ಭಾರತದ ಸಂವಿಧಾನ ಸಮಾನತೆಗೆ ಬುನಾದಿಯಾಗಿದೆ- ಎಚ್. ವೈ. ಸಿಂಗೆಗೋಳ
ವಿಜಯಪುರ: ಸಂವಿಧಾನ ಸಮಸಮಾಜದ ಬುನಾದಿಯಾಗಿದ್ದು, ಈ ಕುರಿತು ಜನಜಾಗೃತಿ ಮೂಡಬೇಕಿದೆ ಎಂದು ಸಿಂದಗಿ ಕೃಷಿ ಇಲಾಖೆ ಸಹಾಯಕ ನಿದೇ೯ಶಕ ಎಚ್. ವೈ. ಸಿಂಗೆಗೋಳ ಹೇಳಿದ್ದಾರೆ. ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಮತ್ತು ಹೊನ್ನಳ್ಳಿ ಗ್ರಾಮಗಳಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿ, ಪುಷ್ಪಾಚ೯ನೆ ಮಾಡಿ ಅವರು ಮಾತನಾಡಿದರು. ದೇಶದ ಸವ೯ಧಮ೯, ಜಾತಿ ಜನರ ಹಿತ ಕಾಪಾಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಕಾನೂನುಗಳ ಪಾಲನೆ ಬದ್ದತೆ ಬೆಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಈ ಮಧ್ಯೆ ಬ್ರಹ್ಮದೇವರಮಡು […]
ಫೆ. 14 ರಂದು ಚಡಚಣದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ
ವಿಜಯಪುರ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಫೆ. 14 ರಂದು ಚಡಚಣ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಮೊ:9364062528), ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ (ಮೊ:9364062557), ಪೊಲೀಸ್ ಇನ್ ಸ್ಪೆಕ್ಟರ್-1 (ಮೊ:9364062640), ಪೊಲೀಸ್ ಇನ್ಸ್‍ಪೆಕ್ಟರ್-2 (ಮೊ: 9364062639) ಇವರು ಅಂದು ಬೆಳಿಗ್ಗೆ 11 ಗಂಟೆಯಿಂದ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಅಹವಾಲು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು […]
ವಿಜಯಪುರ ಬಸವೇಶ್ವರ ಚೌಕಿನಲ್ಲಿ ಟ್ಯಾಂಕರ್ ಪಲ್ಟಿ- ಚಾಲಕನಿಗೆ ಗಾಯ
ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಹನ ಪಲ್ಟಿಯಾದ ಘಟನೆ ವಿಜಯಪುರ ನಗರದ ಬಸವೇಶ್ವರ ಚೌಕ್ ನಲ್ಲಿ ನಡೆದಿದೆ. ನಸುಕಿನ ಜಾವ ಟ್ಯಾಂಕರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಜೆಡಿಎಸ್ ಕಚೇರಿ ಮತ್ತು ಜಯಶ್ರೀ ಟಾಕೀಸ್ ಪಕ್ಕದಲ್ಲಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅ ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರ ಬಂದ್ ಆಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ಪಲ್ಟಿಯಾದ ಟ್ಯಾಂಕರ್ ವಾಹನವನ್ನು ಕ್ರೇನ್ ಸಹಾಯದಿಂದ ತೆರವು ಮಾಡಿ ವಾಹನಗಳ […]