ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯನಾರಳ ಗ್ರಾಮದ ಶ್ರೀ ಮಾಯಮ್ಮ ದೇವಿಯ ಗುಡಿಯ ಆವರಣದಲ್ಲಿ ಹಾಲುಮತದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ 15ನೆಯ ಧರ್ಮಸಭೆಯನ್ನು ನಡೆಯಿತು.
ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಯರನಾಳ ಶ್ರೀ ಮಾಯಮ್ಮ ದೇವಿ ದೇವಸ್ಥಾನ ಪೂಜಾರಿ ಶ್ರೀ ಸಂಗಪ್ಪ ಮುತ್ಯಾ ಪೂಜಾರಿ ಜಿಲ್ಲೆಯ ಜಿಲ್ಲೆಗಳ ಪೂಜಾರಿಗಳನ್ನು ಸ್ವಾಗತಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬೀರಪ್ಪ ಜುಮನಾಳ ಮಾತನಾಡಿ, ಸಂಘಟನೆಯಲ್ಲಿರುವ ಎಲ್ಲಾ ಪಟ್ಟದ ಪೂಜ್ಯರು ಮತ್ತು ಜಡೆತಲೆ ಪೂಜಾರಿಗಳು ಆರಾಧಿಸುವ ದೇವತೆಗಳ ಚರಿತ್ರೆಗಳನ್ನು ಕ್ರೂಢೀಕರಿಸಿ ಗ್ರಂಥಗಳನ್ನು ರಚಿಸಬೇಕು. ಪುರಾತನ ದೇವಸ್ಥಾನಗಳನ್ನು ಜೀರ್ಣೊದ್ಧಾರ ಮಾಡಬೇಕು. ಅವುಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಭಕ್ತ ರಿಗೆ ಸನ್ಮಾರ್ಗವನ್ನು ತೋರಿಸಬೇಕು. ಎಲ್ಲಾ ಪೂಜಾರಿಗಳ ಮಕ್ಕಳಿಗೆ ಪೂಜಾ ಸಂಸ್ಕಾರಗಳನ್ನು ಕಲಿಸಬೇಕು. ಅವರಿಗೆ ಶಿಕ್ಷಣವನ್ನು ಕೊಡಿಸಬೇಕು. ಎಲ್ಲ ಪೂಜಾರಿಗಳಿಗೆ ಸರಕಾರದಿಂದ ಗೌರವಧನ ಸಿಗುವವರೆಗೆ ಹೋರಾಟ ಮಾಡಬೇಕು ಎಂದು ಹೇಳಿದರು.
ತಿಡಗುಂದಿಯ ಬನಸಿದ್ದ ಮಹಾರಾಜರು ಮಾತನಾಡಿ, ನಮ್ಮ ದೇವಸ್ಥಾನಗಳನ್ನು ಸ್ವಚ್ಛ ಹಾಗೂ ಪೂಜಾ ಪುನಸ್ಕಾರಗಳನ್ನು ಸರಿಯಾದ ಕಾಲ ಕಾಲಕ್ಕೆ ಮಾಡಬೇಕು ಎಂದು ಹೇಳಿದರು.
ಮಾಳಿಂಗರಾಯರು ನಾಗಠಾಣ ಮಾತನಾಡಿ, ಪ್ರತಿ ಧರ್ಮಸಭೆಯಲ್ಲಿ ಜಡೆತೆಲೆ ಪೂಜಾರಿಗಳ ಮತ್ತು ಪಟ್ಟದ ಪೂಜಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಪೂಜ್ಯರು ತಮ್ಮ ಊರುಗಳಲ್ಲಿ ನಡೆಯುವ ಡೊಳ್ಳಿನ ಹಾಡುಗಳನ್ನು ಬೇದ ಭಾವ ಮಾಡುತ್ತಿದ್ದರೆ ಅವುಗಳನ್ನು ಕೂಡಲೇ ಸರಿಯಾದ ತಿಳುವಳಿಕೆ ಹೇಳಿ ಎಲ್ಲ ದೇವರು ಒಂದೇ ಎಂದ ತಿಳಿಯಪಡಿಸಬೇಕು ಎಂದು ಹೇಳಿದರು.
ಈ ಧರ್ಮಸಭೆಯಲ್ಲಿ ರೂಗಿಯ ಶ್ರೀ ಜಟ್ಟಿಂಗರಾಯ ದೇವಸ್ಥಾನದ ಮಲ್ಲಪ್ಪ ಮಾರಾಯರು, ತಳೆವಾಡದ ಬರ್ಮಣ್ಣ ಪೂಜಾರಿ, ಮನಗೂಳಿಯ ರಾಮಣ್ಣ ಪೂಜಾರಿ, ಕನ್ನtರಿನ ಬೀರಪ್ಪ ಪೂಜಾರಿ, ಇಂಗಳೇಶ್ವರದ ಗ್ಯಾನಪ್ಪ ಮುತ್ಯಾ, ಪೂಜಾರಿ ರೇವಣಸಿದ್ದ, ಪೂಜಾರಿ ಅಗಸಬಾಳ, ಹಂಚಿನಾಳದ ಬೀರಪ್ಪ ಮುತ್ಯಾ, ಕಣಿಮಣಿ ಹಾಗೂ ಬಾಗೇವಾಡಿಯ ಅನೇಕ ಪಟ್ಟದ ಪೂಜಾರಿಗಳು, ಯಲ್ಲಾಲಿಂಗ ಉಕ್ಕಲಿ, ಬಸವರಾಜ ಬಾಗೇವಾಡಿ, ಬೀರಲಿಂಗೇಶ್ವರ ಹಾಗೂ ರೇವಣಸಿದ್ದೇಶ್ವರರ ಭಕ್ತರು ಈ ಸಭೆಯಲ್ಲಿ ಪಾಲ್ಗೊಂಡು ಶ್ರೀ ಮಾಯಮ್ಮದೇವಿಯ ಕರ್ತೃಗದ್ದುಗೆಗೆ ಎಲ್ಲರೂ ವಿಶೇಷ ಅಭಿಷೇಕ ಮತ್ತು ಮಂಗಳಾರತಿ ಮಾಡಿದರು.