ಟಾಂಗಾದಲ್ಲಿ ಕಚೇರಿಗೆ ಬಂದ ಗುಮ್ಮಟ ನಗರಿ ಮೇಯರ್- ಕಾರಣವೇನು ಗೊತ್ತಾ?

ವಿಜಯಪುರ: ಮಹಾನಗರ ಪಾಲಿಕೆ ಮೇಯರ್ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟಾಂಗಾದಲ್ಲಿ ಸಾಮಾನ್ಯ ಸಭೆಗೆ ಆಗಮಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಬೆಳಿಗ್ಗೆ 11 ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಿಗದಿಯಾಗಿತ್ತು.  ಈ ಸಂದರ್ಭದಲ್ಲಿ ಎಲ್ಲರೂ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಆಗಮನಕ್ಕೆ ಕಾಯುತ್ತಿದ್ದರು.  ಎಲ್ಲರೂ ಕಾರಿಗಾಗಿ ದಾರಿ ಕಾಯುತ್ತಿದ್ದರೆ, ಮೇಯರ್ ಮಾತ್ರ ವಿಜಯಪುರ ನಗರದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಟಾಂಗಾ ಬರುತ್ತಿರುವುದನ್ನು ಗಮನಿಸಿದರು.  ಆ ಟಾಂಗಾ […]

ಬಸವನಾಡಿನ ಕಾಂತಾ ನಾಯಕ ಸೇರಿ 44 ಜನರಿಗೆ ನಿಗಮ, ಮಂಡಳಿ ಅಧ್ಯಕ್ಷರಾಗಿ ನೇಮಕ

ಬೆಂಗಳೂರು: ಬಸವನಾಡು ವಿಜಯಪುರ ಜಿಲ್ಲೆಯ ಬಂಜಾರಾ ಸಮುದಾಯದ ನಾಯಕಿ ಕಾಂತಾ ನಾಯಕ ಸೇರಿ ರಾಜ್ಯದ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.  ಎರಡು ವರ್ಷಗಳ ಅವಧಿಗೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಆಧ್ಯಕ್ಷ ಡಿ. ಕೆ. ಶಿವಕುಮಾರ ಅವರು ಈ ಕ್ರಮ ಕೈಗೊಂಡಿದ್ದಾರೆ. ನಿಗಮ ಮಂಡಳಿಗೆ ನೂತನ ಅಧ್ಯಕ್ಷರಾದವರ ಹೆಸರು ಮತ್ತು ಅವರಿಗೆ ವಹಿಸಲಾದ ಜವಾಬ್ದಾರಿಯ ಮಾಹಿತಿ ಇಲ್ಲಿದೆ. […]