ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಸೇರಿದಂತೆ 35 ಜನ ಶಾಸಕರಿಗೆ ನಾನಾ ನಿಗಮ ಮತ್ತು ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಇದರಲ್ಲಿ ವಿಜಯಪುರ ಜಿಲ್ಲೆಗೆ ಕೇವಲ ಒಂದು ನಿಗಮಕ್ಕೆ ಮಾತ್ರ ಅಧ್ಯಕ್ಷ ಸ್ಥಾನ ನೀಡಲಾಗಿದ್ದರೆ, ಪಕ್ಕದ ಬಾಗಲಕೋಟೆ ಜಿಲ್ಲೆಯ ಮೂರು ಜನ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಅವರಿಗೆ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ವಿಭಾಗದ ಅಧ್ಯ,ಕ್ಷ ಸ್ಥಾನ ನೀಡಲಾಗಿದ್ದರೆ, ಪಕ್ಕದ ಬಾಗಲಕೋಟೆ ಶಾಸಕ ಎಚ್. ವೈ ಮೇಟಿ ಅವರಿಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ, ಬೀಳಗಿ ಶಾಸಕ ಜೆ. ಟಿ. ಪಾಟೀಲ ಅವರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮತ್ತು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮತಕ್ಷೇತ್ರ, ಶಾಸಕರು ಮತ್ತು ಅವರಿಗೆ ನೀಡಲಾಗಿರುವ ನಿಗಮ, ಮಂಡಳಿ ಮಾಹಿತಿ ಇಲ್ಲಿದೆ.
ಶಾಸಕರ ಹೆಸರು ಮತಕ್ಷೇತ್ರ ನಿಗಮ/ಮಂಡಳಿ
- ಹಂಪನಗೌಡ ಬಾದರ್ಲಿ-ಸಿಂಧನೂರು-ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
- ಸಿ. ಎಸ್. ನಾಡಗೌಡ-ಮುದ್ದೇಬಿಹಾಳ-ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
- ಭರಮಗೌಡ ಅಲಗೌಡ ಕಾಗೆ-ಕಾಗವಾಡ-ಹುಬ್ಬಳ್ಳಿ ಸಾರಿಗೆ ನಿಗಮ
- ಎಚ್. ವೈ. ಮೇಟಿ-ಬಾಗಲಕೋಟೆ-ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
- ಎಸ್. ಆರ್. ಶ್ರೀನಿವಾಸ- ಗುಬ್ಬಿ– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
- ಬಸವರಾಜ ಶಿವಣ್ಣವರ-ಬ್ಯಾಡಗಿ-ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ
- ಬಿ. ಜಿ. ಗೋವಿಂದಪ್ಪ-ಹೊಸದುರ್ಗ-ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಎಚ್. ಸಿ. ಬಾಲಕೃಷ್ಣ-ಮಾಗಡಿ– ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
- ಜಿ. ಎಸ್. ಪಾಟೀಲ-ರೋಣ-ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ
- ಎನ್. ಎ. ಹ್ಯಾರಿಸ್-ಶಾಂತಿನಗರ-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ಮಹಾಂತೇಶ ಎಸ್. ಕೌಜಲಗಿ-ಬೈಲಹೊಂಗಲ-ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
- ಪುಟ್ಟರಂಗಶೆಟ್ಟಿ-ಚಾಮರಾಜನಗರ-ಮೈಸೂರು ಸೇಲ್ಸ್ ಇಂಟರ ನ್ಯಾಶನಲ್ ಲಿಮಿಟೆಡ್
- ಜೆ. ಟಿ. ಪಾಟೀಲ –ಬೀಳಗಿ-ಹಟ್ಟಿ ಚಿನ್ನದ ಗಣಿ
- ರಾಜಾ ವೆಂಕಟಪ್ಪ ನಾಯಕ-ಶಹಾಪುರ– ಕರ್ನಾಟಕ ರಾಜ್ಯ ಉಗ್ರಾಣ ನಿಗಮ
- ಬಿ. ಕೆ. ಸಂಗಮೇಶ-ಭದ್ರಾವತಿ-ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ/ಲ್ಟಾಂಡ್ ಆರ್ಮಿ
- ಕೆ. ಎಂ. ಶಿವಲಿಂಗೇಗೌಡ-ಅರಸಿಕೆರೆ-ಕರ್ನಾಟಕ ಗೃಹ ಮಂಡಳಿ
- ಅಬ್ಬಯ್ಯ ಪ್ರಸಾದ-ಹುಬ್ಬಳ್ಳಿ-ಧಾರವಾಡ ಪೂರ್ವ-ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ
- ಬೇಳೂರ ಗೋಪಾಲಕೃಷ್ಣ-ಸಾಗರ-ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ
- ಎನ್.ಎಸ್.ನಾರಾಯಣಸ್ವಾಮಿ-ಬಂಗಾರಪೇಟೆ-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
- ಪಿ. ಎಂ. ನರೇಂದ್ರಸ್ವಾಮಿ-ಮಳವಳ್ಳಿ-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
- ಟಿ. ರಘುಮೂರ್ತಿ-ಚಳ್ಳಕೆರೆ-ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
- ಎಂ. ಬಿ. ರಮೇಶ ಬಂಡಿಸಿದ್ದೆಗೌಡ-ಶ್ರೀರಂಗಪಟ್ಟಣ-ಚೆಸ್ಕಾಂ
- ಬಿ. ಶಿವಣ್ಣ-ಆನೆಕಲ್-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
- ಎಸ್. ಎಸ್. ಸುಬ್ಬಾರೆಡ್ಡಿ-ಬಾಗೇಪಲ್ಲಿ-ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
- ವಿನಯ ಕುಲಕರ್ಣಿ-ಧಾರವಾಡ-ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
- ಅನಿಲ ಚಿಕ್ಕಮಾದು-ಹೆಗ್ಗಡದೇವನಕೋಟೆ-ಜಂಗಲ್ ಲಾಡ್ಜಸ್
- ಬಸವನಗೌಡ ದದ್ದಲ-ರಾಯಚೂರು ಗ್ರಾಮೀಣ ಕರ್ನಾಟಕ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ
- ಕನೀಜ್ ಫಾತಿಮಾ-ಕಲಬುರಗಿ ಉತ್ತರ-ಕರ್ನಾಟಕ ರೇಶ್ಮೆ ಉದ್ಯಮಗಳ ನಿಗಮ ನಿಯಮಿತ
- ವಿಜಯಾನಂದ ಕಾಶಪ್ಪನವರ-ಹುನಗುಂದ-ಕರ್ನಾಟಕ ಕ್ರೀಡಾ ಪ್ರಾಧಿಕಾರ
- ಶ್ರೀನಿವಾಸ ಮಾನೆ-ಹಾನಗಲ– ಡಿಸಿಎಂ ರಾಜಕೀಯ ಕಾರ್ಯದರ್ಶಿ
- ಟಿ. ಡಿ. ರಾಜೇಗೌಡ-ಶೃಂಗೇರಿ-ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ
- ರೂಪಕಲಾ ಎಂ-ಕೆಜಿಎಫ್-ಕರ್ನಾಟಕ ಕರಕುಶಲ ಕೈಗಾರಿಕೆ ಅಭಿವೃದ್ಧಿ ನಿಗಮ
- ಸತೀಶ ಕೃಷ್ಣ ಸೈಲ್-ಕಾರವಾರ-ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟಂಟ್ ಆ್ಯಂಡ್ ಏಜೆನ್ಸಿಸ್
- ಶರತಕುಮಾರ ಬಚ್ಚೆಗೌಡ-ಹೊಸಕೋಟೆ-ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
- ಜೆ. ಎನ್. ಗಣೇಶ-ಕಂಪ್ಲಿ-ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
ನಿಗಮ ಮಂಡಳಿ ನೇಮಕಾತಿ ಮೊದಲ ಹಂತದಲ್ಲಿ ಹಾಲಿ ಶಾಸಕರಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.