ವಿಜಯಪುರ ನಗರದಲ್ಲಿ ಏಳು ತಾಯಿ ಮಕ್ಕಳ ದೇವಸ್ಥಾನ ಲೋಕಾರ್ಪಣೆ- ಗಮನ ಸೆಳೆದ ಭವ್ಯ ಕಾರ್ಯಕ್ರಮ

ವಿಜಯಪುರ: ನಗರದ ಎಸ್. ಎಸ್. ಕಾಲೇಜ್ ರಸ್ತೆಯಲ್ಲಿರುವ ಭಜಂತ್ರಿ ಗಲ್ಲಿಯ ಶ್ರೀ ಏಳು ಮಕ್ಕಳ ತಾಯಿಯ ದೇವಸ್ಥಾನ ನೂತನ ಕಟ್ಟಡ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ವಿಜಯಪುರ ನಗರದ ಏಳು ಮಕ್ಕಳ ತಾಯಿ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಕುಂಭಮೇಳ ನಡೆಯಿತು

ಕಾರ್ಯಕ್ರಮದ ಅಂಗವಾಗಿ ಪೂರ್ಣಕುಂಭ ಹೊತ್ತ ಮಹಿಳೆಯರು ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.  ಮಧ್ಯಾಹ್ನ ಅನ್ನ ಪ್ರಸಾದ ಸಂಜೆ ಮೂರ್ತಿ ಪ್ರತಿಷ್ಠಾಪನೆನ ಕಾರ್ಯಕ್ರಮ ನಡೆಯಿತು.  ದೇವಾಲಯದ ಆಡಳಿತ ಮಂಡಳಿ ಸದಸ್ಯರು, ನಾನಾ ಸ್ವಾಮೀಜಿಗಳು, ಹಿರಿಯರು, ಸೇರಿದಂತೆ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌