ಗ್ರಾಫಿಕ್ ಡಿಸೈನ್ ಬಹುಬೇಡಿಕೆಯ ಕಲೆಯಾಗಿದೆ- ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ

ವಿಜಯಪುರ: ಗ್ರಾಫಿಕ್ ಡಿಸೈನ್ ಎನ್ನುವುದು ಪ್ರಸ್ತುತ ದಿನಮಾನದಲ್ಲಿ ಬಹುಬೇಡಿಕೆಯ ಕಲೆಯಾಗಿದೆ. ಇದರ ಕುರಿತಾದ ಈ ಕಾರ್ಯಾಗಾರದಲ್ಲಿ ನೀವೆಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾಲಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದ್ದಾರೆ. 

ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ಹಾಗೂ ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಗ್ರಾಫಿಕ್ ಡಿಸೈನಿಂಗ್ ಕಾರ್ಯಗಾರ ಉದ್ಘಾಟಿಸಿ  ಅವರು ಮಾತನಾಡಿದರು.

ಕ್ಷಣಕ್ಷಣಕ್ಕೂ ತಂತ್ರಜ್ಞಾನದ ವೇಗ ಹೆಚ್ಚುತ್ತಿದೆ. ಅದರ ವೇಗದಲ್ಲಿಯೇ ನಾವೆಲ್ಲರೂ ಸಾಗಬೇಕಾದ ಅನಿವಾರ್ಯತೆ ನಮ್ಮೆಲ್ಲರಲ್ಲಿಯೂ ಇದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಲ್ಲ ಕೌಶಲ್ಯಗಳನ್ನು ಕಲಿತು ನಮ್ಮ ವೃತ್ತಿ ಜೀವನವನ್ನು ಸುಧಾರಿಸಿಕೊಳ್ಳಬೇಕು. ಅದರಂತೆ ಇಂದಿನ ದಿನಮಾನದಲ್ಲಿ ಗ್ರಾಫಿಕ್ ಡಿಸೈನ್ ಅತೀ ಮುಖ್ಯವಾದದ್ದು. ಪ್ರತಿ ಹಂತದಲ್ಲಿಯೂ ನಮ್ಮ ಜೀವನದಲ್ಲಿ ಗ್ರಾಫಿಕ್ ಡಿಸೈನ್ ಹಾಸುಹೊಕ್ಕಾಗಿದೆ.  ಮತ್ತು ಈ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ನಿಮಗೆ ಈ ಕಾರ್ಯಾಗಾರ ಹೊಸತನ್ನು ಕಲಿಸಲಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಮಹಿಳಾ ವಿವಿಯಲ್ಲಿ ನಡೆದ ಗ್ರಾಫಿಕ್ಸ್ ಡಿಸೈನಿಂಗ್ ಕಾರ್ಯಾಗಾರ ಉದ್ಘಾಟಿಸಿ ಶಂಕರಗೌಡ ಸೋಮನಾಳ ಮಾತನಾಡಿದರು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಜಾವಾಣಿ ಪತ್ರಿಕೆಯ ಗ್ರಾಫಿಕ್ ಡಿಸೈನರ್ ಮಂಜುನಾಥ ಹುಲಕೊಪ್ಪದ ಮಾತನಾಡಿ, ಸುದ್ದಿಯನ್ನು ಕಡಿಮೆ ಸಮಯದಲ್ಲಿ ಜನರಿಗೆ ಮನದಟ್ಟು ಮಾಡಿಸುವಂತಹದ್ದು ಮತ್ತು ಸಂದೇಶಗಳನ್ನು ಸಂಜ್ಞೆಯ ಮೂಲಕ ವ್ಯಕ್ತಪಡಿಸುವುದೇ  ಗ್ರಾಫಿಕ್ಸ್ ಡಿಸೈನಿಂಗ್. ಮಾಧ್ಯಮ ಕ್ಷೇತ್ರ ಸೇರಿದಂತೆ ಎಲ್ಲ ರಂಗದಲ್ಲಿಯೂ ಇದರ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮಿದೇವಿ ವೈ. ಮಾತನಾಡಿ, ನಮ್ಮ ಜೀವನದಲ್ಲಿ ನಮ್ಮ ಕಲಿಕೆಯ ಜೊತೆಗೆ ಬೇರೆ ಬೇರೆ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು.  ಇದರಿಂದ ನಮ್ಮ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗುತ್ತದೆ. ಇನ್ನು ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಗ್ರಾಫಿಕ್ಷನ್ನು ಕಲಿತರೆ ಪರಾವಲಂಬನೆ ಬೇಕಾಗುವುದಿಲ್ಲ.  ಸ್ವಾವಲಂಬಿಯಾಗಿ ಬದುಕಬಹುದು ಎಂದು ತಿಳಿಸಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ನಾವು ಯಾವಾಗಲೂ ಇತರರಿಗಿಂತ ಭಿನ್ನವಾಗಿ ಕೆಲಸ ಮಾಡಬೇಕು. ಅದಕ್ಕೆ ನಾವು ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡಿರಬೇಕು. ಈ ಗ್ರಾಫಿಕ್ ಡಿಸೈನಿಂಗ್ ಕೌಶಲ್ಯವನ್ನು ಕಲಿತು ನೀವು ಸಹ ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಗ್ರಾಫಿಕ್ ಡಿಸೈನ್ ಬಹು ಬೇಡಿಕೆಯ ಕ್ಷೇತ್ರ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎನ್ನುವ ಕಾರಣದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದ್ದು, ಈ ವೃತ್ತಿಯಲ್ಲಿ ಆಸಕ್ತಿ ಹೊಂದಿದವರು ಮುಂದಿನ ದಿನಗಳಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಇದು ಸಹಾಯಕವಾಗಿದೆ.  ಅಲ್ಲದೇ, ಜೀವನದಲ್ಲಿ ಹೊಸದೊಂದು ಅಧ್ಯಾಯ ಬರೆಯಲು ಈ ಕಾರ್ಯಾಗಾರ ಮುನ್ನುಡಿಯಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಾನಾ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಸ್ನಾತಕ ಸ್ನಾತಕೋತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಶಿಲ್ಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ನಿಗಾರ ಸುಲ್ತಾನಾ ಸ್ವಾಗತಿಸಿದರು.  ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕವಾಗಿ ಮಾನತಾಡಿದರು.  ಸುಷ್ಮಾ ಪವಾರ ನಿರೂಪಿಸಿದರು.  ದೀಪಾ ತಟ್ಟಿಮನಿ ವಂದಿಸಿದರು.

Leave a Reply

ಹೊಸ ಪೋಸ್ಟ್‌