ರಾಜ್ಯದಲ್ಲಿ ಜನರ ಜೀವನಕ್ಕೆ ಗ್ಯಾರಂಟಿ ಇಲ್ಲ- ನಿಭಾಯಿಸದಾಗದಿದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ- ಯತ್ನಾಳ

ವಿಜಯಪುರ: ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಮತ್ತು ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಪ್ರಕರಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಇಂಬು ನೀಡುತ್ತಿದ್ದು, ಇವುಗಳನ್ನು ನಿಯಂತ್ರಿಸಲಾಗದಿದ್ದರೆ ಸಿಎಂ ಎಸ್. ಸಿದ್ಧರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮತ್ತು ಸಚಿವರು ಬರೀ ಗ್ಯಾರಂಟಿ, ಗ್ಯಾರಂಟಿ ಎಂದು ಜಪಿಸುತ್ತ ಲೋಕಸಭೆ ಚುನಾವಣೆ ಕಡೆಗೆ ಲಕ್ಷ್ಯ ವಹಿಸಿದ್ದಾರೆ.  ಆದರೆ, ರಾಜ್ಯದಲ್ಲಿ ಜನರ ಜೀವನಕ್ಕೆ ಗ್ಯಾರಂಟಿ ಇಲ್ಲವಾಗಿದೆ.  ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಸಿಎಂ ಎಸ್. ಸಿದ್ಧಾರಾಮಯ್ಯ ರಾಜೀನಾಮೆ ನೀಡಲಿ.  ವಿಧಾನ ಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು  ಎಂದು ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣದ ನಂತರ ಈ ಘಟನೆ ನಿಜ ಎಂದು ನಾನೇ ನೊದಲು ಟ್ವೀಟ್ ಮಾಡಿದ್ದೆ.  ಭಯೋತ್ಪಾದನಾ ಕೃತ್ಯಗಳಿಗೆ ಕರ್ನಾಟಕ ಸಂರಕ್ಷಿತ ತಾಣವಾದಂತಾಗಿದೆ.  ಪಾಕಿಸ್ತಾನ ಪರ ಘೋಷಣೆ ವಿಡಿಯೋ ಮತ್ತು ಆಡಿಯೋವನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸೋದು ಬೇಡ ಎಂದು ಹೇಳಿದ್ದೆ.  ಟೆಸ್ಟ್ ಅನಾವಶ್ಯಕ ಎಂದಿದ್ದೆ.  ಆದರೆ ಖರ್ಗೆ ಮತ್ತು ಪರಮೇಶ್ವರ ಸಮರ್ಥನೆ ಮಾಡಿದ್ದರು.  ಈ ವಿಚಾರದಲ್ಲಿ ನಾಶೀರ್ ಹುಸೇನ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂಥ ಘಟನೆಗಳು ರಾಜ್ಯದಲ್ಲಿ ಭಯೋತ್ಪಾದನೆ ಇಂಬು ಕೊಡುತ್ತಿವೆ.  ಎನ್ ಐ ಎ ತನಿಖೆ ಮಾಡಲಾಗುತ್ತಿದೆ ಬ್ರ್ಯಾಂಡ್ ಬೆಂಗಳೂರು ಅಲ್ಲಾ ಬಾಂಬ್ ಬೆಂಗಳೂರು ಎಂಬಂತಾಗಿದೆ.  ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಕಾಂಗ್ರೆಸ್ಸಿನವರು ಹೀಗೆ ಹೇಳಿದ್ದರು.  ಸಿಎಂ‌ ಸಿದ್ದರಾಮಯ್ಯ ಅವರಿಗೆ ಇವೆಲ್ಲ ನಿಭಾಯಿಸಲು ಆಗದಿದ್ದರೆ  ರಾಜೀನಾಮೆ ನೀಡು ಎಂದು ಯತ್ನಾಳ ಒತ್ತಾಯಿಸಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ

ಬೆಂಗಳೂರಿನ ರಾಮೇಶ್ವರ ಹೊಟೇಲ್ ನಲ್ಲಿ ಬಾಂಬ್ ಸ್ಪೋಟ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಪ್ರಯೋಗ ಶಾಲೆಯಾಗಿದೆ.  ಜನನಿಬೀಡ ಮಾರುಕಟ್ಟೆ ಅಥವಾ ಸಿನೆಮಾ ಹಾಲನಲ್ಲಿ ಈ ಘಟನೆ ನಡೆದಿದ್ದರೆ ಅನಾಹುತವಾಗುತ್ತಿತ್ತು.  ಇವೆಲ್ಲ ನಿಭಾಯಿಸಲು ಆಗದಿದ್ದರೆ ಮನೆಗೆ ಹೋಗಿ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ರಾಮೇಶ್ವರ ಕೆಫೆಯಲ್ಲಿ ಶುಕ್ರವಾರದ ದಿನವೇ ಬ್ಲಾಸ್ಟ್ ಮಾಡಿದ್ದಾರೆ.  ಉದ್ದೇಶಪೂರಕವಾಗಿ ಈ ಸ್ಪೋಟ ಮಾಡಿದ್ದಾರೆ.  ಅಯೋದ್ಯೆ ರಾಮಂದಿರ‌ ನಿರ್ಮಾಣವಾದ ಕಾರಣ ಹೀಗೆ ಮಾಡಿದ್ದಾರೆ.  ಇವರೆಲ್ಲ‌ ನಾಶವಾಗೋ ಕಾಲ ಬಂದಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ.  ಸಮಾನ ನಾಗರೀಕ ಕಾಯ್ದೆ ಜಾರಿ ಮಾಡುತ್ತೇವೆ.  ಒಂದು ಕುಟುಂಬಕ್ಕೆ ಎರಡೇ‌ ಮಕ್ಕಳು ಕಾನೂನು ಜಾರಿ ಮಾಡುತ್ತೇವೆ.  ಯಾರಿಗೆ ಪಾಕಿಸ್ತಾನ‌ ಪ್ರೀತಿ ಇದೆ ಅವರು ಪಾಕಿಸ್ತಾನಕ್ಕೆ ಹೋಗಲಿ.  ಪಾಕಿಸ್ತಾನಕ್ಕೆ ಪರ ಘೋಷಣೆ ಹಾಕುವವರು ಅಲ್ಲಿ ಹೋಗಿ.  ಪಾಕಿಸ್ತಾನ ಪರ ಘೋಷಣೆ ವಿಚಾರದಲ್ಲಿ ಸ್ಪೀಕರ್ ಯು. ಟಿ. ಖಾದರ ಖಡಕ್ಕಾಗಿ ಮಾತನಾಡಿ ಎಂದರು ಹೇಳಿದ್ದರು.  ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ.  ಮಾನ್ಮಾರನಲ್ಲಿ ರೋಹಿಂಗ್ಯಾಗಳನ್ನು ಹೊಡೆದು‌ ಹೊರ ಹಾಕಿದಂತೆ ಇಲ್ಲಿಯೂ ಹೊಡೆದು ಹೊರ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ;ನ್ನು ಭಜರಂಗ ದಳದ ಮೇಲೆ ಹಾಕುವವರಿದ್ದರು ಅಯೋಗ್ಯ ನಮ್ಮಕ್ಕಳು ಎಂದು ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌