ವಿಜಯಪುರ: ರೇಲ್ವೆ ಕೆಳಸೇತುವೆ ಬಳಿ ಎತ್ತರದ ವಾಹನಗಳು ಸಂಚರಿಸದಂತೆ ಹಾಕಲಾಗಿದ್ದ ಕಬ್ಬಿಣದ ಫ್ರೇಮ್ ತುಂಡಾಗಿ ಬಿದ್ದ ಘಟನೆ ಕೊಲ್ಹಾರ ತಾಲೂಕಿನ ತೆಲಗಿ ಬಳಿ ಸಂಭವಿಸಿದೆ.
ಗ್ರಾಮದ ರೇಲ್ವೆ ಕೆಳಸೇತುವೆ ಬಳಿ ಬೃಹತ್ ಲಾರಿಗಳು ಮತ್ತು ಎತ್ತರದ ವಾಹನಗಳು ಸಂಚರಿಸುವುದನ್ನು ನಿಯಂತ್ರಿಸಲು ಫ್ರೇಮ್ ಹಾಕಲಾಗಿತ್ತು. ಆದರೆ, ರಾತ್ರಿ ಕಬ್ಬು ಸಾಗಾಟ ಮಾಡುವ ವಾಹನಕ್ಕೆ ತಗುಲಿ ಮುರಿದು ಬಿದ್ದಿದೆ. ಈ ರಸ್ತೆ ತೆಲಗಿಯಿಂದ ಕೊಲ್ಹಾರ ಮಾರ್ಗವಾಗಿ ಬಸವನ ಬಾಗೇವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಾಹನಗಳ ಎತ್ತರ ನಿಯಂತ್ರಕ ಫ್ರೇಮ್ ಮೇಲೀನ ರಾಡ್ ಕುಸಿತು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಅನಿವಾರ್ಯವಾಗಿ ವಾಹನಗಳು ರಸ್ತೆ ಪಕ್ಕದ ಜಾಗದಲ್ಲಿ ಸಂಚರಿಸುವಂತಾಯಿತು.
ಈ ಕುರಿತು ಮಾಹಿತಿ ಪಡೆದ ರೇಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜೆಸಿಬಿ ಮೂಲಕ ತುಂಡಾಗಿ ಬಿದ್ದಿದ್ದ ಕಬ್ಬಿಣದ ಬೃಹತ್ ರಾಡ್ ನ್ನು ತೆರವುಗೊಳಿಸಿದರು.