ವಿಜಯಪುರ: ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕೆಲಕಾಲ ಸ್ತಬ್ದವಾಗಿದ್ದು, ಬಹುತೇಕ ಖಾತೆದಾರರಿಗೆ ಆತಂಕ ಸೃಷ್ಠಿಸಿದ ಘಟನೆ ಇಂದು ರಾತ್ರಿ ನಡೆಯಿತು. ಸುಮಾರು ಹೊತ್ತು Session expired ಎಂದು ಕಾಣಿಸಿಕೊಂಡ ಸಂದೇಶ ಫೇಸ್ ಬುಕ್ ಬಳಕೆದಾರರಿಗೆ ಆತಂಕ ಸೃಷ್ಠಿ ಮಾಡಿತ್ತು.
ಕೆಲವರು ಮತ್ತೆ ಮತ್ತೆ ಪಾಸವರ್ಡ್ ಹಾಕಿದರೂ ಲಾಗಿನ್ ಆಗುತ್ತಿರಲಿಲ್ಲ. ಮತ್ತೆ ಕೆಲವರು, ಆ್ಯಪ್ ನ್ನೇ ಅನಇನಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನಸ್ಟಾಲ್ ಮಾಡಿದರೂ ಪ್ರಯೋಜನವಾಗದೆ, ತಮ್ಮ ಖಾತೆ ಹ್ಯಾಕ್ ಆಗಿರಬಹುದು ಎಂದು ಆಂತಕ ವ್ಯಕ್ತಪಡಿಸಿದರು. ಹಲವಾರು ಜನರು ತಮ್ಮ ಆತ್ಮೀಯರಿಗೆ ಕರೆ ಮಾಡಿ, ನಿಮ್ಮ ಫೇಸ್ ಬುಕ್ ಓಪನ್ ಆಗುತ್ತಿದೆಯಾ ಎಂದು ಕೇಳಿದ್ದೇ ಕೇಳಿದ್ದು. ವಾಟ್ಸಾಪ್ ಗ್ರುಪ್ ಗಳಲ್ಲಿಯೂ ಈ ಕುರಿತು ಸಂದೇಶಗಳು ಹರಿದಾಡಿದವು. ತಮ್ಮ ಮನೆಯಲ್ಲಿ ಯಾರಾದರೂ ಕಾಣಿಸದಿದ್ದರೂ ತಲೆಕೆಡಿಸಿಕೊಳ್ಳದವರು, ಇವೆರಡೂ ಸಾಮಾಜಿಕ ಜಾಲತಾಣಗಳು ಕೆಲಕಾಲ ಬಂದ್ ಆಗಿದ್ದನ್ನು ಕಂಡು ದೊಡ್ಡ ಅನಾಹುತವೇ ಆಗಿದೆ. ತಮ್ಮ ವೈಯಕ್ತಿಕ ಮಾಹಿತಿ ಕಳ್ಳತನವಾಗಿರಬಹುದು ಎಂದು ಗೊಣಗಿದ್ದೂ ಸುಳ್ಳಲ್ಲ.
ಅಂತೂ ಸುಮಾರು ಹೊತ್ತಿನ ನಂತರ ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕಾರ್ಯಾರಂಭ ಮಾಡಿದ್ದು, ಖಾತೆದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಹೌದು. ಕೆಲಕಾಲ ಸಾಮಾಜಿಕ ಜಾಲತಾಣಗಳು ಬಂದ್ ಆದರೆ, ಪರದಾಡುವ ಖಾತೆದಾರರು, ತಮ್ಮ ವೈಯಕ್ತಿಕ ಜೀವನಕ್ಕೂ ನೀಡದಷ್ಟು ಮಹತ್ವವನ್ನು ಈಗ ಈ ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತರಾಗಿರುವುದು ಮಾತ್ರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿರುವುದಂತೂ ಸತ್ಯ.