ವಿಜಯಪುರ: ನಗರದ ದರ್ಗಾ ನಗರ ಆರೋಗ್ಯ ಕೇಂದ್ರದಲ್ಲಿ ಹಿರಿಯ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ವಿದ್ಯಾ ಥೊಬ್ಬಿ ಮತ್ತು ತಂಡ ಮಹಿಳೆಯರ ಗರ್ಭಾಶಯ ಹಾಗೂ ಗರ್ಭಾಶಯ ಕೊರಳಿನ ಕ್ಯಾನ್ಸರ್ ಪತ್ತೆ ಹಚ್ಚುವ ವಿಶೇಷ ತಪಾಸಣೆ ನಡೆಸಿದರು. 25 ಮಹಿಳೆಯರ ತಪಾಸಣೆ ನಡೆಸಲಾಗಿದ್ದು, ಚಿಕಿತ್ಸೆ ಅವಶ್ಯಕವಿರುವ ಮಹಿಳೆಯರನ್ನು ಮೇಲ್ದರ್ಜೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.
ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಈರಣ್ಣಾ ಧಾರವಾಡಕರ, ಹಿರಿಯ ಸಮುದಾಯ ಆರೋಗ್ಯಾಧಿಕಾರಿ ನಾಗರತ್ನಾ ಚೌಧರಿ, ಸಾಯಿಪ್ರಸಾದ, ಬಾಲು, ಮರೆಮ್ಮಾ, ಜಯಶ್ರೀ, ಪಲ್ಲವಿ, ವಾಣಿ, ಮಲ್ಲಮ್ಮಾ ಶುಶ್ರೂಷಕಾಧಿಕಾರಿ ಶಬಾನಾ, ಪೂಜಾ, ಔಷಧಿ ಅಧಿಕಾರಿ ಅಮೃತ, ಪ್ರಯೋಗಾಲದ ಹನುಮಂತ ಬನೆಟ್ಟಿ, ಸುನೀತಾ, ಶೃತಿ ಕುಲಕರ್ಣಿ, ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.