ದುಬೈನಲ್ಲಿ ಜೈ ಶ್ರೀರಾಮ ಎಂದು ಸಂಭ್ರಮಿಸಿದ ಬಸವನಾಡಿನ ಪ್ರವಾಸಿಗರು

ವಿಜಯಪುರ: ಈಗ ದೇಶಾದ್ಯಂತ ಶ್ರೀರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಸಂಚಲನ ಸೃಷ್ಠಿಸಿದೆ.  ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗುತ್ತಿದ್ದರೆ, ಎಲ್ಲ ಕಡೆ ರಾಮಭಕ್ತರು ನಾನಾ ರೀತಿಯಲ್ಲಿ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಇದೇ ರೀತಿ, ದುಬೈ ಪ್ರವಾಸದಲ್ಲಿರುವ ಬಸವನಾಡು ವಿಜಯಪುರ ಜಿಲ್ಲೆಯ ಹಲವಾರು ಜನರು ತಾವೀಗ ಪ್ರವಾಸ ಕೈಗೊಂಡಿರುವ  ಸ್ಖಳದಲ್ಲಿಯೇ ಕೈಯ್ಯಲ್ಲಿ ಭಗವಾ ಧ್ವಜ ಹಿಡಿದು ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.  ವಿಜಯಪುರ ನಗರದ ಉದ್ಯಮಿ ಪ್ರಕಾಶ ಪಾಟೀಲ ಹಾಲಳ್ಳಿ ತಮ್ಮ ಪತ್ನಿ ಮಹೇಶ್ವರಿ ಪಾಟೀಲ, ಶರಣಪ್ಪ ಮೇಡೆದಾರ ಮತ್ತು ಸುಜಾತಾ ಮೇಡೆದಾರ, ಎಸ್. ಜಿ. ಕೋರಿ, ಸುಜಾತಾ ಕೋರಿ, ಶಿವಾನಂದ ಬ್ಯಾಕೋಡ, ವಿದ್ಯಾ ಬ್ಯಾಕೋಡ, ಜಿ. ಎಂ. ಸಿಂಧೂರ, ಮೈನಾ ಸಿಂಧೂರ, ರಾಜಶೇಖರ ಉಮದಿ ಮತ್ತು ಮಂಗಲಾ ಉಮದಿ ದಂಪತಿ ರಾಮಿ ರಿಜೆಟ್ ಪ್ಯಾಲೇಸ್ ಬಳಿ ಸೇರಿ ಸಂಭ್ರಮಿಸಿದ್ದಾರೆ.

ದುಬೈನಲ್ಲಿ ಸಂಭ್ರಮಿಸಿದ ಪ್ರಕಾಶ ಪಾಟೀಲ, ಮಹೇಶ್ವರಿ ಪಾಟೀಲ ದಂಪತಿ

ಭಾರತದಲ್ಲಿ ಇವರ ಸಂಬಂಧಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.  ಆದರೆ, ತಾವು ಭಾರತದಲ್ಲಿ ಇರದಿದ್ದರೇನಂತೆ ತಾವಿರುವ ಕಡೆಯಲ್ಲಿಯೇ ರಾಮ ಮಂದಿರ ಲೋಕಾರ್ಪಣೆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಜೈ ಶ್ರೀರಾಮ ಘೋಷಣೆ ಹಾಕುವ ಮೂಲಕ ವಿದೇಶದಿಂದಲೇ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌