ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ನಾನಾ ಅಧಿಕಾರಿಗಳೊಂದಿಗೆ ನಗರದಲ್ಲಿರುವ ಐತಿಹಾಸಿಕ ತೆರೆದ ಬಾವಿ ತಾಜಬಾವಡಿಗೆ ಭೇಟಿ ನೀಡಿದರು.
ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ತಾಜಬಾವಡಿ ಸ್ಮಾರಕವನ್ನು ಮುಂಬೈನ ವಿಶ್ವ ಸ್ಮಾರಕ ನಿಧಿ ಸಂಸ್ಥೆ ದತ್ತು ಪಡೆದಿದೆ. ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ನಾನಾ ಯೋಜನೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು, ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬxಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲೂ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದೀನ್ ಸೌದಾಗರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಜಿಲ್ಲಾ ವಕ್ಫ ಅಧಿಕಾರಿ ತಬಸ್ಸುಮ್ ಎಂ., ನಿರೀಕ್ಷಕ ಮೋಹಸಿನ ಜಮಖಂಡಿ, ಮಹಾನಗರಪಾಲಿಕೆಯ ಎಂಜಿನಿಯರ್ ಹಿರೆಮಠ, ಸಿಟಿ ಸರ್ವೆ ಇಲಾಖೆಯ ಪ್ರಕಾಶ ಪಾಟೀಲ, ಸಿಟಿ ಸರ್ವೆ ಇಲಾಖೆಯ ಅನಿಲಕುಮಾರ ಬಣಜಿಗೇರ, ಮುಂಬೈ ವಲ್ಡ್ ಮಾನುಮೆಂಟ್ ಫಂಡ್ಸ್ ಇಂಡಿಯಾ ಅಶೋಷಿಯನ್ ನ ಅನಾಬೇಲ್ ಲೋಪೆಜ್, ಸಂಸ್ಥೆಯ ಪಧಾದಿಕಾರಿ ಬಿ. ಶರತಚಂದ್ರ, ಅಖಿಲಾ ಉದಯಶಂಕರ, ಸಿಂದುಜಾ, ದೇವಿ ಕಲ್ಯಾಣಿ, ಪೀಟರ್ ಅಲೆಕ್ಸಾಂಡರ್ ಮಹಾನಗರಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.