ಕ್ರಿಕೆಟ್, ಪುಟಬಾಲ್ ಜೊತೆ ಅಥ್ಲೇಟಿಕ್ಸ್ ಗೂ ಪ್ರೋತ್ಸಾಹ ಅಗತ್ಯ- ಪ್ರೋ. ಆರ್. ಸಿ. ಬಿದರಿ

ವಿಜಯಪುರ: ಕ್ರಿಕೆಟ್ ಮತ್ತು ಪುಟಬಾಲ್ ಜೊತೆ ಅಥ್ಲೇಟಿಕ್ಸ್ಗೂ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜನರಲ್ ಮೆಡಿಸೀನ್ ವಿಭಾಗದ ಪ್ರಾಧ್ಯಾಪಕ ಪ್ರೋ. ಡಾ. ಆರ್. ಸಿ. ಬಿದರಿ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ರವಿವಾರ ದಿ. ಡಾ. ಸಿ. ಆರ್. ಬಿದರಿ ಸ್ಮರಣಾರ್ಥ ಆಯೋಜಿಸಲಾಗಿದ್ದ 9ನೇ ಅಂತರಶಾಲಾ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಜಯಪುರದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಅಂತರ್ ಶಾಲಾ ಕಾಲೇಜುಗಳು ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ತಿಕೋಟಾದ ಶ್ರೀ. ಎ. ಬಿ. ಜತ್ತಿ. ಪ್ರೌಢಶಾಲೆ ಸಮಗ್ರ ವೀರಾಗ್ರಣಿ ಪ್ರಥಮ ಪಡೆಯಿತು

ನಮ್ಮ ತಂದೆ ಡಾ. ಸಿ. ಆರ್. ಬಿದರಿ ಅವರು ವೈದ್ಯ ವೃತ್ತಿಯ ಜೊತೆಗೆ ಅಥ್ಲೇಟಿಕ್ ಕ್ರೀಡಾಪಟುವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಅಥ್ಲೇಟಿಕ್ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಅವರ ಸ್ಮರಣಾರ್ಥ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಅಥ್ಲೇಟಿಕ್ ಕ್ರೀಡಾಪಟುಗಳಿಗೆ  ಅಗತ್ಯವಾದ ಪ್ರೋತ್ಸಾಹ, ಸೌಲಭ್ಯ ಅಗತ್ಯವಿದೆ. ಕೀಡೆಯಿಂದ ಶಿಸ್ತು, ಬದ್ಧತೆ, ಉತ್ತಮ ಸ್ನೇಹ, ಕ್ರೀಡಾ ಮನೋಭಾವ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ನಾಯಕತ್ವದ ಗುಣಗಳನ್ನ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೋಳ್ಳುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಡಾ. ಸಿ. ಆರ್. ಬಿದರಿ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಬಿ.ಎಲ್.ಡಿ.ಇ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಮತ್ತು ತರಬೇತಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ದಿ. ಡಾ. ಸಿ. ಆರ್. ಬಿದರಿ ಕುಟುಂಬ ವತಿಯಿಂದ 100 ಮೀಟರ ಓಟದ ನಾಲ್ಕು ನಾನಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪೆಡೆದ ಎಂಟು ಕ್ರೀಡಾಪಟುಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಕ್ರೀಡಾಕೂಟದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ 58 ಶಾಲಾ ಕಾಲೇಜುಗಳಿಂದ ಸುಮಾರು 1000 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವಿ. ಜಿ. ಸಂಗಮ, ಆಡಳಿತಾಧಿಕಾರಿ ಪ್ರೋ. ಎಸ್. ಎಚ್. ಲಗಳಿ, ಪ್ರೋ. ಐ. ಎಸ್. ಕಾಳಪ್ಪನವರ, ಪ್ರೋ. ಬಿ. ಆರ್. ಪಾಟೀಲ, ಪ್ರೋ. ಎಸ್. ಎಸ್. ಕೋರಿ, ಕಾಲೇಜಿನ ದೈಹಿಕ ನಿರ್ದೇಶಕ ಐ. ಎಸ್. ಇಕ್ಕಳಕಿ, ಭಾರತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ಡಾ. ಪ್ರದೀಪ ಮಾಳಜಿ ಸ್ವಾಗತಿಸಿದರು.

ವಿಜಯಪುರದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಅಂತರ್ ಶಾಲಾ ಕಾಲೇಜುಗಳು ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಪಿಯುಸಿ ವಿಭಾಗದಲ್ಲಿ ಜಮಖಂಡಿಯ ಬಿಎಚ್‌ಎಸ್  ಆಟ್ಸ್, ಕಾಮರ್ಸ್ ಮತ್ತು  ಟಿಜಿಪಿ ಸೈನ್ಸ ಪಿಯು ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು

100 ಮೀಟರ ಓಟದ ಚಿನ್ನದ ಪದಕ ವಿಜೇತರ ಪಟ್ಟಿ

ಪ್ರಾಥಮಿಕ ಶಾಲಾ ಬಾಲಕರ ವಿಭಾಗ
1. ಅರವಿಂದ ಡಾಕು ರಾಠೊಡ- ಎಸ್. ಎಸ್. ಪ್ರಾಥಮಿಕ ಶಾಲೆ ‘ಬ’ ವಿಜಯಪುರ

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ
1. ವೈಷ್ಣವಿ ಎಸ್.ಲಮಾಣಿ- ಆಂಗ್ಲ ಮಾದ್ಯಮ ಮಾದ್ಯಮಿಕ ಪ್ರಾಥಮಿಕ ಶಾಲೆ, ತಿಕೋಟಾ

ಪ್ರೌಢ ಶಾಲೆ ಬಾಲಕರ ವಿಭಾಗ
1. ಮನೋಜ ಚನ್ನಾ- ಎಸ್. ಆರ್. ಮರಿಮಠ ಪ್ರೌಢಶಾಲೆ ಶಿವಣಗಿ

ಪ್ರೌಢ ಶಾಲೆ ಬಾಲಕಿಯರ ವಿಭಾಗ
1. ಬಸೀರಾ ಮುಜಾವರ- ಶ್ರಿ. ಎ.ಬಿ.ಜತ್ತಿ. ಪ್ರೌಢಶಾಲೆ ತಿಕೋಟಾ

ಪದವಿ ಪೂರ್ವ ಬಾಲಕರ ವಿಭಾಗ
1. ಸುನಿಲ ಜಮಾದಾರ- ಎ.ಬಿ. ಸಾಲಾಕ್ಕಿ ಪದವಿ ಪೂರ್ವ ಮಹಾವಿದ್ಯಾಯ, ದೇವರ ಹಿಪ್ಪರಗಿ

ಪದವಿ ಪೂರ್ವ ಬಾಲಕಿಯರ ವಿಭಾಗ
1. ಚೈತ್ರಾ ಮಿಸಾಳ- ಶ್ರಿ. ಎ.ಬಿ.ಜತ್ತಿ. ಪದವಿ ಪೂರ್ವ ಮಹಾವಿದ್ಯಾಯ, ವಿಭಾಗದಲ್ಲಿ ತಿಕೋಟಾ

ಪದವಿ ಪುರುಷರ ವಿಭಾಗ
1. ಸಚಿನ ರಾಠೊಡ- ಎಸ್.ಬಿ.ಆಟ್ಸ್ ಮತ್ತು ಕೆ.ಸಿ.ಪಿ. ಸೈನ್ಸ  ಪದವಿ ಮಹಾವಿದ್ಯಾಲಯ ವಿಜಯಪುರ

ಪದವಿ ಮಹಿಳೆಯರ ವಿಭಾಗ
1. ಶ್ರೇಯಾ  ಜಿ. ನಾಯಕೊಡಿ- ಬಿ.ಎಚ್.ಎಸ್ ಆಟ್ಸ್, ಕಾಮರ್ಸ್ ಮತ್ತು  ಟಿಜಿಪಿ ಸೈನ್ಸ ಪದವಿ ಮಹಾವಿದ್ಯಾಲಯ, ಜಮಖಂಡಿ

ಸಮಗ್ರ ಚಾಂಪಿಯನ್‌ಸಿಪ್

ಪ್ರೌಢಶಾಲಾ ವಿಭಾಗ
ಪ್ರಥಮ ಸ್ಥಾನ- ಶ್ರಿ. ಎ. ಬಿ. ಜತ್ತಿ. ಪ್ರೌಢಶಾಲೆ ತಿಕೋಟಾ.
ದ್ವಿತಿಯ ಸ್ಥಾನ – ಬಿ.ಎಲ್.ಡಿ.ಇ.  ಪಬ್ಲಿಕ ಶಾಲೆ (ಸಿಬಿಎಸ್ಸಿ) ಜಮಖಂಡಿ

ಪಿ.ಯು.ಸಿ ವಿಭಾಗ
ಪ್ರಥಮ ಸ್ಥಾನ- ಕಾಮರ್ಸ್. ಬಿಎಚ್‌ಎಸ್  ಆಟ್ಸ್ ಮತ್ತು  ಟಿಜಿಪಿ ಸೈನ್ಸ ಪದವಿ ಮಹಾವಿದ್ಯಾಲಯ ಜಮಖಂಡಿ
ದ್ವಿತಿಯ ಸ್ಥಾನ  ಎಸ್. ಎಸ್. ಎಂ. ಪಾಲಿಟೆಕ್ನಿಕ್ ವಿಜಯಪುರ ಮತ್ತು

ಪದವಿ ವಿಭಾಗ
ಪ್ರಥಮ ಸ್ಥಾನ- ಕಾಮರ್ಸ್. ಬಿ.ಎಚ್.ಎಸ್ ಆಟ್ಸ್, ಕಾಮರ್ಸ್ ಮತ್ತು  ಟಿಜಿಪಿ ಸೈನ್ಸ ಪದವಿ ಮಹಾವಿದ್ಯಾಲಯ, ಜಮಖಂಡಿ
ದ್ವಿತಿಯ ಸ್ಥಾನ- ಎಸ್.ಬಿ.ಆಟ್ಸ್ & ಕೆ.ಸಿ.ಪಿ. ಸೈನ್ಸ  ಪದವಿ ಮಹಾವಿದ್ಯಾಲಯ ವಿಜಯಪುರ.

Leave a Reply

ಹೊಸ ಪೋಸ್ಟ್‌