ಎತ್ತುಗಳ ಸಂರಕ್ಷಣೆ ಜನಜಾಗೃತಿಗಾಗಿ ಅಭಿ ಫೌಂಡೇಶನ್ ವತಿಯಿಂದ ನಂದಿಯಾತ್ರೆ

ವಿಜಯಪುರ: ಎತ್ತುಗಳು ಕೃಷಿಕರಿಗೆ ಕುಟುಂಬ ಸದಸ್ಯರಿದ್ದಂತೆ.  ಆದರೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಇತರ ಕಾರಣಗಳಿಂದಾಗಿ ಎತ್ತುಗಳ ಜಾಗದಲ್ಲಿ ಯಂತ್ರೋಪಕರಣಗಳು ಅವರಿಸುತ್ತಿವೆ.  ಇದರಿಂದ ಎತ್ತುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದು ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಅಭಿ ಫೌಂಡೆಶನ್ ವತಿಯಿಂದ ಎತ್ತುಗಳ ಸಂರಕ್ಷಣೆಯ ಮಹತ್ವ ತಿಳಿಸಲು ನಂದಿಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ.  ಗ್ರಾಮದ ಎತ್ತು ಸಾಕಾಣಿಕೆದಾರರ ನೇತೃತ್ವದಲ್ಲಿ ಜೋಡೆತ್ತಿನ ಬಂಡೆಯ ಮೇಲೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರವಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ತಿಕೋಟಾ ತಾಲೂಕಿನ ಕನಮಡಿಯಲ್ಲಿ ಎತ್ತುಗಳ ಮಹತ್ವದ ಕುರಿತು ಜಾಗೃತಿಗಾಗಿ ನಂದಿಯಾತ್ರೆ ನಡೆಯಿತು

ಈ ಸಂದರ್ಭದಲ್ಲಿ ಗ್ರಾಮದ 43 ಎತ್ತಿನ ಬಂಡಿಗಳು ಜನಜಾಗೃತಿ ಮೂಡಿಸುವ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನಮಡಿ ಗ್ರಾಮದ ಮುಖಂಡ ಸುಭಾಸಗೌಡ ಪಾಟೀಲ, ಎತ್ತು ಆಧಾರಿತ ಕೃಷಿಕರನ್ನು ಉಳಿಸುವುದು ಈಗ ತುರ್ತು ಅಗತ್ಯವಾಗಿದೆ  ಗಿದೆ ಎಂದು ಹೇಳಿದರು.

ಗಜಾನನ ಬ್ಯಾಂಕಿನ ಅಧ್ಯಕ್ಷ ಮಲ್ಲಪ್ಪ ರಾಮಣ್ಣ ತುಂಗಳ ಮಾತನಾಡಿ, ರಾಜ್ಯಾದ್ಯಂತ ಎತ್ತು ಆಧಾರಿತ ಕೃಷಿಕರು ಒಂದಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಸಮಯ ಬಂದಿದೆ ಎಂದು ಹೇಳಿದರು.

ಅಭೀ  ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ, ಗ್ರಾಮದ ಮುಖಂಡರಾದ ಸದಾಶಿವ ಮಲ್ಲಪ್ಪ ಗೌರಗೌಂಡ, ಗಂಗಪ್ಪ ಸಿದ್ರಾಮ‌ ಕೊಟ್ಟಲಗಿ,  ಮಾನಿಂಗ ರುದ್ರಪ್ಪ ಮಟದಾನ, ಶರಣಪ್ಪ ಮಲ್ಲಪ್ಪ ಅವಟಿ‌ ಹಾಗೂ ಮಾನಿಮಗ ಸಿದ್ದಪ್ಪ ಜವನರ ಮುಂತಾದವರ ನೇತೃತ್ವದಲ್ಲಿ ನಂದಿ ಯಾತ್ರೆ ಕಾರ್ಯಕ್ರಮ ನಡೆಯಿತು.

Leave a Reply

ಹೊಸ ಪೋಸ್ಟ್‌