ವಿಜಯಪುರ: ವಿಜಯಪುರದಿಂದ ತಿರುಪತಿಗೆ ನೇರ ರೈಲು ಸಂಚಾರ ಆರಂಭಿಸುವxತೆ ಸಂಸದ ರಮೇಶ ಜಿಗಜಿಣಗಿ ಅವರು ಹುಬ್ಬಳ್ಳಿ ರೇಲ್ವೆ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯ ಜನತೆ ವಿಜಯಪುರದಿಂದ ತಿರುಪತಿಯ ಮದ್ಯೆ ರೈಲುಸೇವೆ ಪ್ರಾರಂಭಿಸುವಂತೆ ಬಹುದಿನಗಳಿಂದ ಮನವಿ ಮಾಡುತ್ತಿದ್ದಾರೆ. ಈ ಕುರಿತು ಈಗಾಗಲೇ ಕೇಂದ್ರ ರೇಲ್ವೆ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ. ಈ ಭಾಗದಿಂದ ತಿರುಪತಿಗೆ ನೇರ ರೈಲು ಸೇವ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ವಿಜಯಪುರ- ತಿರುಪತಿ ಮಧ್ಯೆ ರೈಲು ಸಂಚಾರ ಪ್ರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ರಮೇಶ ಜಿಗಜಿಣಗಿ ಪತ್ರ ಬರೆದಿದ್ದಾರೆ.