ಶಾಸಕ ಸುನೀಲಗೌಡ ಪಾಟೀಲ ಪ್ರಯತ್ನದ ಫಲಶೃತಿ- ಗಣರಾಜ್ಯೋತ್ಸವ ದಿನದಿಂದ ವಿಜಯಪುರದಿಂದ ಬೆಂಗಳೂರಿಗೆ ಎಸಿ ಸ್ಲೀಪರ್ ಕೋಚ್ ಬಸ್ ಪ್ರಾರಂಭ

ವಿಜಯಪುರ: ವಿಜಯಪುರ ದಿಂದ ಬೆಂಗಳೂರಿಗೆ ಎ.ಸಿ ಮಲ್ಟಿ ಎಕ್ಸಲ್ ವೋಲ್ವೋ ಸ್ಲೀಪರ್ ಬಸ್ ಸೇವೆ ಪ್ರಾರಂಭಿಸುವAತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಮಾಡಿದ ಮನವಿಗೆ ರಾಜ್ಯ ಸರಕಾರ ಸ್ಪಂದಿಸಿದ್ದು, ಜನೇವರಿ 26 ಶುಕ್ರವಾರ ಗಣರಾಜೋತ್ಸವ ದಿನದಿಂದ ವಿಜಯಪುರ ದಿಂದ ಬೆಂಗಳೂರಿಗೆ ಬಸ್ ಸಂಚಾರ ಪ್ರಾರಂಭವಾಗಲಿದೆ.

ಈ ಬಸ್ ಸಂಚಾರ ಪ್ರಾರಂಭಿಸುವಂತೆ ಸುನೀಲಗೌಡ ಪಾಟೀಲ ಅವರು ಕಳೆದ ಎರಡು ವರ್ಷಗಳಿಂದ ಸರಕಾರವನ್ನು ಆಗ್ರಹಿಸಿದ್ದರು. ಅಲ್ಲದೇ, ವಿಧಾನ ಪರಿಷತ್ ಕಲಾಪದಲ್ಲಿಯೂ ಈ ಕುರಿತು ಪ್ರಸ್ತಾಪಿಸಿದ್ದರು. ಜೊತೆಗೆ ಕಳೆದ ವರ್ಷ ಜೂನ್ 8 ರಂದು ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ವಿಜಯಪುರ ಜಿಲ್ಲೆಯ ಸಾವಿರಾರು ಜನರು ಬೆಂಗಳೂರಿಗೆ ತೆರಳಲು ಸರಕಾರಿ ಹೈಟೆಕ್ ಬಸ್ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಬಸ್ಸುಗಳನ್ನು ಅವಲಿಂಬಿಸಿದ್ದಾರೆ.

ಶಾಸಕ ಸುನೀಲಗೌಡ ಪಾಟೀಲ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ 08.06.2023ರಂದು ಸಲ್ಲಿಸಿರುವ ಮನವಿ ಪತ್ರದ ಪ್ರತಿ

ಖಾಸಗಿಯವರು ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಧರವನ್ನು ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ವಿಜಯಪುರ ನಿಗಮಕ್ಕೆ ಎರಡು ಎ.ಸಿ ಮಲ್ಟಿ ಎಕ್ಸಲ್ ವೋಲ್ವೋ ಸ್ಲೀಪರ್ ಬಸ್ ಸಂಚಾರ ಪ್ರಾರಂಭಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದರು.

ಈಗ ರಾಜ್ಯ ಸರಕಾರ ವಿಜಯಪುರ ನಿಗಮಕ್ಕೆ ಎರಡು ಎ.ಸಿ ಮಲ್ಟಿ ಎಕ್ಸಲ್ ವೋಲ್ವೋ ಸ್ಲೀಪರ್ ಬಸ್ಸುಗಳನ್ನು ನೀಡಿದ್ದು, 26ನೇ ಜನೇವರಿಯಂದು ಶುಕ್ರವಾರ ವಿಜಯಪುರದಿಂದ ಮೊದಲು ಬಸ್ಸು ಪ್ರಯಾಣ ಪ್ರಾರಂಭಿಸಲಿದೆ ಎಂದು ವಿಧಾನ ಪರಿಷತ್ ಶಾಸಕರ ಕಚೇರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

One Response

Leave a Reply

ಹೊಸ ಪೋಸ್ಟ್‌