ಸಂಸದ ರಮೇಶ ಜಿಗಜಿಣಗಿ ಪ್ರಯತ್ನದ ಫಲ- ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ- ಬೆಳ್ಳುಬಿ, ಶಹಾಪುರ ಅವರಿಂದ ಚಾಲನೆ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ನಿಡಗುಂದಿ ತಾಲೂಕಿನ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆ ಆರಂಭವಾಗಿದೆ.  ಬೆಳಿಗ್ಗೆ ನಿಲ್ದಾಣಕ್ಕೆ ಆಗಮಿಸಿದ ಶಿರಡಿ ಸಾಯಿನಗರ- ಮೈಸೂರು ರೈಲು ನಿಲುಗಡೆಗೆ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮತ್ತು ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಹಸಿರು ನಿಶಾನೆ ತೋರಿಸಿದರು.

ಬೆ. 10.20ಕ್ಕೆ ಆಲಮಟ್ಟಿ ರೈಲು ನಿಲ್ದಾಣಕ್ಕೆ ಆಗಮಿಸಿದ 16218 ಈ ರೈಲು ಒಂದು ನಿಮಿಷ ನಿಲುಗಡೆಯಾಯಿತು.  ಇದೇ ರೀತಿ ಯಶವಂತಪುರ- ಬಿಕಾನೇರ-ಯಶವಂತಪುರ ಎಕ್ಸಪ್ರೆಸ್ ರೈಲು, ಮುಂಬೈ-ಹೊಸಪೇಟೆ-ಮುಂಬೈ ಎಕ್ಸಪ್ರೆಸ್ ರೈಲುಗಳು ಕೂಡ ಇನ್ನು ಮುಂದೆ ಆಲಮಟ್ಟಿಯಲ್ಲಿ ಒಂದು ನಿಮಿಷ ನಿಂತು ಮುಂದೆ ಪ್ರಯಾಣ ಆರಂಭಿಸಲಿವೆ.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದಿಂದಾಗಿ ಆಲಮಟ್ಟಿಯಲ್ಲಿ ಎಕ್ಸಪ್ರೆಸ್ ರೈಲುಗಳು ನಿಲುಗಡೆಗೆ ಕೇಂದ್ರ ರೇಲ್ವೆ ಇಲಾಖೆ ಸ್ಪಂದಿಸಿದ್ದು, ಇದರಿಂದ ರೈಲು ಪ್ರಯಾಣಿಕರಿಗೆ ಅನುಕೂಲವಾಗಿದೆ.  ಅಷ್ಟೇ ಅಲ್ಲ, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ರೈಲು ಹೋರಾಟ ಸಮಿತಿಯ ಅಶೋಕ ಹಳ್ಳೂರ ಮಾತನಾಡಿ, ಸಂಸದರಿಗೆ ಅಭಿನಂದನೆ ಸಲ್ಲಿಸಿದರು.

ಕಾಯದರ್ಶಿ ಈರಣ್ಣ ಅಳ್ಳಗಿ ಮಾತನಾಡಿ ವಿಜಯಪುರ-ತಿರುಪತಿ-ಚೆನೈ, ವಿಜಯಪುರ-ಗೋವಾ, ರೈಲುಗಳನ್ನು ಆದಷ್ಟು ಬೇಗನೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.  ಈ ಸಂಧರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಸತೀಶ ವಿಶ್ವನಾಥ ಭಾವಿ, ಸದಸ್ಯರಾದ ಭಾವೇಶ ಪೋರವಾಲ, ಸಾಗರ ಮೋಗಲಿ, ಮಹೇಶ ಭಾವಿ ಮುಂತಾದವರು ಉಪಸ್ಥತರಿದ್ದರು.

Leave a Reply

ಹೊಸ ಪೋಸ್ಟ್‌