ವಿಜಯಪುರ: ಮನುಷ್ಯನಿಗೆ ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹಳ ದೊಡ್ಡದು. ಅದನ್ನು ಸರಿಯಾಗಿ ಕಾಯ್ದುಕೊಳ್ಳಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಬೀಮಪ್ಪ ಹೇಳಿದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರ. ಜಿಲ್ಲಾ ಆಡಳಿತ. ಜಿಲ್ಲಾ ಪಂಚಾಯಿತಿ. ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ. ಜಿಲ್ಲಾ ಆಸ್ಪತ್ರೆ ಪಿಪಿಟಿಸಿಟಿ ವಿಭಾಗ ವಿಜಯಪುರ. ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ಹಂತದ ಸಮುದಾಯ ಆಧಾರಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತು ಸದೃಢ ಆರೋಗ್ಯವಂತ ಜನರು ತುಂಬಾ ವಿರಳ ಆದಕಾರಣ ಎಲ್ಲೆಂದರಲ್ಲಿ ಆಸ್ಪತ್ರೆಗಳನ್ನು ಕಾಣುತ್ತಿದ್ದೇವೆ ದುಡಿಮೆಯ ಅರ್ಧ ಭಾಗವನ್ನು ಆಸ್ಪತ್ರೆಯ ಚಿಕಿತ್ಸೆಗಾಗಿ ಬರುಸುತಿದ್ದೇವೆ. ಆಹಾರ ಪದ್ಧತಿ, ದುಶ್ಚಟಗಳಿಂದ ದೂರವಿರುವುದು, ನಿಯಮಿತ ವ್ಯಾಯಾಮ ಅಳವಡಿಸಿಕೊಂಡರೆ ಮಾತ್ರ ನಾವು ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವಿದೆ ಎಂದು ಅವರು ಹೇಳಿದರು. ಅಲ್ಲದೇ, ಅವರು ಸ್ವತಃ ಮಧುಮೆಹ ಮತ್ತು ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡರು.
ಜಿಲ್ಲಾ ಸಮೀಕ್ಷಾ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕವಿತಾ ದೊಡ್ಡಮನಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರ್ಯಕ್ರಮ ಅಧಿಕಾರಿ ಡಾ. ಅಪ್ಪಾಸಾಹೇಬ ಇನಾಮದಾರ, ಮೈಕ್ರೋ ಬಯೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸಲು, ಜಿಲ್ಲಾ ಮೇಲ್ವಿಚಾರಕ ಬಾಬುರಾವ ತಳವಾರ, ಎ.ಆರ್.ಟಿ ಕೇಂದ್ರದ ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ, ಶಿಬಿರ ಸಂಘಟಿಸಿದ ಜಿಲ್ಲಾ ಆಸ್ಪತ್ರೆಯ ಪಿಪಿಟಿಸಿಟಿ ವಿಭಾಗದ ಆಪ್ತ ಸಮಾಲೋಚಕಿ ಆರತಿ ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಶಿಬಿರದಲ್ಲಿ 176 ಜನರ ಎಚ್ಐವಿ, ಮಧುಮೇಹ ಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡರು. ಸುಮಾರು 500ಕ್ಕಿಂತ ಹೆಚ್ಚು ಜನ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಠ್ಠಲ ವಾಲಿಕಾರ, ಗೀತಾ ಹನುಮಂತರಾವ, ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಂಪೂರ್ಣ ಸುರಕ್ಷಾ, ಸ್ವಾಮಿ ವಿವೇಕಾನಂದ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.