ತಿಕೋಟಾ ತಾಲೂಕಿನ ನಾನಾ ಕಡೆ ಜಿ. ಪಂ. ಸಿಇಓ ರಿಷಿ ಆನಂದ ಭೇಟಿ- ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ರಿಷಿ ಆನಂದ ಅವರು ತಿಕೋಟಾ ತಾಲೂಕಿನ ಸಿದ್ದಾಪುರ ಗ್ರಾ. ಪಂ., ಸರಕಾರಿ ಗ್ರಂಥಾಲಯ, ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿದ್ಧಾಪುರ(ಕೆ) ಗ್ರಾ. ಪಂ. ಗೆ ಭೇಟಿ ನೀಡಿದ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್(ಗ್ರಾ), 15ನೇ ಹಣಕಾಸು, ತೆರಿಗೆ ವಸೂಲಾತಿ ಸೇರಿ ವಿವಿಧ ಅನುದಾನಗಳು, ಹಾಗೂ ಕುಡಿಯುವ ನೀರಿನ ಕುರಿತು, ಬೀದಿ ದೀಪಗಳ ನಿರ್ವಹಣೆ ಸೇರಿ ವಿವಿಧ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದಾಖಲಾತಿಗಳನ್ನು ಹಾಗೂ ಕಾಮಗಾರಿ ಕಡತಗಳು ಸೇರಿದಂತೆ ನಾನಾ ಕಡತಗಳನ್ನು ಪರಿಶೀಲನೆ ಮಾಡಿದರು.
ಗ್ರಾಮದಲ್ಲಿರುವ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಡಿಜಿಟಲ್ ವ್ಯವಸ್ಥೆಯನ್ನು ವೀಕ್ಷಿಸಿದರು.

ವಿಜಯಪುರ ಜಿ. ಪಂ. ಸಿಇಓ ರಿಷಿ ಆನಂದ ತಿಕೋಟಾ ತಾಲೂಕಿನ ನಾನಾ ಗ್ರಾ. ಪಂ. ಗಳಿಗೆ  ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು

ನಂತರ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಆಟದ ಮೈದಾನ ಹಾಗೂ ಭೋಜನಾಲಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಸ್ಪೋಟ್ರ್ಸ್ ರೂಮ್ ಮತ್ತು ವಿಜ್ಞಾನ ಪ್ರಯೋಗಾಲಯದಲ್ಲಿನ ಪರಿಕರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಲ್ಲದೆ ತಾವೇ ಖುದ್ದಾಗಿ ಕೆಲವೊಂದು ಪ್ರಯೋಗಗಳನ್ನು ಮಾಡಿ ಪ್ರಾಯೋಗಿಕ ಪರೀಕ್ಷೆ ನಡೆಸಿದರು. ನಂತರ ಶಾಲೆಯ ಅಡುಗೆ ಕೋಣೆಗೆ ಭೇಟಿ ನೀಡಿ ಬಿಸಿಯೂಟದ ವ್ಯವಸ್ಥೆ ಪರಿಶೀಲನೆ ಮಾಡಿ, 8 ಮತ್ತು 9ನೇ ತರಗತಿ ಕೊಠಡಿಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಸಂವಾದ ನಡೆಸಿದರು.  ಈಗಿನ ಮಕ್ಕಳಿಗೆ ಪಠ್ಯ ಭೋಧನೆಯ ಜೊತೆಗೆ ಪ್ರಾಯೋಗಿಕ ಜ್ಞಾನ ನೀಡುವುದು ಅತೀ ಅವಶ್ಯಕವಾಗಿದ್ದು, ಈಗಾಗಲೇ ಈ ಶಾಲೆಯಲ್ಲಿ ಅನುಷ್ಠಾನವಾಗುಳ್ಳುತ್ತಿರುವು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಇದೇ ಸಮಯದಲ್ಲಿ 9ನೇ ತರಗತಿ ಮಕ್ಕಳೊಡನೆ ಚರ್ಚೆ ಮಾಡುವ ಸಮಯದಲ್ಲಿ 10ನೇ ತರಗತಿಯು ವಿಧ್ಯಾರ್ಥಿಗಳ ಜೀವನದ ಅತೀ ಪ್ರಮುಖ ಘಟ್ಟ. ಹೀಗಾಗಿ ತಾವುಗಳು ಈ ಸಮಯದಲ್ಲಿ ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡಬೇಕು ಎಂದು ಪ್ರೇರೇಪಿಸಿದರು. ಶಿಕ್ಷಕರು ಹೇಳಿದ ಪಾಠಗಳನ್ನು ಮನೆಯಲ್ಲಿ ಅಭ್ಯಾಸ ಮಾಡಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿ, ನಿಮ್ಮ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.

 

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಶಾಲಾ ಕಂಪೌಂಡ, ಆಟದ ಮೈದಾನದಲ್ಲಿ ವೀಕ್ಷಕರ ಗ್ಯಾಲರಿ ಹಾಗೂ ತಾರಾಲಯ ನಿರ್ಮಿಸಲು ಅನುದಾನ ಒದಗಿಸಲು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇದಕ್ಕೆ ಸ್ಪಂದಿಸಿದ ಅವರು ಕಂಪೌಂಡ ನಿರ್ಮಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿಯಮಾನುಸಾರ ಕ್ರಿಯಾ ಯೋಜನೆಯನ್ನು ತಯಾರಿಸಿ ಸಲ್ಲಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಉಳಿದಂತೆ ವೀಕ್ಷಕರ ಗ್ಯಾಲರಿ ಹಾಗೂ ತಾರಾಲಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನುರಿತ ತಾಂತ್ರಿಕ ಸಹಾಯಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅನುμÁ್ಠನ ಮಾಡಲು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

 

ಪ್ರಸ್ತುತ ವರ್ಷ ಮಳೆಯ ಅಭಾವವಿರುವದರಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಹಾಯ ಸಹಕಾರ ಅವಶ್ಯವಿದ್ದಲ್ಲಿ ನೇರವಾಗಿ ನನಗೆ ಸಂಪರ್ಕಿಸಿ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಶಿಲ್ಪಾ ಮಚೇಂದ್ರ ಹೊಸಮನಿ, ತಾ. ಪಂ. ಸಹಾಯಕ ನಿರ್ದೇಶಕರು(ಪಂ. ರಾ) ಶೋಭಕ್ಕ ಶೀಳಿನ, ಸಿದ್ದಾಪುರ(ಕೆ) ಪಿಡಿಓ ಎಂ.ಬಿ.ಮನಗೂಳಿ, ಜಿ.ವಾಯ್.ಮಸಳಿ, (ಈ ಹಿಂದೆ ಕಾರ್ಯ ನಿರ್ವಹಿಸಿದ ಪಿಡಿಓ), ಕಾರ್ಯದರ್ಶಿ ಸೋಮಸಿಂಗ್ ಕೋಳಿ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾ. ಪಂ. ತಾಂತ್ರಿಕ ಸಹಾಯಕ ಅಭಿಯಂತರ ಶ್ರೀಧರ ಸಾವಳಗಿ, ಗ್ರಾಮ ಕಾಯಕ ಮಿತ್ರ ಸಂಗೀತಾ ಸುರೇಶ ಸಪ್ತಾಳಕರ ಸೇರಿದಂತೆ ಗ್ರಾ. ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌