ಭಾರತದ ಸಂವಿಧಾನ ಸಮಾನತೆಗೆ ಬುನಾದಿಯಾಗಿದೆ- ಎಚ್. ವೈ. ಸಿಂಗೆಗೋಳ

ವಿಜಯಪುರ: ಸಂವಿಧಾನ ಸಮಸಮಾಜದ ಬುನಾದಿಯಾಗಿದ್ದು, ಈ ಕುರಿತು ಜನಜಾಗೃತಿ ಮೂಡಬೇಕಿದೆ ಎಂದು ಸಿಂದಗಿ ಕೃಷಿ ಇಲಾಖೆ ಸಹಾಯಕ ನಿದೇ೯ಶಕ ಎಚ್. ವೈ. ಸಿಂಗೆಗೋಳ ಹೇಳಿದ್ದಾರೆ.

ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಮತ್ತು ಹೊನ್ನಳ್ಳಿ ಗ್ರಾಮಗಳಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿ, ಪುಷ್ಪಾಚ೯ನೆ ಮಾಡಿ ಅವರು ಮಾತನಾಡಿದರು.

ದೇಶದ ಸವ೯ಧಮ೯, ಜಾತಿ ಜನರ ಹಿತ ಕಾಪಾಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ.  ಕಾನೂನುಗಳ ಪಾಲನೆ ಬದ್ದತೆ ಬೆಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಬ್ರಹ್ಮದೇವರಮಡು ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಭರ್ಜರಿ ಸ್ವಾಗತ ಕೋರಿದ ಮುಖಂಡರು ಪ್ರತಿಜ್ಞೆ ಸ್ವೀಕರಿಸಿದರು

ಈ ಮಧ್ಯೆ ಬ್ರಹ್ಮದೇವರಮಡು ಗ್ರಾಮಕ್ಕೆ ಆಗಮಿಸಿದ ರಥಕ್ಕೆ ಸರಕಾರಿ ಶಾಲೆ ಮತ್ತು ರಾಜೀವ ಗಾಂಧಿ ಸ್ಮಾರಕ ಪ್ರೌಢ ಶಾಲೆ ಮಕ್ಕಳು ಪೂಣ೯ಕುಂಭ ಹೊತ್ತು, ಡೊಳ್ಳು ಕುಣಿತ, ಡಿಜೆ ಸಂಗೀತದೊಂದಿಗೆ ಸ್ವಾಗತಿಸಿದರು.

ಗ್ರಾ. ಪಂ. ಅಧ್ಶಕ್ಷ ಸಂಗನಗೌಡ ಪಾಟೀಲ, ಡಿ ಎಸ್ ಎಸ್ ಮುಖಂಡರಾದ ವೈ. ಸಿ. ಮಯೂರ, ಶ್ರೀಶೈಲ ಜಾಲವಾದಿ, ವಿಜುಗೌಡ ಬಿರಾದಾರ, ಕಲಕೇರಿ ಪಿ ಎಸ್ ಐ ರೋಹಿಣಿ ಪಾಟೀಲ, ಸಂತೋಷ ಮಣಗಿರಿ, ಮಲ್ಲು ಗುಡಿಮನಿ, ಚಂದ್ರಶೇಖರ ಕೆಂಭಾವಿ, ರುಕ್ಮದ್ದೀನ್ ಹಳಿಮನಿ, ರವಿ ಯಡ್ರಾಮಿ, ರವಿ ಹೊಳಿ, ಯಮನೂರ ಬೇಕಿನಾಳ, ಬಸನಗೌಡ ಉಳ್ಳೆಸೂರ, ಸಾಹೇಬಪಟೇಲ ಮುರಡಿ, ತಿಪ್ಪಯ್ಶ ನೆಲ್ಲಗಿಮಠ, ಪಿಡಿಒ ಎಸ್. ಸಿ. ನಾಯ್ಕೋಡಿ, ಕಾಯ೯ದರ್ಶಿ ಸಿ. ಡಿ. ಕೋರಬು, ಸಿಡಿಪಿಒ ಇಲಾಖೆ ಅಂಗನವಾಡಿ ಮೆಲ್ವಿಚಾರಕಿ ಸಜ್ಜನ, ಗ್ರಾಮ ಲೆಕ್ಕಾಧಿಕಾರಿ ಹಸನ್ ಕೋರಬು, ಹಣಮಂತ ಯಂಟಮಾನ, ರಾಜು ಖಾನಾಪೂರ, ಹಣಮಂತ್ರಾಯಗೌಡ ಬಿರಾದಾರ, ಕೆ. ಬಿ. ಮನಗೂಳಿ, ಬಂದೇನವಾಜ್ ಸೀತನೂರ, ಡಿ. ಕೆ. ಸೀತನೂರ, ಮಲ್ಲು ಕೆಂಭಾವಿ, ಮಲ್ಕಣ್ಣ ಗಡಿಗೆನ್ನವರ, ಭಾಗಪ್ಪ ದೇವರಮನಿ, ಸಂಗನಗೌಡ ಪಾಟೀಲ, ಅಮೃತ ದೊಡ್ಡಮನಿ ಸೇರಿದಂತೆ ನಾನಾ ಗಣ್ಶರು, ಗ್ರಾಮದ ಪ್ರಮುಖರು, ದಲಿತ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌