ಸಮಾಜ ಸೇವಕ ಫಯಾಜ್ ಕಲಾದಗಿಗೆ ನೇಪಾಳ ದೇಶದ ಪ್ರಶಸ್ತಿ- ಯಾವುದು ಗೊತ್ತಾ?

ವಿಜಯಪುರ: ಸಮಾಜ ಸೇವಕ ಫಯಾಜ್ ಕಲಾದಗಿ ಅವರಿಗೆ ನೇಪಾಳ ದೇಶದ ಬಿರಾಟ ನಗರದದ ಸಮತಾ ಸಾಹಿತ್ಯ ಪ್ರತಿಷ್ಠಾನ ಅಂತಾರಾಷ್ಟ್ರೀಯ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಘೋಷಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರವವ ಸಮತಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಶಿವನಾರಾಯಣ ಸಿಂಗ್ಲೆ ಮತ್ತು ಕಾರ್ಯದರ್ಶಿ ಸರಿತಾ ತುಳದಾರ, ಈ ಬಾರಿಯ ಅತ್ಯುತ್ತಮ ಸಮಾಜ ಸೇವಕ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಫಯಾಜ್ ಕಲಾದಗಿ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯಪುರದ ಸಮಾಜ ಸೇವಕ ಫಯಾಜ್ ಕಲಾದಗಿ ಅವರಿಗೆ ಘೋಷಿಸಲಾಗಿರುವ ಪ್ರಶಸ್ತಿ.

ಫಯಾಜ ಕಲಾದಗಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌