ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮುಂದುವರೆಸುವಂತೆ ಆಗ್ರಹಿಸಿ ಪಿಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶಷನ್ ವತಿಯಿಂದ ರಾಜ್ಯಪಾಲ ಥಾವರಚಂದ ಗೆಹ್ಲೊಟ್ ಅವರಿಗೆ ವರದಿಯನ್ನು ಸಲ್ಲಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಅಳವಡಿಕೆಯನ್ನು ರಾಜ್ಯದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಫೋರಮ್ ವತಿಯಿಂದ ರಾಜ್ಯಾದ್ಯಂತ ಸಹಿ ಸಂಗ್ರಹಿಸಲಾಗಿದೆ. 34 ಶೈಕ್ಷಣಿಕ ಜಿಲ್ಲೆಗಳ 168 ತಾಲೂಕುಗಳ 2630 ಶಾಲೆಗಳು, 83600 ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು, 26980 ಪೋಷಕರು, 19327 ಆನಲೈನ್ ಮೂಲಕ ಕ್ಯಾಂಪೇನ್ ಸಹಿ, 8,88,173 ವಿದ್ಯಾರ್ಥಿಗಳು ಸೇರಿ ಒಟ್ಟು 10 ಲಕ್ಷ 16 ಸಾವಿರದ 80 ಜನ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಿ ಹಾಕಿದ್ದಾರೆ. ಈ ಸಹಿಹಾಕಿರುವ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ, ಹಿರಿಯ ಪತ್ರಕರ್ತ ಮತ್ತು ನಿವೃತ್ತ ಪ್ರಾಧ್ಯಾಪಕ ಪ್ರೊ. ರವೀಂದ್ರ ರೇಶ್ಮೆ, ಶಿಕ್ಷಣ ಇಲಾಖೆ ಮಾಜಿ ಸಚಿವ ಬಿ. ಸಿ. ನಾಗೇಶ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಶಿಕ್ಷಣ ತಜ್ಞೆ ಪ್ರೊ. ನಂದಿನಿ ಲಕ್ಷ್ಮಿಕಾಂತ, ಹುಬ್ಬಳ್ಳಿ ಕೆಎಲ್‌ಇ, ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ. ವೀರೇಶ ಬಾಳಿಕಾಯಿ, ಹುಬ್ಬಳ್ಳಿ ಕೆ. ಎಸ್. ಎಸ್. ಕಾಲೇಜಿನ ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ ಮತ್ತು ಶಿಕ್ಷಣ ತಜ್ಞ ಡಾ. ಟಿ. ಎಂ. ಗಿರೀಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.