ಬಿ.ಎಲ್.ಡಿ.ಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ A+ ಮಾನ್ಯತೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಮಂಡಳಿ (NAAC) 2023-2028ರ ಅವಧಿಗೆ A+ ಗ್ರೇಡ್ (3.28 ಅಂಕ) ಮಾನ್ಯತೆ ನೀಡಿದೆ. 

ಕಳೆದ ವರ್ಷ ಡಿಸೆಂಬರ್ 7 ಮತ್ತು 8 ರಂದು ಕಾಲೇಜಿಗೆ ಭೇಟಿ ನೀಡಿದ್ದನ್ಯಾಕ್ ಕಮಿಟಿ, ಮಹಾವಿದ್ಯಾಲಯದಲ್ಲಿರುವ ಸೌಲಭ್ಯಗಳು, ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಪ್ರಗತಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ, ಸಾಮಾಜಿಕ ಸಮನ್ವತೆಯನ್ನು ಕೂಲಕಂಷವಾಗಿ ಪರಿಶಿಲಿಸಿ ವರದಿ ಸಲ್ಲಿಸಿತ್ತು.  ತಜ್ಞರ ವರದಿ ಆದರಿಸಿ ನ್ಯಾಕ್ A+ ಗ್ರೇಡ್ ಮಾನ್ಯತೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ A ಮತ್ತು A+ಗ್ರೇಡ್ ಪ್ರಮಾಣ ಪತ್ರ ಪಡೆದಿರುವ ಕೆಲವೇ ಕಾಲೇಜುಗಳಲ್ಲಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ಒಂದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲೇಜಿನ ಈ ಸಾಧನೆಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪಾಟೀಲ, ಮುಖ್ಯ ಆಡಳಿತಾಧಿಕಾರಿ ಆರ್. ಬಿ. ಕೊಟ್ನಾಳ, ನಿರ್ದೇಶಕ ಬಿ. ಎಂ. ಪಾಟೀಲ, ಕಾರ್ಯದರ್ಶಿ ಜಿ. ಕೆ. ಪಾಟೀಲ ಮತ್ತು ಪದಾಧಿಕಾರಿಗಳು ಶ್ಲಾಘಿಸಿದ್ದು, ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ಈಗ ದೊರಕಿರುವ ಮಾನ್ಯತೆಯಿಂದಾಗಿ ಮುಂದಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಮಾನ್ಯತೆ ದೊರಕಿದೆ.  ಈ ಫಲಿತಾಂಶದಿಂದ ಮುಂದಿನ ದಿನದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಲು ಸಹಾಯಕಾರಿ ಆಗಲಿದೆ.

Leave a Reply

ಹೊಸ ಪೋಸ್ಟ್‌