ವಿಜಯ ಜೋಶಿಗೆ ಮತ್ತೆ ಒಲಿದ ವಿಜಯಪುರ ಬಿಜೆಪಿ ಮಾಧ್ಯಮ ಪ್ರಮುಖ ಜವಾಬ್ದಾರಿ- ಆದೇಶ ಪತ್ರ ನೀಡಿದ ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ವಿಜಯ ಜೋಶಿ ಅವರನ್ನು ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖರನ್ನಾಗಿ ಮತ್ತೋಮ್ಮೆ ನೇಮಕ ಮಾಡಲಾಗಿದೆ.

ಕಳೆದ ಅವಧಿಯಲ್ಲಿ ಇದೇ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದ ವಿಜಯ ಜೋಶಿ ಅವರ ಕಾರ್ಯ ವೈಖರಿಗೆ ಮಾನ್ಯತೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.  ಅಲ್ಲದೇ, ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಿದ್ದಾರೆ.

ವಿಜಯ ಜೋಶಿ

 

ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಪಕ್ಷದ ಸಂಘಟನೆಗೆ ಕ್ರಿಯಾತ್ಮಕ ಕೊಡಗುೆ ನೀಡುವಿರೆಂದು ಆಶಿಸುತ್ತಾ, ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವಿರೆಂದು ಆಶಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ನೇಮಕ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌