ನಾನಾ ಬೇಡಿಕೆ ಈಡೇರಿಸಲು ಆಗ್ರಹ: ಕೆ.ಎಸ್.ಆರ್.ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಉಪವಾಸ ಸತ್ಯಾಗ್ರಹ

ವಿಜಯಪರ: ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮತ್ತು ಕೆ.ಎಸ್‌.ಆರ್‌.ಟಿ.ಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ವತಿಯಿಂದ ನಗರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಐ. ಐ. ಮುಶ್ರೀಫ್, 31.12.2023ರ ಮೂಲ ವೇತನದ ಶೇ. 25ರಷ್ಟು ಹೆಚ್ಚಳ ಮಾಡಿ, 01.01.2024 ರಿಂದ ವೇತನ ಶ್ರೇಣಿಗಳನ್ನು ಸಿದ್ಧಪಡಿಸಬೇಕು.  ವೇತನ ಪರಿಷ್ಕರಣೆಯಲ್ಲಿ ಎಲ್ಲಾ ಹಂತಗಳಲ್ಲೂ ಮೂಲ ವೇತನದ ಶೇ. 4ರಷ್ಟು ಹೆಚ್ಚಳವಿರಬೇಕು.  01.01.2020 ರಿಂದ ಆಗಿರುವ ಶೇ. 15 ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು.  01.01.2020 ರಿಂದ 28.02.2023ರ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ವಿಮುಕ್ತಿಯಾಗಿರುವ ಎಲ್ಲಾ ನೌಕರರಿಗೆ ನಿವೃತ್ತಿ, ಮೃತಪಟ್ಟವರು, ವಜಾಗೊಂಡವರು ಹಾಗೂ ಇತರೆ ಕಾರಣಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲಾ ನೌಕರರಿಗೂ 1ನೇ ಜನೇವರಿ 2020ರಿಂದ ಜಾರಿ ಮಾಡಿರುವ ವೇತನ ಶ್ರೇಣಿಗಳನ್ನು ಅನ್ವಯಿಸಬೇಕು.  ಅಲ್ಲದೇ, ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಅಧ್ಯಕ್ಷ ಎಂ. ಎಚ್. ಅಗರಖೇಡ ಮಾತನಾಡಿ, ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿಗಳಿಗೆ ಮತ್ತು ಇತರ ಎಲ್ಲಾ ನೌಕರರಿಗೂ, ಹಾಲಿ ಇರುವ ಭತ್ಯೆ, ಮಾಸಿಕ ಮತ್ತು ದೈನಂದಿನ(ಕ್ಯಾಷ್, ರಿಫಾಸ್ಟ್, ಬಟ್ಟಿ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ ಭತ್ಯೆ ಮತ್ತಿತರ ಭತ್ಯೆಗಳು) ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು.  ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.  ಎಲ್ಲಾ ನಿರ್ವಾಹಕರಿಗೂ ಕ್ಯಾಷಿಯರ್‌ಗಳಿಗೆ ಸಮಾನವಾದ ಕ್ಯಾಷ್ ಅಲೋವೆನ್ಸ್ ನೀಡಬೇಕು.  ಎಲ್ಲಾ ನೌಕರರಿಗೂ ಪ್ರತಿ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ರೂ. 2000 ನೀಡಬೇಕು ಸೇರಿದಂತೆ ನೌಕರರ ಎಲ್ಲ ಹಿತ ಕಾಪಾಡಬೇಕು ಎಂದು ಹೇಳಿದರು.

ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮತ್ತು ಕೆ.ಎಸ್‌.ಆರ್‌.ಟಿ.ಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಕಾರ್ಯಕರ್ತರು ವಿಜಯಪುರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಬಳಿಕ ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳಿಗೆ ಉಪವಾಸ ಸತ್ಯಾಗ್ರಹನಿರತ ಸಿಬ್ಬಂದಿ ಮನವಿ ಪತ್ರ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಎನ್‌ ಈ ಕೆ ಆರ್‌ ಟಿ ಸಿ ಎಸ್‌.ಸಿ ಮತ್ತು ಎಸ್‌. ಟಿ ಎಂಪ್ಲಾಯೀಸ್, ಕೆ ಎಸ್‌ ಆರ್‌ ಟಿ ಸಿ ಎಸ್‌.ಸಿ ಮತ್ತು ಎಸ್‌. ಟಿ ಅಸೋಸಿಯೇಷನ್ ವಿಜಯಪುರ ಅದ್ಯಕ್ಷ ರಾಚಪ್ಪ ಜಿ. ಲಿಂಗದಳ್ಳಿ, ಕೆ ಎಸ್‌ ಆರ್‌ ಟಿ ಸಿ ಎಸ್‌.ಸಿ ಮತ್ತು ಎಸ್‌.ಟಿ ಅಸೋಸಿಯೇಷನ್ ವಿಜಯಪುರ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಆರ್. ಎಂ. ಮಡ್ಡಿಮನಿ, ಕರಾರಸಾ ಸಂಸ್ಥೆ ಪ. ಜಾ ಮತ್ತು ಪ. ಪಂ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾಯದರ್ಶಿ ಬಸವರಾಜ ಭಜಂತ್ರಿ, ಆರ್. ಆರ್. ನದಾಫ್, ಶಿವಾನಂದ ಭೈಚಬಾಳ, ಅರುಣಕುಮಾರ ಹೀರೆಮಠ, ಮುಸ್ತಾಕ ಹುಂಡೇಕಾರ, ಭೀಮಪ್ಪ ಗುಳೆದವರ, ಎಚ್. ಡಿ. ಪಟ್ಟಣಶೆಟ್ಟಿ, ನಿಂಗಪ್ಪ ಕವಲಗಿ, ನೂರಅಹ್ಮದ ಸೌದಾಗರ, ಜಯಶ್ರೀ ಹೂಗಾರ, ಜಿ. ಜಿ. ಬಿರಾದಾರ, ಬಾಬನಗೋಳ, ಮುನ್ನಾ ವಿಜಯಪುರ, ಆನಂದ ತಳವಾರ, ಶಿವಾನಂದ ಹದನೂರ, ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌