ಹಾಲುಮತದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ 15ನೆಯ ಧರ್ಮಸಭೆ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯನಾರಳ ಗ್ರಾಮದ ಶ್ರೀ ಮಾಯಮ್ಮ ದೇವಿಯ ಗುಡಿಯ ಆವರಣದಲ್ಲಿ ಹಾಲುಮತದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ 15ನೆಯ ಧರ್ಮಸಭೆಯನ್ನು ನಡೆಯಿತು. ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಯರನಾಳ ಶ್ರೀ ಮಾಯಮ್ಮ ದೇವಿ ದೇವಸ್ಥಾನ ಪೂಜಾರಿ ಶ್ರೀ ಸಂಗಪ್ಪ ಮುತ್ಯಾ ಪೂಜಾರಿ ಜಿಲ್ಲೆಯ ಜಿಲ್ಲೆಗಳ ಪೂಜಾರಿಗಳನ್ನು ಸ್ವಾಗತಿಸಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬೀರಪ್ಪ ಜುಮನಾಳ ಮಾತನಾಡಿ, ಸಂಘಟನೆಯಲ್ಲಿರುವ ಎಲ್ಲಾ ಪಟ್ಟದ ಪೂಜ್ಯರು ಮತ್ತು ಜಡೆತಲೆ ಪೂಜಾರಿಗಳು ಆರಾಧಿಸುವ ದೇವತೆಗಳ ಚರಿತ್ರೆಗಳನ್ನು […]
ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ತಾಜಬಾವಡಿಗೆ ಜಿಲ್ಲಾಧಿಕಾರಿಗಳ ಭೇಟಿ
ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ನಾನಾ ಅಧಿಕಾರಿಗಳೊಂದಿಗೆ ನಗರದಲ್ಲಿರುವ ಐತಿಹಾಸಿಕ ತೆರೆದ ಬಾವಿ ತಾಜಬಾವಡಿಗೆ ಭೇಟಿ ನೀಡಿದರು. ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ತಾಜಬಾವಡಿ ಸ್ಮಾರಕವನ್ನು ಮುಂಬೈನ ವಿಶ್ವ ಸ್ಮಾರಕ ನಿಧಿ ಸಂಸ್ಥೆ ದತ್ತು ಪಡೆದಿದೆ. ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ […]
ವಿಜಯಪುರ ನಗರದಲ್ಲಿ ಏಳು ತಾಯಿ ಮಕ್ಕಳ ದೇವಸ್ಥಾನ ಲೋಕಾರ್ಪಣೆ- ಗಮನ ಸೆಳೆದ ಭವ್ಯ ಕಾರ್ಯಕ್ರಮ
ವಿಜಯಪುರ: ನಗರದ ಎಸ್. ಎಸ್. ಕಾಲೇಜ್ ರಸ್ತೆಯಲ್ಲಿರುವ ಭಜಂತ್ರಿ ಗಲ್ಲಿಯ ಶ್ರೀ ಏಳು ಮಕ್ಕಳ ತಾಯಿಯ ದೇವಸ್ಥಾನ ನೂತನ ಕಟ್ಟಡ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪೂರ್ಣಕುಂಭ ಹೊತ್ತ ಮಹಿಳೆಯರು ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಮಧ್ಯಾಹ್ನ ಅನ್ನ ಪ್ರಸಾದ ಸಂಜೆ ಮೂರ್ತಿ ಪ್ರತಿಷ್ಠಾಪನೆನ ಕಾರ್ಯಕ್ರಮ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಸದಸ್ಯರು, ನಾನಾ ಸ್ವಾಮೀಜಿಗಳು, ಹಿರಿಯರು, ಸೇರಿದಂತೆ ಸಾವಿರಾರು ಭಕ್ತರು ಈ […]