3 ಬಾರಿ ಕುತ್ತಿನಿಂದ ಪಾರಾದ ಸಂಸದ ಜಿಗಜಿಣಗಿ- ಸೌಂದತ್ತಿ ಯಲ್ಲಮ್ಮನ ದರ್ಶನ ಪಡೆದು ಬಸವನಾಡಿಗೆ ವಾಪಸ್- ಮಹಾಶಿವರಾತ್ರಿ ನಂತರ ಸಾರ್ವಜನಿಕರ ಭೇಟಿ

ವಿಜಯಪುರ: ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಶ್ಚ್ಯಾರ್ಜ್ ಆಗಿದ್ದಾರೆ.

ಮೆದುಳಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದ, ಅವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು, ಬುಧವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಬಸವನಾಡು ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ.

ಈ ಕುರಿತು ಬಸವನಾಡು ವೆಬ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿಗೆ ಹೋದಾಗ ಏರಪೋರ್ಟ್ ನಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು.  ಬೆಂಗಳೂರಿನಲ್ಲಿ ಮನೆಗೆ ವಾಪಸ್ಸಾಗಿ ಮಧ್ಯರಾತ್ರಿ 3 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದೆ.  ಆಗ ತಪಾಸಣೆ ನಡೆಸಿದ್ದ ವೈದ್ಯರು ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡಿದ್ದರು.

ಬೆಳಗಾವಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಸುಕ್ಷೇತ್ರ ಸೌಂದತ್ತಿಗೆ ಆಗಮಿಸಿದ ಸಂಸದ ರಮೇಶ ಜಿಗಜಿಣಗಿ ಯಲ್ಲಮ್ಮ ತಾಯಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದರು.  ಈ ಸಂದರ್ಭದಲ್ಲಿ ಮಂದಿರದ ಆಡಳಿತ ಮಂಡಳಿ ಸದಸ್ಯರು, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮುಂತಾದವರು ಉಪಸ್ಥಿತರಿದ್ದರು.

ನಂತರ ಫೆಬ್ರವರಿ 16 ಮತ್ತು 17 ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಗಿ ಹೋಗಿ ಬಾಗಲಕೋಟೆ ಸಂಸದ ಬಿ. ಸಿ. ಗದ್ದಿಗೌಡರ ಜೊತ ವಿಜಯಪುರಕ್ಕೆ ವಾಪಸ್ ಬಂದಿದ್ದೆ.  ಅದಾದ ಬಳಿಕ ವಿಪರೀತ ತಲೆ ನೋವಿನ ಸಮಸ್ಯೆ ಎದುರಾಗಿತ್ತು.  ಈ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನೀಡಿ ಪಡೆದು, ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದೆ.  ಔಷಧಿಯ ಮೇಲೆ ಸಮಸ್ಯೆ ಬಗೆಹರಿಯಬಹುದು ಎಂದುಕೊಂಡಿದ್ದೆ.

ನಂತರ ಮತ್ತೆ ಕೆಲಸದ ನಿಮಿತ್ಯ ಮುಂಬೈಗೆ ಹೋಗಿ ವಾಪಸ್ಸಾದ ಬಳಿಕ ಆರೋಗ್ಯ ಸಮಸ್ಯೆ ಎದುರಾಯಿತು.  ಆಗ ವೈದ್ಯರು ಸಣ್ಣ ಪ್ರಮಾಣದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆ ಹೇಳಿದ್ದರಿಂದ ಒಪ್ಪಬೇಕಾಯಿತು.  ಈಗ ಸಂಪೂರ್ಣ ಗುಣಮುಖನಾಗಿದ್ದೇನೆ.

ಬೆಳಗಾವಿಯಿಂದ ವಾಪಸ್ಸಾಗುವಾಗ ಮನೆದೇವರು ಸೌಂದತ್ತಿ ಯಲ್ಲಮ್ಮ ತಾಯಿಯ ದರ್ಶನ ಪಡೆದು ಬಂದಿದ್ದೇನೆ.  ಮಹಾಶಿವರಾತ್ರಿಯ ನಂತರ ಸಾರ್ವಜನಿಕರನ್ನು ಭೇಟಿ ಮಾಡುತ್ತೇನೆ.  ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು  ಹೇಳಿದರು.

ದೇವರ ಕೃಪೆ, ಮತದಾರರ ಪ್ರಾರ್ಥನೆ ಹಾಗೂ ಹಿತೈಷಿಗಳ ಶುಭ ಹಾರೈಕೆಗಳಿಂದ ಮೂರು ಬಾರಿ ಕುತ್ತಿನಂದ ಪಾರಾಗಿ ಬಂದಿದ್ದೇನೆ ಎಂದು ರಮೇಶ ಜಿಗಜಿಣಗಿ ಹೇಳಿ ಭಾವುಕರಾಗಿದ್ದು, ಅವರ ಜನಪರ ಪ್ರೀತಿಗೆ ಸಾಕ್ಷಿಯಾಗಿತ್ತು.

Leave a Reply

ಹೊಸ ಪೋಸ್ಟ್‌