಗಿ, ತುಂಬಗಿ, ಬೊಮ್ಮನಹಳ್ಳಿ, ತಾಳಿಕೋಟೆ, ಹಿರೂರ, ಸಾಸನೂರ, ಕೋಣ್ಣೂರ, ಮಿಣಜಗಿ, ಬಾವೂರ ಹಾಗೂ ಮೂಕಿಹಾಳ ಗ್ರಾಮಗಳಲ್ಲಿ ಸಂಚರಿಸಲಿದೆ.
ಸ್ತಬ್ಧಚಿತ್ರ ವಾಹನ ತಂಗಲಿರುವ ಸ್ಥಳದಲ್ಲಿ ಗ್ರಾಮ ಪಂಚಾಯತ್‌ವಾರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ವಿವಿಧ ಹೈಸ್ಕೂಲ್ ಮಕ್ಕÀಳನ್ನೊಳಗೊಂಡು ಸಂವಿಧಾನಕ್ಕೆ ಸಂಬAಧಿಸಿದ ಕ್ವೀಜ್ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಅರ್ಧ ಗಂಟೆ ಕಾರ್ಯಕ್ರಮಗಳ ಆಯೋಜಿಸಬೇಕು. ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ನೋಡಲ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅಡಚಣೆ ಉಂಟಾಗದAತೆ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸ್ತಬ್ಧಚಿತ್ರ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಕೈಗೊಳ್ಳಬೇಕು. ಸ್ತಬ್ದಚಿತ್ರ ವಾಹನ ಸಂಚರಿಸಲಿರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ಒದಗಿಸಿ ಬಂದೋಬಸ್ತ ವ್ಯವಸ್ಥೆ ಕೈಗೊಳ್ಳಬೇಕು. ಆಯಾ ತಹಶೀಲ್ದಾರು ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಸಮಸ್ಯೆೆ್ಥಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಾಗೃತಿ ಜಾಥಾ ಸ್ತಬ್ಧಚಿತ್ರ ಗ್ರಾಮ ಪಂಚಾಿತಿ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತಂಗುವ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತಿ, ಉಪನ್ಯಾಸಕರು ಸೇರಿದಂತೆ ನುರಿತ ವಿಷಯ ತಜ್ಞರನ್ನು ಆಹ್ವಾನಿಸಿ ಅವರಿಂದ ಸಂವಿಧಾನ ಕುರಿತು ಉಪನ್ಯಾಸ ಕಾರ್ಯಕ್ರಮಗಳ ಆಯೋಜನೆ, ಸ್ಥಳೀಯ ಕಲಾವಿದರಿಂದ ವಿವಿಧ ಕಲೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲಿಕ ಮಾನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪೂರ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ,ವಿಜಯಪುರ ತಹಶೀಲ್ದಾರ ಶ್ರೀಮತಿ ಕವಿತಾ ಸೆರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಹಾಗೂ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.