ಎನ್ಇಪಿ ಮುಂದುವರಿಸಲು ಆಗ್ರಹ- ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ನಿಂದ ರಾಜ್ಯಪಾಲರಿಗೆ ವರದಿ ಸಲ್ಲಿಕೆ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮುಂದುವರೆಸುವಂತೆ ಆಗ್ರಹಿಸಿ ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶಷನ್ ವತಿಯಿಂದ ರಾಜ್ಯಪಾಲ ಥಾವರಚಂದ ಗೆಹ್ಲೊಟ್ ಅವರಿಗೆ ವರದಿಯನ್ನು ಸಲ್ಲಿಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ-2020 ಅಳವಡಿಕೆಯನ್ನು ರಾಜ್ಯದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಫೋರಮ್ ವತಿಯಿಂದ ರಾಜ್ಯಾದ್ಯಂತ ಸಹಿ ಸಂಗ್ರಹಿಸಲಾಗಿದೆ. 34 ಶೈಕ್ಷಣಿಕ ಜಿಲ್ಲೆಗಳ 168 ತಾಲೂಕುಗಳ 2630 ಶಾಲೆಗಳು, 83600 ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು, 26980 ಪೋಷಕರು, 19327 ಆನಲೈನ್ ಮೂಲಕ ಕ್ಯಾಂಪೇನ್ ಸಹಿ, 8,88,173 ವಿದ್ಯಾರ್ಥಿಗಳು ಸೇರಿ ಒಟ್ಟು 10 […]
ಓಐಡಿವೈಓ ವತಿಯಿಂದ ನೇತಾಜಿ ಸುಭಾಸಚಂದ್ರ ಬೋಸ ಅವರ 127ನೇ ಜನ್ಮದಿನಾಚರಣೆ
ವಿಜಯಪುರ: ಎಐಡಿವೈಓ ವತಿಯಿಂದ ನಗರದ ಹುತಾತ್ಮ ಸರ್ಕಲ್ ಮತ್ತು ಸರಕಾರಿ ಐಟಿಐ ಕಾಲೇಜ್‌ನಲ್ಲಿ ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ನೇತಾಜಿ ಸುಭಾಸಚಂದ್ರ ಬೋಸ್‌ರವರ 127ನೇ ಜನ್ಮದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಇಂದಿನ ಯುವಜನರಿಗೆ ನೇತಾಜಿಯವರ ಜೀವನ ಚರಿತ್ರೆ ಆದರ್ಶವಾಗಿರಬೇಕು. ನೇತಾಜಿಯವರು ಜೀವನದುದ್ದಕ್ಕೂ ಸಂಧಾನತೀತವಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಎರಡು ಬಾರಿ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿ ಪೂರ್ಣ ಸ್ವರಾಜ್ಯದ ಬಗ್ಗೆ ಹಾಗೂ ಕಾರ್ಮಿಕ ವರ್ಗ ಅಧಿಕಾರಕ್ಕೆ ಬರಬೇಕು ಎಂದು ಸ್ಪಷ್ಟವಾದ […]
ಆರೋಗ್ಯ ಎಲ್ಲ ಸಂಪತ್ತಿಗಿಂತ ದೊಡ್ಡದು- ಹಿಟ್ಟಿನಹಳ್ಳಿ ಕೃಷಿ ಕಾಲೇಜಿನ ವಿದ್ಯಾಧಿಕಾರಿ ಡಾ. ಭೀಮಪ್ಪ
ವಿಜಯಪುರ: ಮನುಷ್ಯನಿಗೆ ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ದೊಡ್ಡದು. ಅದನ್ನು ಸರಿಯಾಗಿ ಕಾಯ್ದುಕೊಳ್ಳಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಬೀಮಪ್ಪ ಹೇಳಿದರು. ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರ. ಜಿಲ್ಲಾ ಆಡಳಿತ. ಜಿಲ್ಲಾ ಪಂಚಾಯಿತಿ. ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ. ಜಿಲ್ಲಾ ಆಸ್ಪತ್ರೆ ಪಿಪಿಟಿಸಿಟಿ ವಿಭಾಗ ವಿಜಯಪುರ. ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ಹಂತದ ಸಮುದಾಯ ಆಧಾರಿತ ಆರೋಗ್ಯ […]
ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ : ಪರಿಶೀಲನೆ
ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ವಿದ್ಯಾಲಯದ ಸಲಹಾ ಸಮಿತಿ ಸಭೆ ನಡೆಸಿದ ಅವರು, ವಿದ್ಯಾಲಯದ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಮಕ್ಕಳ ಕೌಶಲ್ಯತೆಯನ್ನು ಹೆಚ್ಚಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. […]
ವಿಜಯಪುರ ನಗರದ ದರ್ಗಾ ನಗರ ಆರೋಗ್ಯ ಕೇಂದ್ರದಲ್ಲಿ ವಿಶೇಷ ಆರೋಗ್ಯ ತಪಾಸಣೆ
ವಿಜಯಪುರ: ನಗರದ ದರ್ಗಾ ನಗರ ಆರೋಗ್ಯ ಕೇಂದ್ರದಲ್ಲಿ ಹಿರಿಯ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ವಿದ್ಯಾ ಥೊಬ್ಬಿ ಮತ್ತು ತಂಡ ಮಹಿಳೆಯರ ಗರ್ಭಾಶಯ ಹಾಗೂ ಗರ್ಭಾಶಯ ಕೊರಳಿನ ಕ್ಯಾನ್ಸರ್ ಪತ್ತೆ ಹಚ್ಚುವ ವಿಶೇಷ ತಪಾಸಣೆ ನಡೆಸಿದರು. 25 ಮಹಿಳೆಯರ ತಪಾಸಣೆ ನಡೆಸಲಾಗಿದ್ದು, ಚಿಕಿತ್ಸೆ ಅವಶ್ಯಕವಿರುವ ಮಹಿಳೆಯರನ್ನು ಮೇಲ್ದರ್ಜೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು. ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಈರಣ್ಣಾ ಧಾರವಾಡಕರ, ಹಿರಿಯ ಸಮುದಾಯ ಆರೋಗ್ಯಾಧಿಕಾರಿ ನಾಗರತ್ನಾ […]