ಕೆಲಕಾಲ ಸ್ಥಬ್ದವಾಗಿ ಆತಂಕ ಸೃಷ್ಠಿಸಿದ ಫೇಸ್ ಬುಕ್, ಇನಸ್ತಾಗ್ರಾಂ- ಗ್ರಾಹಕರಿಗೆ ಗಾಬರಿಯೋ ಗಾಬರಿ

ವಿಜಯಪುರ: ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕೆಲಕಾಲ ಸ್ತಬ್ದವಾಗಿದ್ದು, ಬಹುತೇಕ ಖಾತೆದಾರರಿಗೆ ಆತಂಕ ಸೃಷ್ಠಿಸಿದ ಘಟನೆ ಇಂದು ರಾತ್ರಿ ನಡೆಯಿತು.  ಸುಮಾರು ಹೊತ್ತು Session expired ಎಂದು ಕಾಣಿಸಿಕೊಂಡ ಸಂದೇಶ ಫೇಸ್ ಬುಕ್ ಬಳಕೆದಾರರಿಗೆ ಆತಂಕ ಸೃಷ್ಠಿ ಮಾಡಿತ್ತು. ಕೆಲವರು ಮತ್ತೆ ಮತ್ತೆ ಪಾಸವರ್ಡ್ ಹಾಕಿದರೂ ಲಾಗಿನ್ ಆಗುತ್ತಿರಲಿಲ್ಲ.  ಮತ್ತೆ ಕೆಲವರು, ಆ್ಯಪ್ ನ್ನೇ ಅನಇನಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನಸ್ಟಾಲ್ ಮಾಡಿದರೂ ಪ್ರಯೋಜನವಾಗದೆ, ತಮ್ಮ ಖಾತೆ ಹ್ಯಾಕ್ ಆಗಿರಬಹುದು ಎಂದು ಆಂತಕ ವ್ಯಕ್ತಪಡಿಸಿದರು.  ಹಲವಾರು ಜನರು […]

ಎನ್.ಟಿ.ಪಿ.ಸಿಯಿಂದ ಐಟಿಐ ಸಂಸ್ಥೆಗೆ ರೂ. 90 ಲಕ್ಷ ರೂ. ಅನುದಾನ- ವಿದ್ಯಾರ್ಥಿಗಳಿಗಾಗಿ ಎರಡಂತಸ್ತಿನ ಕಟ್ಟಡ ನಿರ್ಮಾಣ- ಶಾಸಕ ಯತ್ನಾಳ

ವಿಜಯಪುರ: ನಗರದ ಐಟಿಐ ಸಂಸ್ಥೆಗೆ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯಾರ್ಥಿಗಳ ಸರ್ವೋತ್ತಮ ಅಭಿವೃದ್ಧಿಗಾಗಿ ಎರಡು ಅಂತಸ್ಥಿನ ಕಟ್ಟಡ ನಿರ್ಮಿಸಲು ರೂ. 90 ಲಕ್ಷ ಅನುದಾನ ನೀಡಿದೆ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಎನ್.ಟಿ.ಪಿಸಿ ಸಹಯೋಗದಲ್ಲಿ ಆರ್ ಆ್ಯಂಡ್ ಆರ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಒಇ ಕಟ್ಟಡದ ಮೊದಲನೆಯ ಹಾಗೂ ಎರಡನೆಯ ಮಹಡಿ ಮೇಲೆ ಬೋಧನಾ ಕೊಠಡಿ ಹಾಗೂ […]

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಡಾ. ಎಲ್. ಎಚ್. ಬಿದರಿ ನೇತೃತ್ವದ ಹೋರಾಟ ಸಮಿತಿ ಭೇಟಿ

ವಿಜಯಪುರ: ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಡಾ. ಎಚ್. ಎಚ್. ಬಿದರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಮಿತಿ ಸದಸ್ಯರು, ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂತಸ ವ್ಯಕ್ತಪಡಿಸಿದರು.  ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಮಹೇಶ ನಿಲ್ದಾಣದಲ್ಲಿರುವ ಎಲ್ಲ ವಿಭಾಗಗಳನ್ನು ತೋರಿಸಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.  ಭದ್ರತಾ ವಿಭಾಗದ ಮುಖ್ಯಸ್ಥ ಭೀಮಪ್ಪಾ […]

ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ 6ನೇ ನಗರ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ 6ನೇ ನಗರವಾಗಿರುವುದು ಹೆಮ್ಮೆಯ ವಿಷಯ.  ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಇದಕ್ಕೆ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ಒಳಚರಂಡಿ ನರ‍್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ […]

ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಸರಿಯಾಗಿ ಬಳಸಿಕೊಳ್ಳಬೇಕು- ಪ್ರೊ. ಬಿ. ಕೆ. ತುಳಸಿಮಾಲಾ

ವಿಜಯಪುರ: ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಅವಶ್ಯಕ ಹಾಗೂ ಇರುವ ಮಾಹಿತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಹೇಳಿದ್ದಾರೆ.  ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವೃತ್ತಿ ಮಾರ್ಗದರ್ಶನ ಕೋಶ ಮತ್ತು ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವೃತ್ತಿ ಅನ್ವೇಷಕರಿಗೆ ವೃತ್ತಿ ಮಾಹಿತಿ ಬೆಂಬಲ ಕುರಿತ ಒಂದು […]