ರೂ. 32.15 ಲಕ್ಷ ಮೌಲ್ಯದ 202.38 ಗ್ರಾಂ ಮಾದಕ ವಸ್ತು ನಾಶಪಡಿಸಿದ ಪೊಲೀಸರು

ವಿಜಯಪುರ: ಜಿಲ್ಲೆಯಲ್ಲಿ ದಾಖಲಾದ ಎನ್‌ ಡಿ ಪಿ ಎಸ್ ನಡಿ ದಾಖಲಾದ 32 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಪೊಲೀಸರು ನಾಶಪಡಿಸಿದ್ದಾರೆ.

ಜಿಲ್ಲೆಯಲ್ಲಿ ಎನ್ ಡಿ ಪಿ ಎಸ್ ಕಾಯಿದೆಯಡಿ ಒಟ್ಟು 32 ಪ್ರಕರಣಗಳಲ್ಲಿ ರೂ. 32 ಲಕ್ಷ 15 ಸಾವಿರದ 450 ಮೌಲ್ಯದ 202.380 ಗ್ರಾಂ ಮಾದಕ ವಸ್ತುಗಳನ್ನು ಮತ್ತು ಮಾದ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ವಿಜಯಪುರ ಜಿಲ್ಲೆಯಲ್ಲಿ ಎನ್ ಡಿ ಪಿ ಎಸ್ ನಡಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತುಗಳನ್ನು ಪೊಲೀಸರು ನಾಶಪಡಿಸಿದರು

 

ಪೊಲೀಸ್ ಪ್ರಧಾನ ಕಚೇರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮೀತಿಯ ನೇತೃತ್ವದಲ್ಲಿ ವಿಜಯಪುರ ನಗರದ ಇಂಡಿ ರಸ್ತೆಯ ಕೆಪಿಎಂಸಿ ಟ್ರಸ್ಟ್ ನಲ್ಲಿರುವ ಬಯೋ ಮೆಡಿಕಲ್ ವೇಸ್ಟ್ ಡಿಸ್ಪೋಸಲ್ ಯುನಿಟ್ ನಲ್ಲಿ ಈ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ಎಸ್ಪಿ ರಿಷಿಕೇಶ ಸೋನಾವಣೆ ಮಾಧ್ಯಮ ಪ್ರಕಟಣೆಯಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌