ಮರಗೂರ ಸಕ್ಕರೆ ಕಾರ್ಖಾನೆ ಚುನಾವಣೆ- ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬಣಕ್ಕೆ ಭರ್ಜರಿ ಗೆಲುವು

ವಿಜಯಪುರ: ಇಂಡಿ ತಾಲೂಕಿನ ಮರಗೂರ ಶ್ರೀ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮತ್ತು ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬಣಕ್ಕೆ ಭರ್ಜರಿ ಗೆಲುವು ಸಾಧಿಸಿದೆ. 

ಶಾಸಕರ ಬಣದಿಂದ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕಾರ್ಖಾನೆಯ ಮೇಲೆ ಮತ್ತೆ ಹಿಡಿತ ಸಾಧಿಸಿದ್ದಾರೆ.  ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈಗಾಗಲೇ ಐದು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫಲಿತಾಂಶದ ವಿವರ

ಸಾಮಾನ್ಯ ಕ್ಷೇತ್ರ(5 ಸ್ಥಾನಗಳು)

  1. ಯಶವಂತ್ರಾಯಗೌಡ ಪಾಟೀಲ- 1716 ಮತಗಳು(ಗೆಲುವು)
  2. ಮಲ್ಲನಗೌಡ ರಾಮಚಂದ್ರ ಪಾಟೀಲ-1615 ಮತಗಳು(ಗೆಲುವು)
  3. ರೇವಗೊಂಡಪ್ಪ ಅಣ್ಣಾರಾಯ ಪಾಟೀಲ- 1560 ಮತಗಳು(ಗೆಲುವು)
  4. ಸಿದ್ದಣ್ಣಾ ರಾಮಣ್ಣಾ ಬಿರಾದಾರ-1485 ಮತಗಳು(ಗೆಲುವು)
  5.  ಬಸವರಾಜ ಸಿದ್ರಾಮಪ್ಪ ಧನಶ್ರೀ-1475 ಮತಗಳು(ಗೆಲುವು)
  6. ಡಾ ಸಾರ್ವಭೌಮ ಬಗಲಿ- 400 ಮತಗಳು(ಸೋಲು)
  7. ನಾಗನಾಥ ಮಹಾದೇವಪ್ಪ ಬಿರಾದಾರ- 301 ಮತಗಳು(ಸೋಲು)
  8. ಚಂದ್ರಕಾಂತ ಬಸಣ್ಣ ಬೋರಗಿ- 80 ಮತಗಳು(ಸೋಲು)

ಮಹಿಳಾ ಕ್ಷೇತ್ರ(2 ಸ್ಥಾನ)

  1. ಲಲಿತಾ ನಡಗೇರಿ- 1481 ಮತಗಳು(ಗೆಲುವು)
  2. ಸರೋಜನಿ ಸಿದ್ದರಾಯ ಪಾಟೀಲ-1356 ಮತಗಳು(ಗೆಲುವು)
  3. ದಾನಮ್ಮ ಕರಿಬಸಪ್ಪ  ಬಿರಾದಾರ- 441 ಮತಗಳು(ಸೋಲು)

ಎಸ್ ಸಿ ಕ್ಷೇತ್ರ(1 ಸ್ಥಾನ)

  1. ಅಶೋಕ ಅಂಬಾಜಿ ಗಜಾಕೋಶ- 1424 ಮತಗಳು(ಗೆಲುವು)
  2. ಮುತ್ತಣ್ಣ ಪೋತೆ- 314 ಮತಗಳು(ಸೋಲು)

 

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ

ಐದು ವರ್ಷಗಳ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬಣ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೋಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

Leave a Reply

ಹೊಸ ಪೋಸ್ಟ್‌