ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಮಯ ಜೀವನವನ್ನು ಯುವಕರು ಅರಿಯಬೇಕು: ಅಪರ ಜಿಲ್ಲಾದಿಕಾರಿ ಮಹಾದೇವ ಮುರಗಿ

ವಿಜಯಪುರ: ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಹಾಗೂ ಅವರ ಆದರ್ಶ ಅರಿತುಕೊಳ್ಳುವುದರ ಜೊತೆಗೆ, ಅವರ ಜೀವನ ಮೌಲ್ಯಗಳು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಅವರ ಜೀವನಾದರ್ಶ ಇಂದಿನ ಯುವಕರು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ. 

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿಯ ದೈರ್ಯ, ಸಾಹಸದ ಚರಿತ್ರೆ, ಕತೆಗಳನ್ನು ಇಂದಿನ ಮಕ್ಕಳಿಗೆ ತಿಳಿಹೇಳಬೇಕು. ಈ ಮೂಲಕ ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳಸಬೇಕು. ಅವರ ಅಪಾರ ಸ್ವಾಭಿಮಾ£,À ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡ ಶಿವಾಜಿಯವರ ಆದರ್ಶವನ್ನು ನಾವು ಯಾವತ್ತೂ ಪಾಲಿಸಬೇಕು. ವಿಜಯಪುರಕ್ಕೂ ಶಿವಾಜಿ ಅವರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷನ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವಿಷ್ಣು ಶಿಂಧೆ ಉಪನ್ಯಾಸ ನೀಡಿ, ಶಿವಾಜಿ ಅವರ ಒಳ್ಳೆಯ ಆಡಳಿತ ನೀಡಿದÀರು. ಅವರ ಆಡಳಿತದಲ್ಲಿ ಭೂ ದಾಖಲೆಗಳ ಸಂಗ್ರಹ ವ್ಯವಸ್ಥೆ ಅಚ್ಚುಕಟ್ಟಾಗಿ ಕೂಡಿತ್ತು. ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿತ್ತು. ಇಂದಿನ ಯುವ ಪೀಳಿಗೆ ಅವರ ಚರಿತ್ರೆಯನ್ನು ಅರಿಯಬೇಕು.ಅವರು ಮಾಡಿದ ಹೋರಾಟ ಸಾಧಿಸಿದ ಕೀರ್ತಿ ಅನನ್ಯವಾಗಿದೆ ಎಂದು ಹೇಳಿದರು.

ವಿಜಯಪುರದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿದರು.

ಶಿವಾಜಿ ಅವರು ಅಪ್ರತಿಮ ಹೋರಾಟಗಾರರಾಗಿದ್ದರು. ಸೇನಾ ಬಲವನ್ನು ಸಂಘಟಿಸಿದ್ದರು. ನೌಕಾಪಡೆ ಬಲವರ್ಧನೆ ಮಾಡಿದ ಕೀರ್ತಿಯು ಶಿವಾಜಿ ಅವರಿಗೆ ಸಲ್ಲುತ್ತದೆ. ಸಮರ ಕಲೆಯಲ್ಲಿ ಪರಿಣಿತಿ ಹೊಂದಿದ್ದರು. ತಾಯಿ ಜೀಜಾಬಾಯಿ ಅವರಿಂದ ಅನೇಕ ಮೌಲ್ಯಯುತ ವಿಚಾರಗಳನ್ನು ಬಾಲ್ಯದಲ್ಲಿಯೇ ಶಿವಾಜಿ ತಿಳಿದುಕೊಂಡಿದ್ದರು. ಸ್ವರಾಜ್ಯ ಎಂಬ ಪರಿಕಲ್ಪನೆಗೆ ಅಡಿಪಾಯ ಹಾಕಿದ ಶ್ರೇಯಸ್ಸು ಶಿವಾಜಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮಹೇಜಬಿನ ಹೊರ್ತಿ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಬಿ ಎಸ್ ಮೂಗನೂರಮಠ, ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ, ವಿಜಯ ಚವ್ಹಾಣ, ಡಾ. ಸದಾಶಿವ ಪವಾರ ಮತ್ತಿತರರು ಉಪಸ್ಥಿತರಿದ್ದರು.

ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ

ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆಗೆ ಉಪಮೇಯರ್ ದಿನೇಶ ಹಳ್ಳಿ  ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ರಿಷಿಕೇಶ ಸೋನಾವಣೆ, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಚಾಲನೆ ನೀಡಿದರು.

Leave a Reply

ಹೊಸ ಪೋಸ್ಟ್‌