3 ಬಾರಿ ಕುತ್ತಿನಿಂದ ಪಾರಾದ ಸಂಸದ ಜಿಗಜಿಣಗಿ- ಸೌಂದತ್ತಿ ಯಲ್ಲಮ್ಮನ ದರ್ಶನ ಪಡೆದು ಬಸವನಾಡಿಗೆ ವಾಪಸ್- ಮಹಾಶಿವರಾತ್ರಿ ನಂತರ ಸಾರ್ವಜನಿಕರ ಭೇಟಿ
ವಿಜಯಪುರ: ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಶ್ಚ್ಯಾರ್ಜ್ ಆಗಿದ್ದಾರೆ. ಮೆದುಳಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದ, ಅವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು, ಬುಧವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಬಸವನಾಡು ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ. ಈ ಕುರಿತು ಬಸವನಾಡು ವೆಬ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿಗೆ ಹೋದಾಗ ಏರಪೋರ್ಟ್ ನಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಬೆಂಗಳೂರಿನಲ್ಲಿ ಮನೆಗೆ […]
ಸಂಸದ ರಮೇಶ ಜಿಗಜಿಣಗಿ ಪ್ರಯತ್ನದ ಫಲ- ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ- ಬೆಳ್ಳುಬಿ, ಶಹಾಪುರ ಅವರಿಂದ ಚಾಲನೆ
ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ನಿಡಗುಂದಿ ತಾಲೂಕಿನ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆ ಆರಂಭವಾಗಿದೆ. ಬೆಳಿಗ್ಗೆ ನಿಲ್ದಾಣಕ್ಕೆ ಆಗಮಿಸಿದ ಶಿರಡಿ ಸಾಯಿನಗರ- ಮೈಸೂರು ರೈಲು ನಿಲುಗಡೆಗೆ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮತ್ತು ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಹಸಿರು ನಿಶಾನೆ ತೋರಿಸಿದರು. ಬೆ. 10.20ಕ್ಕೆ ಆಲಮಟ್ಟಿ ರೈಲು ನಿಲ್ದಾಣಕ್ಕೆ ಆಗಮಿಸಿದ 16218 ಈ ರೈಲು ಒಂದು ನಿಮಿಷ ನಿಲುಗಡೆಯಾಯಿತು. ಇದೇ ರೀತಿ ಯಶವಂತಪುರ- ಬಿಕಾನೇರ-ಯಶವಂತಪುರ […]
ಮಕ್ಕಳ ಸೂಪ್ತ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ: ಜಿಲ್ಲಾಧಿಕಾರಿ ಟಿ. ಭೂಬಾಲನ್
ವಿಜಯಪುರ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಮಗುವಿನಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ […]
ಸಿಂದಗಿ ಮತಕ್ಷೇತ್ರಾದ್ಯಂತ ತೆರಳಿ ಸ್ವಗ್ರಾಮ ಯತ್ನಾಳಕ್ಕೆ ಮರಳಿದ ಜೋಡೆತ್ತಿನ ರೈತರ ನಂದಿ ಯಾತ್ರೆ
ವಿಜಯಪುರ: ಎತ್ತುಗಳ ಸಂತತಿಯನ್ನು ಉಳಿಸಿ ಬೆಳೆಸುವ ಸಂದೇಶವನ್ನು ಹೊತ್ತು ಯತ್ನಾಳ ಗ್ರಾಮದ ರೈತರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿ ರಥ ಏಳು ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ತೆರಳಿ ಸ್ವಗ್ರಾಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಯತ್ನಾಳ ರೈತರು ಒಂದು ವಾರಗಳ ಕಾಲ ಸಿಂದಗಿ ಮತಕ್ಷೇತ್ರಾದ್ಯಂತ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿದ್ದಾರೆ. ಸುಮಾರು 200 ಕಿಲೋಮೀಟರ್ ನಡೆದ 11 ಜೋಡೆತ್ತುಗಳ ಗಾಡಿಗಳು ತಾಂಬಾ, ಬಂಥನಾಳ, ಚಾಂದಕವಟೆ, ಸಿಂದಗಿ ಹಾಗೂ […]